ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಆಟೋ ಓಡಿಸಿದ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ!

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್. 11 : ಕುಂದಾನಗರಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಪಕ್ಷದ ಮಂತ್ರ ಪಠಿಸಿದರು. ಖಾಕಿ ಶರ್ಟ್ ತೊಟ್ಟು, ಆಟೋ ಓಡಿಸುವ ಮೂಲಕ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷಕ್ಕೆ ಕಾರ್ಮಿಕರೆ ಜೀವಾಳವೆಂಬ ಸಂದೇಶವನ್ನು ರವಾನಿಸಿದರು.

ಪ್ರಸ್ತುತ ರಾಜಕೀಯ ವ್ಯವಸ್ಥೆಯಿಂದ ಜನರಿಗೆ ನಿರಾಸೆಪ್ರಸ್ತುತ ರಾಜಕೀಯ ವ್ಯವಸ್ಥೆಯಿಂದ ಜನರಿಗೆ ನಿರಾಸೆ

ಸ್ಟಾರ್ ನಟರು ಅಂದರೆ ಹಾಗೆ. ಅವರಿಗೆ ನೂರಾರು ಅಭಿಮಾನಿಗಳು ಇರುತ್ತಾರೆ. ತಮ್ಮ ನೆಚ್ಚಿನ ನಟ ಬಂದರೆ ಸಾಕು ಅವರನ್ನು ನೋಡುವುದಕ್ಕೆ, ಅವರ ಜೊತೆ ಮಾತನಾಡಲು ಅಭಿಮಾನಿಗಳು ಬೆನ್ನಿಗೆ ಬೀಳುತ್ತಾರೆ.

Upendra drives auto in Belagavi for KPJP campaign

ಸೋಮವಾರ ಬೆಳಗಾವಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು. ತಮ್ಮ ರಾಜಕೀಯ ಪಕ್ಷ ಪ್ರಜಾಕೀಯದ ಪ್ರಚಾರಕ್ಕಾಗಿ ರಿಯಲ್ ಸ್ಟಾರ್ ಉಪೇಂದ್ರ ಬೆಳಗಾವಿಗೆ ಆಗಮಿಸಿದ್ದರು.

ಶಂಕ್ರಣ್ಣನ ಕನಸು ಹೊತ್ತು ಆಟೋದಲ್ಲಿ ಬಂದ ಉಪೇಂದ್ರಶಂಕ್ರಣ್ಣನ ಕನಸು ಹೊತ್ತು ಆಟೋದಲ್ಲಿ ಬಂದ ಉಪೇಂದ್ರ

ಮೊದಲು ನಗರದ ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಉಪೇಂದ್ರ ಅಲ್ಲಿಂದ ತಮ್ಮ ಪಕ್ಷದ ಚಿನ್ಹೆ ಆಟೋದಲ್ಲಿ ತಾವೇ ಖುದ್ದು ಆಟೋ ಓಡಿಸಿಕೊಂಡು ಖಾಸಗಿ ಹೊಟೇಲ್‌ಗೆ ಆಗಮಿಸಿದರು.

Upendra drives auto in Belagavi for KPJP campaign

ಖಾಸಗಿ ಹೊಟೇಲ್‌ನಲ್ಲಿ ಉಪೇಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿದರು. ಅತ್ತ ಹೋಟೆಲ್ ಹೊರಗೆ ತಮ್ಮ ನೆಚ್ಚಿನ ನಟನನ್ನು ನೋಡಲು ಉಪ್ಪಿ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಭ್ರಷ್ಟಾಚಾರ ಮುಕ್ತ ಆಡಳಿತವೇ ಕೆಪಿಜೆಪಿ ಗುರಿ : ಉಪೇಂದ್ರಭ್ರಷ್ಟಾಚಾರ ಮುಕ್ತ ಆಡಳಿತವೇ ಕೆಪಿಜೆಪಿ ಗುರಿ : ಉಪೇಂದ್ರ

ಪತ್ರಿಕಾಗೋಷ್ಠಿ ಮುಗಿಸಿ ಉಪೇಂದ್ರ ಅವರು ಹೊರಡಬೇಕು ಎನ್ನುವಷ್ಟರಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡುವ ಭರಾಟೆಯಲ್ಲಿ ಹೊಟೇಲ್ ಒಳಗೆ ನುಗ್ಗಿದರು.

Upendra drives auto in Belagavi for KPJP campaign

ಈ ವೇಳೆ ನೂಕುನುಗ್ಗಲಿಂದಾಗಿ ಹೊಟೇಲ್ ಬಾಗಿಲಿನ ಗಾಜು ಪುಡಿ ಪುಡಿ ಆಯಿತು. ಹೊಟೇಲ್‌ನಿಂದ ಹೊರ ಬಂದ ಉಪ್ಪಿ ಅಭಿಮಾನಿಗಳತ್ತ ಕೈ ಮಾಡುತ್ತ ನೇರವಾಗಿ ಕಾರು ಹತ್ತಿ ಹೊರಟು ಹೋದರು.

ಚುನಾವಣೆಯಲ್ಲಿ ಗೆಲ್ಲಲು ನನ್ನ ಬಳಿ ಕಾಸಿಲ್ಲ ಆದ್ರೆ ಕನಸಿದೆ: ಉಪ್ಪಿಚುನಾವಣೆಯಲ್ಲಿ ಗೆಲ್ಲಲು ನನ್ನ ಬಳಿ ಕಾಸಿಲ್ಲ ಆದ್ರೆ ಕನಸಿದೆ: ಉಪ್ಪಿ

ಉಪೇಂದ್ರ ಆಗಮನದಿಂದ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು. 2018ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ದುಡ್ಡಿಲ್ಲದೇ ಪ್ರಜಾಕೀಯ ಮಾಡಲು ಹೊರಟಿದ್ದಾರೆ. ಉಪ್ಪಿ ಪ್ರಜಾಕೀಯಕ್ಕೆ ಪ್ರಜ್ಞಾವಂತರು ಕೈ ಜೋಡಿಸುವರೇ ಕಾದು ನೋಡಬೇಕು.

English summary
Kannada actor and Founder of Karnataka Pragnyavanta Janata Paksha (KPJP) Upendra take a auto to campaign for his party on December 11, 2017. Auto Rickshaw is KPJP party symbol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X