ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಗಣೇಶ ಮೂರ್ತಿ ಕಣ್ಣಲ್ಲಿ ನೀರು; ಆತಂಕಗೊಂಡ ಜನ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 15: ಬೆಳಗಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ದಿನವೇ ವಿಸ್ಮಯಕಾರಿ ಘಟನೆ ವರದಿ ಆಗಿದೆ. ವಿಘ್ನ ನಿವಾರಕನ ಎರಡೂ ಕಣ್ಣಲ್ಲಿ ಹನಿಗಳು ಚಿಮ್ಮಿವೆ. ವಿನಾಯಕನ ಕಣ್ಣಲ್ಲಿ ನೀರು ಬಂದಿದ್ದು, ಬೆಳಗಾವಿ ಜಿಲ್ಲೆಯ ಪಾಲಿಗೆ ಅನಾಹುತದ ಮುನ್ಸೂಚನೆಯೇ ಎಂಬ ಪ್ರಶ್ನೆ- ಆತಂಕ ಜನರಲ್ಲಿ ಮನೆ ಮಾಡಿದೆ.

ಗಣೇಶ ಮೂರ್ತಿಯ ಕಣ್ಣಲ್ಲಿ ನೀರು ಕಂಡು ಇಡೀ ಸಮಾಜವೇ ಬೆಚ್ಚಿ ಬೀಳುವಂತೆ ಆಗಿದೆ. ಈ ಘಟನೆ ನಡೆದಿದ್ದು ಬೆಳಗಾವಿಯ ಗಣೇಶ ಪೇಟದ ನಿವಾಸಿ ಕೃಷ್ಣ ಪಾಟೀಲ್ ಎಂಬುವರ ಮನೆಯಲ್ಲಿ. ಪ್ರತಿ ವರ್ಷದಂತೆ ಪಾಟೀಲ್ ಕುಟುಂಬವೂ ವಿಧಿ-ವಿಧಾನದಂತೆ ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಜನರೇಟರ್ ಗೆ ಸಿಲುಕಿ ಕತ್ತರಿಸಿದ ಯುವಕನ ಕೈಗಣೇಶ ಮೂರ್ತಿ ವಿಸರ್ಜನೆ ವೇಳೆ ಜನರೇಟರ್ ಗೆ ಸಿಲುಕಿ ಕತ್ತರಿಸಿದ ಯುವಕನ ಕೈ

11 ದಿನ ಶ್ರದ್ಧಾ- ಭಕ್ತಿಯಿಂದ ಆರಾಧನೆ ಮಾಡಿದ್ದರು. 11ನೇ ದಿನದ ಸಂಜೆ ಗಣೇಶ ಮೂರ್ತಿ ವಿಸರ್ಜನೆಗೆ ಪಾಟೀಲ್ ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು. ಅಂತಿಮವಾಗಿ ಸಂಜೆ ಮಂಗಳಾರತಿ ಮಾಡುತ್ತಿದ್ದಾಗ ಗಣೇಶ ಮೂರ್ತಿಯ ಕಣ್ಣಲ್ಲಿ ನೀರು ಕಂಡು, ಗಾಬರಿಗೊಂಡರು. ಏನೂ ತೋಚದಂತಾದಾಗ ಅರ್ಚಕರ ಮೊರೆ ಹೋದರು.

Water From Ganesha Idol In Belagavi; People Panic

ಯಾವಾಗ ಗಣೇಶ ಮೂರ್ತಿಯ ಕಣ್ಣಲ್ಲಿ ನೀರು ಚಿಮ್ಮಿತೋ ಆಗ ಅರ್ಚಕರು, ಪಾಟೀಲ ಕುಟುಂಬದ ಸದಸ್ಯರು ಒರೆಸಿದ್ದಾರೆ. ಮೊದಲ ಬಲಗಣ್ಣಿನಲ್ಲಿ ನೀರು ಬಂದಿದೆ. ಆ ಬಳಿಕ ಎಡಗಣ್ಣಿನಲ್ಲಿ ನೀರು ಬಂದಿದೆ. ಸ್ವಯಂ ಅರ್ಚಕರೇ ನೀರು ಒರೆಸಿದ ಮೇಲೂ ಮತ್ತೆ ಕಣ್ಣಿನಿಂದ ನೀರು ಹೊರಗೆ ಬಂದಿದೆ.

ತಕ್ಷಣವೇ ಅರ್ಚಕರ ಸೂಚನೆಯಂತೆ 51 ಮೋದಕ ಮಾಡಿ, ಅಕ್ಕಿಯನ್ನು ವಿತರಿಸಿದ್ದಾರೆ. ಆ ಬಳಿಕ ಮತ್ತೆ ಗಣೇಶ ಮೂರ್ತಿಗೆ ಮಂಗಳರಾತಿ ಮಾಡಿ, ವಿಸರ್ಜನೆ ಮಾಡಿದ್ದಾರೆ. ಆದರೆ ವಿಘ್ನೇಶ್ವರ ಮೂರ್ತಿಯ ಕಣ್ಣಲ್ಲಿ ನೀರು ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಏನೋ ಅನಾಹುತ ಕಾದಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ವಿಘ್ನ ನಿವಾರಕ ಗಣೇಶನಿಗೇ ಇನ್ಸೂರೆನ್ಸ್: ಕಲಿಯುಗ ಕಣ್ರೀ..ಕಲಿಯುಗವಿಘ್ನ ನಿವಾರಕ ಗಣೇಶನಿಗೇ ಇನ್ಸೂರೆನ್ಸ್: ಕಲಿಯುಗ ಕಣ್ರೀ..ಕಲಿಯುಗ

ವಿಘ್ನೇಶ್ವರ ಮೂರ್ತಿಯ ಕಣ್ಣಲ್ಲಿ ನೀರು ಬಂದಿರುವುದು ವಿಸ್ಮಯಕಾರಿ. ಹೀಗಾಗಿರುವುದರಿಂದ ಮುಂದೆ ಏನೋ ಕೇಡು ಕಾದಿದೆ ಎಂಬ ಆತಂಕ ಜನರಲ್ಲಿದೆ.

English summary
Bizarre News: Water from Ganesha idol before immersion in Belagavi district. People panic about consequences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X