ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತ ಕೊಟ್ಟ ಬೆಳಗಾವಿ ಸ್ವಾಮೀಜಿಗೆ ಬೆದರಿಕೆ ಕರೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್‌ 03: ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ, ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಗೆ ಮುಹೂರ್ತ ಕೊಟ್ಟಿರುವ ಸ್ವಾಮೀಜಿಗೆ ಬೆದರಿಕೆ ಕರೆ ಬಂದಿದೆ.

Recommended Video

Ayodhya Rambhoomi ಪೂಜೆಗೆ Corona ಕಾರಣದಿಂದ ಕಡಿಮೆ ಮಂದಿಗೆ ಆಹ್ವಾನ | Oneindia Kannada

ದೇಶದ ವಿವಿಧ ಕಡೆಗಳಿಂದ ಬಂದ ಕರೆಯಲ್ಲಿ ಸ್ವಾಮೀಜಿಗೆ ಜೀವ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ. ಇದೇ ಆಗಸ್ಟ್‌ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಗೆ ವಿದ್ವಾಂಸ ವಿಜಯೇಂದ್ರ ಶರ್ಮಾ ಮುಹೂರ್ತ ನೀಡಿದ್ದರು. ಇದೀಗ ಅವರಿಗೆ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ.

ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು?ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು?

ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ವಿದ್ವಾಂಸ ವಿಜಯೇಂದ್ರ ಶರ್ಮಾ ಇದ್ದಾರೆ. ಅವರಿಗೆ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ವಿದ್ವಾಂಸರ ಮನೆ ಮುಂದೆ ಓರ್ವ ಪೊಲೀಸ್ ಪೇದೆಯನ್ನು ನೇಮಕ ಮಾಡಲಾಗಿದೆ. ವಿಜಯೇಂದ್ರ ಅವರ ಮನೆಯು ಟೀಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ.

Vijayendra Sharma Who Gave Muhurtham For Ram Mandir Cosntruction Got Threat Call

ಆಗಸ್ಟ್ 05ರಂದು ಬೆಳಗ್ಗೆ 8 ರಿಂದ 12ಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಶಂಕು ಸ್ಥಾಪನೆ ಮುಹೂರ್ತ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.30ಕ್ಕೆ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ.

English summary
Vijayendra Sharma of Belagavi, who has given a muhurtham for foundation stone laying of the Ram Mandir in Ayodhya, has got threat call today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X