ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ನವೀಲುತೀರ್ಥ ಭರ್ತಿ; 6 ಸಾವಿರ ಕ್ಯುಸೆಕ್ ನೀರು ಬಿಡುಗಡೆ

|
Google Oneindia Kannada News

ಬೆಳಗಾವಿ, ಆಗಸ್ಟ್ 06 : ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಮಲಪ್ರಭಾ (ನವೀಲುತೀರ್ಥ) ಜಲಾಶಯ ಬಹುತೇಕ ಭರ್ತಿಯಾಗಿದೆ. 40 ಸಾವಿರ ಕ್ಯುಸೆಕ್ ಒಳ ಹರಿವು ಇದ್ದು, 6 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.

ಕರ್ನಾಟಕದ ಮಹಾಮಳೆ, ಚಿತ್ರಗಳಲ್ಲಿ ನೋಡಿ

"ಮಂಗಳವಾರ ಜಲಾಶಯದ ಎಲ್ಲಾ 4 ಗೇಟ್‍ಗಳ ಮೂಲಕ 6000 ಕ್ಯೂಸೆಕ್ ನೀರು ಬಿಡಲಾಗಿದೆ" ಎಂದು ನವೀಲುತೀರ್ಥದ ಅಧೀಕ್ಷಕ ಅಭಿಯಂತರ ಜಗದೀಶ್ ನಾಯಕ ಮಾಹಿತಿ ನೀಡಿದ್ದಾರೆ. ನದಿ ಪಾತ್ರದಲ್ಲಿರುವ ಜನರಿಗೂ ಸಹ ಎಚ್ಚರಿಕೆ ನೀಡಲಾಗಿದೆ.

ಬಾಗಲಕೋಟೆ : ಪ್ರವಾಹ; ರಕ್ಷಣಾ ಕಾರ್ಯಕ್ಕೆ 400 ಪೊಲೀಸರುಬಾಗಲಕೋಟೆ : ಪ್ರವಾಹ; ರಕ್ಷಣಾ ಕಾರ್ಯಕ್ಕೆ 400 ಪೊಲೀಸರು

ಮಲಪ್ರಭಾ ಜಲಾಶಯದ ಗರಿಷ್ಠ ಮಟ್ಟ 2079.50 ಅಡಿ. ಇಂದಿನ ನೀರಿನ ಮಟ್ಟ 2075 ಅಡಿ. ಸದ್ಯಕ್ಕೆ 40 ಸಾವಿರ ಕ್ಯೂಸೆಕ್ ಒಳಹರಿವು ಇದೆ. ನದಿಯ ಒಳಹರಿವು ಹೆಚ್ಚಾದಂತೆ ಹೆಚ್ಚಿನ ನೀರನ್ನು ಹೊರ ಬಿಡಲಾಗುವುದರಿಂದ ನದಿಪಾತ್ರದ ಜನರು ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

Water Released From Naviluteertha Dam Belagavi

ಜಿಲ್ಲೆಯಲ್ಲಿ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯ ಕೂಡ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತದೆ.

ಬಾಗಲಕೋಟೆ : ಕೃಷ್ಣಾ ನದಿ ಪ್ರವಾಹ, ಸಂತ್ರಸ್ತರ ರಕ್ಷಣೆಬಾಗಲಕೋಟೆ : ಕೃಷ್ಣಾ ನದಿ ಪ್ರವಾಹ, ಸಂತ್ರಸ್ತರ ರಕ್ಷಣೆ

ಕುಡಿಯುವ ನೀರು ಸ್ಥಗಿತ : ಬೆಳಗಾವಿ ನಗರದಲ್ಲಿ 3-4 ದಿನಗಳಿಂದ ಸುರಿದ ಮಳೆಯಿಂದ ನೀರೆತ್ತುವ ಹಿಂಡಲಗಾ ಪಂಪಹೌಸ್ ಜಲಾವೃತವಾಗಿದೆ. ಇದರಿಂದಾಗಿ ಹಿಂಡಲಗಾ ಮತ್ತು ರಕ್ಕಸಕೊಪ್ಪ ಪಂಪ್ ಚಾಲನೆಯಲ್ಲಿರುವುದಿಲ್ಲ.

ಹಿಡಕಲ ಡ್ಯಾಮ್‍ನಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟಕ್ಕೆ ಬಂದಿರುವುದರಿಂದ ಇಲ್ಲಿ ಕೂಡ ನೀರೆತ್ತುವ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ, ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದೆ.

English summary
As rainfall continues in Maharashtra around 6000 cusecs of water was released from Naviluteertha dam of Belagavi district Saundatti taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X