ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video: ಬೆಳಗಾವಿಯಲ್ಲಿ ಎಣ್ಣೆ ಅಂಗಡಿಗಾಗಿ ಗ್ರಾ.ಪಂ ಸದಸ್ಯನ ಪ್ರತಿಭಟನೆ

|
Google Oneindia Kannada News

ಬೆಳಗಾವಿ, ಜುಲೈ 18: "ಬೇಕೇ ಬೇಕು ದಾರೂ ಬೇಕು, ಬೇಕೇ ಬೇಕು ದಾರೂ ಬೇಕು," ಹೀಗೆ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿರುವ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ. ಅಸಲಿಗೆ ಈ ದಾರೂ ಎಂದರೇನು ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಮೂಡಬಹುದು. ಆ ಪ್ರಶ್ನೆಯ ಹಿಂದಿನ ಉತ್ತರ ಜೊತೆ ಪ್ರತಿಭಟನೆ ಕಾರಣ ಎಂಥವರಲ್ಲೂ ಬೆರಗು ಮೂಡಿಸುತ್ತದೆ.

ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ದಾರೂ ಎಂದರೆ ಮದ್ಯ ಎಂದು ಅರ್ಥ. ಮದ್ಯದ ಅಂಗಡಿ ಬೇಕು ಎಂದು ಇಲ್ಲಿ ಸ್ವತಃ ಸಂಬರಗಿ ಗ್ರಾಮ ಪಂಚಾಯಿತಿ ಸದಸ್ಯನೇ 20ಕ್ಕೂ ಹೆಚ್ಚು ಜನರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

Recommended Video

ಬೆಳಗಾವಿ: ಮದ್ಯದಂಗಡಿ ಬೇಕು ಎಂದು ಪ್ರತಿಭಟನೆ ನಡೆಸಿದ ಗ್ರಾ.ಪಂ ಸದಸ್ಯ

ಕುಡಿದ ಅಮಲಿನಲ್ಲಿ ಮಗನಿಗೆ ರಾಡ್‌ನಿಂದ ಹೊಡೆದ ತಂದೆಕುಡಿದ ಅಮಲಿನಲ್ಲಿ ಮಗನಿಗೆ ರಾಡ್‌ನಿಂದ ಹೊಡೆದ ತಂದೆ

ಸಂಬರಗಿ ಗ್ರಾಮವನ್ನು ಮದ್ಯಮುಕ್ತಗೊಳಿಸುವ ನಿಟ್ಟಿನಲ್ಲಿ ಮದ್ಯದ ಅಂಗಡಿಗಳಿಗೆ ಬೀಗ ಹಾಕಿಸಲಾಗಿತ್ತು. ಆದರೆ ಪ್ರತಿನಿತ್ಯ ನನಗೆ ಮದ್ಯ ಬೇಕೇ ಬೇಕು. ಅದಕ್ಕಾಗಿ ನಾವು ಬೇರೆ ಗ್ರಾಮ ಅಥವಾ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಮ್ಮ ಹಳ್ಳಿಯಲ್ಲೇ ಮದ್ಯದ ಅಂಗಡಿಯನ್ನು ತೆರೆಯುವುದಕ್ಕೆ ಅವಕಾಶ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಬಾನುದಾಸ್ ಮಾನೆ ಪ್ರತಿಭಟನೆ ನಡೆಸಿದ್ದಾರೆ.

We Want Liquor Shops: Grama Panchayat Member Protest In Belagavi District

ಮದ್ಯದ ಅಂಗಡಿಗಾಗಿ ಶಾಸಕರ ಆಪ್ತನ ಬೇಡಿಕ:

ಸಂಬರಗಿ ಗ್ರಾಮದಲ್ಲಿ ಮದ್ಯದ ಅಂಗಡಿಗಾಗಿ ಪ್ರತಿಭಟನೆ ನಡೆಸಿದ ಅಶೋಕ್ ಬಾನುದಾಸ್ ಮಾನೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಅಲ್ಲದೇ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ್ ಪಾಟೀಲ್ ಆಪ್ತ ಎಂದು ತಿಳಿದು ಬಂದಿದೆ. "ನನಗೆ ಪ್ರತಿನಿತ್ಯ ಒಂದು ಕ್ವಾಟರ್ ಮದ್ಯ ಬೇಕೇ ಬೇಕು. ಅದಕ್ಕಾಗಿಯಾದರೂ ಮದ್ಯದ ಅಂಗಡಿಯನ್ನು ತರೆಯುವುದಕ್ಕೆ ಅನುಮತಿ ನೀಡಬೇಕು," ಎಂದು 20 ಮಂದಿ ಬೆಂಬಲಿಗರೊಂದಿಗೆ ಅಶೋಕ್ ಬಾನುದಾಸ್ ಮಾನೆ ಪ್ರತಿಭಟನೆ ನಡೆಸಿದ್ದು ಗಮನ ಸೆಳೆದಿದ್ದಾರೆ.

English summary
We Want Liquor Shops: Grama Panchayat Member Protest In Belagavi District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X