ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿ ಗೆಲುವಿಗಾಗಿ ಮೀಸೆ ಪಣಕ್ಕಿಟ್ಟ ಅಭಿಮಾನಿ!

|
Google Oneindia Kannada News

ಬೆಳಗಾವಿ, ಮೇ 22 : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗಾಗಿ ಅಭಿಯಾನಿಯೊಬ್ಬರು ಮೀಸೆಯನ್ನು ಪಣಕ್ಕಿಟ್ಟಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ ಕಣದಲ್ಲಿದ್ದಾರೆ. ಪ್ರಕಾಶ್ ಹುಕ್ಕೇರಿ ಅಭಿಮಾನಿ ಮತ್ತು ಕಾಂಗ್ರೆಸ್ ಮುಖಂಡ ರವಿ ಮಾಳಿ ಮೀಸೆಯನ್ನು ಬೆಟ್ಟಿಂಗ್‌ನಲ್ಲಿಟ್ಟಿದ್ದಾರೆ.

ಚಿಕ್ಕೋಡಿ ಕಣ : ಪ್ರಕಾಶ್ ಹುಕ್ಕೇರಿ v/s ಅಣ್ಣಾ ಸಾಹೇಬ್ ಜೊಲ್ಲೆಚಿಕ್ಕೋಡಿ ಕಣ : ಪ್ರಕಾಶ್ ಹುಕ್ಕೇರಿ v/s ಅಣ್ಣಾ ಸಾಹೇಬ್ ಜೊಲ್ಲೆ

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಗೆಲುವು ಸಾಧಿಸಲಿದ್ದಾರೆ ಎಂಬ ವರದಿ ಬಂದಿದೆ. ಚಿಕ್ಕೋಡಿಯಲ್ಲಿ ಗೆಲ್ಲುವವರು ಯಾರು? ಎಂದು ಬೆಟ್ಟಿಂಗ್ ನಡೆಯುತ್ತಿದ್ದು, ಪ್ರಕಾಶ್ ಹುಕ್ಕೇರಿ ಪರವಾಗಿ ಬೆಟ್ಟಿಂಗ್ ಜೋರಾಗಿದೆ.

ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?

ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 14 ತಾಲೂಕುಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. ಆಡಳಿತ ಸುಲಭವಾಗಿ ನಡೆಯಲು ಚಿಕ್ಕೋಡಿಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ಮಾಡಲಾಗಿದೆ. ಆದರೆ, ಇದಕ್ಕೆ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನವಿಲ್ಲ....

ಪ್ರಕಾಶ್ ಹುಕ್ಕೇರಿ ಮೀಸೆ

ಪ್ರಕಾಶ್ ಹುಕ್ಕೇರಿ ಮೀಸೆ

ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ. ಪ್ರಕಾಶ್ ಹುಕ್ಕೇರಿ ಅವರು ತಮ್ಮ ಮೀಸೆಯಿಂದಾಗಿ ಎಲ್ಲರನ್ನೂ ಸೆಳೆಯುತ್ತಾರೆ. ಈಗ ಅವರ ಗೆಲುವಿಗಾಗಿ ಮೀಸೆಯನ್ನು ಅಭಿಮಾನಿಯೊಬ್ಬರು ಪಣಕ್ಕಿಟ್ಟಿದ್ದಾರೆ.

ಕಾಂಗ್ರೆಸ್ ಮುಖಂಡನ ಬೆಟ್ಟಿಂಗ್

ಕಾಂಗ್ರೆಸ್ ಮುಖಂಡನ ಬೆಟ್ಟಿಂಗ್

ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪುರಸಭೆ ಸದಸ್ಯ ರವಿ ಕಾಳಿ ಅವರು ಪ್ರಕಾಶ್ ಹುಕ್ಕೇರಿ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. 20 ವರ್ಷಗಳಿಂದ ಬೆಳೆಸಿರುವ ಮೀಸೆ-ಗಡ್ಡ ಪಣಕ್ಕಿಟ್ಟಿದ್ದಾರೆ. ಪ್ರಕಾಶ್ ಹುಕ್ಕೇರಿ ಗೆಲ್ಲದಿದ್ದರೆ ಅರ್ಧ ಗಡ್ಡ-ಮೀಸೆ ತೆಗೆದು ಚಿಕ್ಕೋಡಿಯಲ್ಲಿ ಓಡಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಯಾರು?

ಬಿಜೆಪಿ ಅಭ್ಯರ್ಥಿ ಯಾರು?

ಅಣ್ಣಾ ಸಾಹೇಬ್ ಜೊಲ್ಲೆ ಅವರು ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 2018ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ವಿರುದ್ಧ ಸೋತಿದ್ದ ಅವರು, ಚಿಕ್ಕೋಡಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹುಕ್ಕೇರಿ ಹಾಲಿ ಸಂಸದರು

ಹುಕ್ಕೇರಿ ಹಾಲಿ ಸಂಸದರು

ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಗೆದ್ದಿದ್ದ ಪ್ರಕಾಶ್ ಹುಕ್ಕೇರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ, ಪಕ್ಷದ ಸೂಚನೆಯಂತೆ ಒಲ್ಲದ ಮನಸ್ಸಿನಿಂದ ಸಚಿವ ಸ್ಥಾನ ತೊರೆದು 2014ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

English summary
Congress leader Ravi Mali put his mustache for betting in Chikkodi lok sabha seat. He is fan of sitting MP Prakash Hukkeri who is Congress-JD(S) candidate in election. Annasaheb Jolle BJP candidate in seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X