ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವರು ಸ್ಮಶಾನದಲ್ಲಿ ರಾತ್ರಿ ಕಳೆದಿದ್ದೇಕೆ? ಇಲ್ಲಿದೆ ಉತ್ತರ

By ಒನ್ ಇಂಡಿಯಾ ಸಿಬ್ಬಂದಿ
|
Google Oneindia Kannada News

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ತಿಕ್ಕಾಟ ಆರಂಭವಾಗಿದೆ. ಇದಕ್ಕೂ ಮುನ್ನ ಉತ್ತರ ಕರ್ನಾಟಕ ಭಾಗದ ಪ್ರಮುಖ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಕತ್ ಸುದ್ದಿಯಲ್ಲಿದ್ದರು. ಸ್ಮಶಾನದಲ್ಲಿ ರಾತ್ರಿ ವೇಳೆ ನೆಲೆಸಿ ಮೌಢ್ಯಗಳನ್ನು ತೊಡೆದು ಹಾಕಲು ಯತ್ನಿಸಿದ್ದರು. ಇಷ್ಟಕ್ಕೂ ಅಬಕಾರಿ ಸಚಿವರ ಈ ಪ್ರಯತ್ನದ ಹಿಂದಿನ ಉದ್ದೇಶದ ಬಗ್ಗೆ ಒನ್ ಇಂಡಿಯಾ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ.

ಸಮಾಜದಲ್ಲಿರುವ ಮೌಢ್ಯ, ಮೂಢನಂಬಿಕೆಗಳನ್ನು ದೂರಮಾಡಲು ಮುಂದಾಗಿರುವ ಅಬಕಾರಿ ಸಚಿವ ಮತ್ತು ಬೆಳಗಾವಿ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರು ಡಿ.6 ರಂದು ವೈಕುಂಠಧಾಮ ಸ್ಮಶಾನ ಭೂಮಿಯಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದರು. [ಮರಾಠಿಗರ ಮಹಾಮೇಳಾವದಲ್ಲಿ ಎಂಕ, ನೋಣ ಸೀನ]

ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಗೊತ್ತೇ ಇದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಪ್ರಯತ್ನಕ್ಕೆ ಮುಂದಾಗಿ ಜನರ ಮನಸ್ಸಿನಲ್ಲಿರುವ ಮೌಢ್ಯವನ್ನು ತೊಡೆದು ಹಾಕುವುದು ನನ್ನ ಉದ್ದೇಶವಾಗಿತ್ತು. ದೆವ್ವ ಭೂತ ಕಥೆಗಳಿಗೇನು ಈ ಭಾಗದಲ್ಲಿ ಕಡಿಮೆಯಿಲ್ಲ.

Karnataka Excise minister Satish Jarkiholi spends night at grave yard: He reveals why he did so

ಅದರೆ, ಈ ಬಗ್ಗೆ ಜನರಿಗೆ ಬಾಯಿ ಮಾತಿನಲ್ಲಿ ವಿವರಿಸುವುದಕ್ಕಿಂತ ಪ್ರಾಯೋಗಿಕವಾಗಿ ಅವರನ್ನು ಇಂಥ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿತ್ತು.ಜನರ ಈ ಮೂಢನಂಬಿಕೆಗಳೇ ಹಿಂದುಳಿದ ಜಾತಿ ವರ್ಗಗಳಿಗೆ ನ್ಯಾಯ ಸಿಗದಂತೆ ಮಾಡುತ್ತಿದೆ. ಮೂಢನಂಬಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ನಾನು ಅಧಿಕಾರದಲ್ಲಿರಲಿ ಅಥವಾ ಅಧಿಕಾರ ಕಳೆದುಕೊಳ್ಳಲಿ ಹೋರಾಟ ನಿರಂತರ. ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ.

ಬಿಲ್ ಗೇಟ್ಸ್ ಲಕ್ಷ್ಮಿ ದೇವಿಯಲ್ಲಿ ನಂಬಿಕೆ ಇಟ್ಟಿದ್ದಾರಾ
ಜಗತ್ತಿನ ಅತಿ ಶ್ರೀಮಂತ ಹಾಗೂ ದಾನಿಗಳಲ್ಲಿ ಒಬ್ಬನಾದ ಬಿಲ್ ಗೇಟ್ಸ್ ಏನು ಭಾರತದ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯ ಭಕ್ತನಲ್ಲ, ಅದರೂ ಆತನ ಬಳಿ ಸಾಕಷ್ಟು ಹಣವಿದೆ. ಇರುವ ಹಣವನ್ನು ಈಗ ದಾನ ಮಾಡಿ ಖರ್ಚು ಮಾಡುತ್ತಿದ್ದಾನೆ. ಇದು ಏನನ್ನು ಸೂಚಿಸುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸದಿದ್ದರೂ ನೀವು 500 ಕೋಟಿ ರು ಗೂ ಅಧಿಕ ವ್ಯವಹಾರ ನಡೆಸಿ ಯಶಸ್ವಿಯಾಗಲು ಸಾಧ್ಯ.[ಮೊದಲ ದಿನದ ಕಲಾಪದ ಮುಖ್ಯಾಂಶಗಳು]

ಸ್ಮಶಾನದಲ್ಲಿ ಭೋಜನ ಸರಿಯೇ?
ಊರಿನ ಬೇರೆ ಎಲ್ಲಾ ಜಾಗದಂತೆ ಸ್ಮಶಾನ ಕೂಡಾ ಎಂಬುದನ್ನು ಮರೆಯಬಾರದು. ನಾವು ಕಾರ್ಯಕ್ರಮ ನಡೆಸಿದ್ದು ಒಂದು ಪುರಾತನ ಸ್ಮಶಾನದಲ್ಲಿ, ಈ ಸ್ಮಶಾನಕ್ಕೂ ಒಂದು ಇತಿಹಾಸವಿದೆ. ನಾನು ಹಾಗೂ ನನ್ನ ಸಹಚರರು ಇಲ್ಲಿ ಸಹಭೋಜನ ನಡೆಸಿದೆವು. ಇದೇ ರೀತಿ ಕಾರ್ಯಕ್ರಮಗಳು ಇನ್ನೂ ಅನೇಕ ಕಡೆ ನಡೆಸಬೇಕಿದೆ. ಜನ ಜಾಗೃತಿ ಹೆಚ್ಚಾದಂತೆ ಸ್ಮಶಾನದ ಬಗ್ಗೆ ಇರುವ ಮೂಢನಂಬಿಕೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದರು.

Satish's Invite

ಸಚಿವ ಪ್ರಯತ್ನ ಸಫಲವಾಗಿದೆಯೆ?
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೌಢ್ಯ ವಿರೋಧಿ ಪ್ರಯತ್ನಕ್ಕೆ ಬೆಂಗಳೂರಿನಿಂದ ಒಂದಷ್ಟು ಮೆಚ್ಚುಗೆ ಮಾತುಗಳು, ಬೆಂಬಲ ಸಿಕ್ಕಿದ್ದೇನೋ ನಿಜ. ಆದರೆ, ಸ್ಥಳೀಯರಿಂದ ಅಂಥ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ ಎಂಬುದು ಗಮನಾರ್ಹ. ಹಲವಾರು ಜನ ಇದೊಂದು 'ಪಬ್ಲಿಕ್ ಸ್ಟಂಟ್' ಎಂದಿದ್ದಾರೆ. ಸ್ಮಶಾನದಾಗ ಇರೋಹಾಂಗಿದ್ರಾ ಇರ್ಲಿ ಅದ್ರಾ ನಮ್ ನಂಬಿಕೆ ತಂಟೆಗ್ ಬರೋದು ಬ್ಯಾಡ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. [ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ]

ಎಷ್ಟಾದರೂ ಸಕ್ಕರೆ ಕಾರ್ಖಾನೆ ಮಾಲೀಕ ಸತೀಶ್ ಜಾರಕಿಹೊಳಿ ಅವರ ಮೇಲೆ ಕಬ್ಬು ಬೆಳೆಗಾರರ ಕೋಪ ಇರುವುದು ಸಹಜವಾಗಿದೆ. ಕಾರ್ಖಾನೆ ಮಾಲೀಕರಾಗಿ ಸತೀಶ್ ಗೆ ಒಳ್ಳೆ ಹೆಸರಿದ್ದರೂ ಜಾರಕಿಹೊಳಿ ಫ್ಯಾಮಿಲಿ ನಡೆಸುವ ಇತರೆ ಕಾರ್ಖಾನೆಗಳ ಮೇಲೆ ಜನರಿಗೆ ಸಿಟ್ಟಿದೆ.

English summary
Jarkiholi who batted for the anti superstition bill spent a night at the Vaikunth Dam burial ground to prove that superstition is something that ought not to be believed. The minister for excise tells OneIndia that there is no such thing as ghosts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X