• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆ ತರುತ್ತೇವೆ; ಪುನಃ ಪಕ್ಷ ಸಂಘಟಿಸುತ್ತೇವೆ''

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಫೆಬ್ರವರಿ 16: ಬೆಳಗಾವಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರು, ಜಿಲ್ಲಾ ಪಂಚಾಯತಿ ಸದಸ್ಯರು, ಪಕ್ಷ ಬಿಟ್ಟು ಹೋದ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಲಾಗುತ್ತಿದೆ. ಕಾಂಗ್ರೆಸ್ ಗೆ ಆಹ್ವಾನ ಮಾಡುವುದು ಪಕ್ಷ ಕಟ್ಟುವ ಒಂದು ಭಾಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂದಿನಿಂದ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗುತ್ತಿದ್ದು, ಗೋಕಾಕ್ ದಿಂದಲೇ ಆರಂಭಿಸಲಾಗಿದೆ. ಅಶೋಕ ಪೂಜಾರಿ ಸೇರಿದಂತೆ ಹಲವು ಮುಖಂಡರಿಗೆ ಆಹ್ವಾನ ನೀಡಿದ್ದೇವೆ. ಸಮಯಾವಕಾಶ ಕೇಳಿದ್ದಾರೆ. ಅವರ ತೀರ್ಮಾನದ ಬಳಿಕ ಮುಂದಿನ ಹೆಜ್ಜೆಯಾಗಿದೆ' ಎಂದರು.

ಕ್ಷ ಬಿಟ್ಟು ಹೋದ ನಾಯಕರ ಆಹ್ವಾನ

ಕ್ಷ ಬಿಟ್ಟು ಹೋದ ನಾಯಕರ ಆಹ್ವಾನ

ಈಗಾಗಲೇ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಕಮಿಟಿ ರಚನೆ ಮಾಡಿದ್ದಾರೆ. ಆ ತಂಡ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೇರಲು ಇಚ್ಛೆ ಉಳ್ಳವರು, ಹಾಗೂ ಹಲವು ಕಾರಣಗಳಿಂದ ಪಕ್ಷ ಬಿಟ್ಟು ಹೋದ ನಾಯಕರನ್ನು ಆಹ್ವಾನ ಮಾಡಲಾಗುತ್ತಿದೆ. ನಾವೂ ಸಹ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಆಹ್ವಾನ ನೀಡುತ್ತೇವೆ ಎಂದು ಹೇಳಿದರು.

24 ಗಂಟೇಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ; ರಮೇಶ್ ಜಾರಕಿಹೊಳಿ

ಜನರು ಶಕ್ತಿ ನೀಡಿದರೆ ಮಾತ್ರ ಪ್ರಶ್ನಿಸಲು ಸಾಧ್ಯ

ಜನರು ಶಕ್ತಿ ನೀಡಿದರೆ ಮಾತ್ರ ಪ್ರಶ್ನಿಸಲು ಸಾಧ್ಯ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಯಮಕನಮರಡಿ ಕ್ಷೇತ್ರದಲ್ಲಿಯೂ ಸಹ ಗುರುವಾರ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿದ್ದೇವೆ. ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಸರ್ಕಾರವನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿಲ್ಲವೆಂದು ಸಾರ್ವಜನಿಕರು ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಜನರು ವೋಟ್ ಅವರಿಗೆ ಹಾಕಿದ್ದಾರೆ. ಅವರೇ ತಕ್ಕ ಪಾಠ ಕಲಿಸಬೇಕು. ಜನರು ನಮಗೆ ಶಕ್ತಿ ನೀಡಿದರೆ ಮಾತ್ರ ನಾವು ಪ್ರಶ್ನಿಸಲು ಸಾಧ್ಯ. ಆದರೂ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಹೇಳಿದವರೇ ಬಹಿರಂಗ ಪಡಿಸ್ಬೇಕು

ಹೇಳಿದವರೇ ಬಹಿರಂಗ ಪಡಿಸ್ಬೇಕು

24 ಗಂಟೆಯಲ್ಲಿ 5 ಜನ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ತರಬಲ್ಲೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಅನ್ನುವುದು ಅವರೇ ಬಹಿರಂಗ ಪಡಿಸಬೇಕು. ಐದು ಜನ ಶಾಸಕರ ಯಾವಾಗ, ಎಲ್ಲಿ ಬರುತ್ತಾರೆ ಎಂದು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಹೀಗೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಸರಿ ಇಲ್ಲ. ಮತ್ಯಾರು ಕಾಂಗ್ರೆಸ್ ನವರು ಹೋಗುತ್ತಾರೆ ಎಂದು ಮರು ಪ್ರಶ್ನಿಸಿದರು.

ಬಡವರ ಪರ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ

ಬಡವರ ಪರ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ

ಸಿದ್ದರಾಮಯ್ಯ ನಮ್ಮ ನಾಯಕರು ಅಂತ ಮೊದಲಿನಿಂದಲೂ ಹೇಳುತ್ತಾರೆ. ಅದೇನೆ ಇದ್ದರೂ ನೀವು ರಮೇಶ್ ಅವರನ್ನೇ ಕೇಳಬೇಕು. ಟಿವಿ, ಪ್ರೀಡ್ಜ್, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸಚಿವ ಉಮೇಶ ಕತ್ತಿ ಹೇಳಿಕೆಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಟಿವಿ ಇಲ್ಲದೆ ಇರುವ ಮನೆ ಇಲ್ಲ‌. ಸರ್ಕಾರಕ್ಕೆ ಬಡವರ ಪರ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ ಎನ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

English summary
Former MLAs, zilla panchayat members and senior leaders of who left the party are being invited to the Congress party again in all the constituencies in Belagavi district, KPCC working president Satish Jarakiholi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X