• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಮ್ಸ್‌ನಲ್ಲಿ ಹೊಟ್ಟೆ ನೋವಿನಿಂದ ನರಳಾಡಿದ ಸೋಂಕಿತ ವೃದ್ಧನ ವಿಡಿಯೋ ವೈರಲ್

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಜುಲೈ 18: ಬಿಮ್ಸ್‌ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ವೃದ್ಧರೊಬ್ಬರು ಹೊಟ್ಟೆ ನೋವು ತಾಳಲಾರದೇ ನೆಲದ ಮೇಲೆ ಬೆತ್ತಲೆಯಾಗಿ ಒದ್ದಾಡುತ್ತಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮವೊಂದರ 65 ವರ್ಷದ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದಷ್ಟೆ ಹೊಟ್ಟೆ ನೋವಿನಿಂದಾಗಿ ಬಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲು ಮಾಡಿಕೊಂಡ ಸಂದರ್ಭ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಕೊರೊನಾ ಚಿಕಿತ್ಸೆಗೆ ಅಧಿಕ ಬಿಲ್ ಪಡೆದ ಆರೋಪ; ಆಸ್ಪತ್ರೆಗೆ ದ.ಕ.ಜಿಲ್ಲಾಡಳಿತ ತಂಡ ದಿಢೀರ್ ಭೇಟಿ

ನಂತರ ವರದಿಯಲ್ಲಿ ಆ ವೃದ್ಧರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಕೊವಿಡ್ ವಾರ್ಡ್ ನಲ್ಲಿ ಬೆಡ್ ಕೊರತೆಯಿದೆ ಎಂದು ಅವರಿಗೆ ನೆಲದ ಮೇಲೇ ಹಾಸಿಗೆ ಹಾಕಿ ಮಲಗಿಸಲಾಗಿತ್ತು.

ಅದಲ್ಲದೇ ಅವರಿಗೆ ಮತ್ತೆ ಹೊಟ್ಟೆ ನೋವು ತೀವ್ರತರವಾಗಿ ಕಾಣಿಸಿಕೊಂಡಿದ್ದು, ನೆಲದ ಮೇಲೇ ಬೆತ್ತಲೆಯಾಗಿ ಒದ್ದಾಡಲು ಶುರು ಮಾಡಿದ್ದಾರೆ. ಹೀಗೆ ನರಳಾಡುತ್ತಿದ್ದ ಅವರನ್ನು ಆಸ್ಪತ್ರೆಯವರು ಗಮನಿಸಿಲ್ಲ, ಅವರಿಗೆ ವೈದ್ಯರು ಸಮರ್ಪಕ ಚಿಕಿತ್ಸೆಯನ್ನೂ ನೀಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಜೊತೆಗೆ ವೃದ್ಧ ನರಳಾಡುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿ ಎಚ್ಚೆತ್ತುಕೊಂಡು ಚಿಕಿತ್ಸೆ ನೀಡಿರುವುದಾಗಿ ತಿಳಿದುಬಂದಿದೆ. ಆದರೆ ರೋಗಿ ಕುರಿತ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ವೃದ್ಧನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The video of old and corona virus infected man suffering from stomach pain without treatment in Bims goes viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X