ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸಿದ್ದರಾಮಯ್ಯ ಅವರೇ ಯಾಕೆ ಈ ಕೆಲಸ ಮಾಡಿರಬಾರದು"; ಬಾಣ ತಿರುಗಿಸಿದ ಸೋಮಣ್ಣ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 4: ಬಿಜೆಪಿ ಸಭೆಯ ಆಡಿಯೋ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ವಸತಿ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, "ಸವದಿ, ಬೊಮ್ಮಯಿ, ಕಟೀಲ್ ರಿಂದ ಆಡಿಯೋ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರೇ ಯಾಕೆ ಈ ಕೆಲಸ ಮಾಡಿರಬಾರದು. ಸಿದ್ದರಾಮಯ್ಯಗೆ ಹೇಗೆ ಗೊತ್ತು ಮೂರೇ ಜನ ಮಾಡಿದ್ದು ಅಂತ. ಆಡಿಯೋ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ತನಿಖೆ ಆರಂಭಿಸಿದ್ದಾರೆ. ಯಾರ ಆಡಿಯೋ ಎಲ್ಲಿ ಬೇಕಾದ್ರು ಮಾಡಬಹುದು, ಗುಂಡೂರಾವ್ ಯಾಕೆ ಮಾಡಿರಬಾರದು. ಮಿಮಿಕ್ರಿ ಮಾಡೋಕು ಅನೇಕ ಜನ ಇದ್ದಾರೆ" ಎಂದಿದ್ದಾರೆ.

ವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ

"ಸಿದ್ದರಾಮಯ್ಯ ಸಿದ್ದರಾಮಯ್ಯ ಆಗಿ ಉಳಿದಿಲ್ಲ" ಎಂದೂ ಒಗಟಾಗಿ ನುಡಿದಿದ್ದಾರೆ. "ರಾತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ಮಾಡಿದ್ದರು. ಬಾಗಲಕೋಟೆ ಸಭೆ ಬಗ್ಗೆ ವಿಚಾರಿಸಿದರು. ಸಿದ್ದರಾಮಯ್ಯ ನನಗೆ ಮೂವತ್ತು ವರ್ಷಗಳಿಂದ ಗೊತ್ತು. ನಾವೆಲ್ಲ ಒಂದೇ ಕಂಪನಿಯಲ್ಲಿ ಇದ್ದವರು. ಅವರು ಉಪಮುಖ್ಯಮಂತ್ರಿ ಇದ್ದರು, ನಾನು ಮಂತ್ರಿ ಆಗಿದ್ದೆ, ಪಟೇಲರು ಸಿಎಂ ಆಗಿದ್ದರು. ಅವರಿಗೆ ಹೇಳಿದ್ದೇನೆ, ನೀವೂ ಸಿಎಂ ಆಗಿದ್ದವರು. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬೇಡಿ, ಸಿದ್ದರಾಮಯ್ಯ ಸಿದ್ದರಾಮಯ್ಯ ಆಗೇ ಇರಿ ಎಂದು" ಎಂದರು.

V Somanna Reacts To Siddaramiah Statement On Audio Leak Issue Of Yediyurappa

"ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪ್ರಕೃತಿ ಮುನಿಸಿನಿಂದ ಹಾನಿಯಾಗಿದೆ. ಇದು ಒಳ್ಳೆಯ ಟೈಮ್ ಅಲ್ಲ ಜನ ಸಂಕಷ್ಟದಲ್ಲಿ ಇದ್ದಾರೆ. ನೆರೆ ಪೀಡಿತ ಜನರ ಪುನರ್ ಜೀವನ ಕಲ್ಪಿಸಬೇಕಿದೆ. ಈ ಸಮಯದಲ್ಲಿ ಯಾವುದನ್ನು ಯೋಚಿಸಬೇಕು ಎನ್ನುವುದನ್ನು ತೀರ್ಮಾನಿಸಿ ಎಂದಿದ್ದೇನೆ. ಅದಕ್ಕೆ ಸಿದ್ದರಾಮಯ್ಯ ನಾಳೆ ಬರ್ತಿಯಲ್ಲಾ ಮಾತಾಡ್ತಿನಿ ಅಂದರು" ಎಂದು ತಿಳಿಸಿದರು.

ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ?; ಸಿದ್ದರಾಮಯ್ಯ ವ್ಯಂಗ್ಯಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ?; ಸಿದ್ದರಾಮಯ್ಯ ವ್ಯಂಗ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಮಾಡಲಿ ಬಿಡಿ, ಅವರ ಬಿಪಿ, ಶುಗರ್ ಕಡಿಮೆ ಆದರೂ ಆಗುತ್ತೆ" ಎಂದು ವ್ಯಂಗ್ಯವಾಡಿದರು.

English summary
Minister V Somanna has reacted to the statement of Siddaramaiah regarding the audio issue of the BJP meeting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X