ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಿಶ್ ಮಾರ್ಕೆಟ್ ನಲ್ಲಿ ಚಿಕ್ಕೋಡಿ ಚಿಕ್ಕಮ್ಮಂದಿರ ಬಿಗ್ ಫೈಟ್!

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 11 : ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡುವಾಗ ಗದರಿಸುವ ಮೇಷ್ಟ್ರು ಮಕ್ಕಳಿಗೆ, ಇದನ್ನೇನು ಶಾಲೆ ಅಂತ ತಿಳಕೊಂಡಿದ್ದೀರೋ, ಫಿಶ್ ಮಾರ್ಕೆಟ್ ಅಂತ ತಿಳಕೊಂಡಿದ್ದೀರೋ ಅಂತ ಗದರುವುದನ್ನು ಬಹುಶಃ ಕನ್ನಡ ಶಾಲೆಯಲ್ಲಿ ಓದಿರುವ ಎಲ್ಲ ಮಕ್ಕಳೂ ಕೇಳಿರುತ್ತಾರೆ.

ಮಲ್ಪೆ ಬೀಚಿನಲ್ಲಿ ಮೇರೆ ಮೀರಿದ 'ಸ್ಟಿಂಗ್ ರೇ' ಮೀನಿನ ಹಾವಳಿಮಲ್ಪೆ ಬೀಚಿನಲ್ಲಿ ಮೇರೆ ಮೀರಿದ 'ಸ್ಟಿಂಗ್ ರೇ' ಮೀನಿನ ಹಾವಳಿ

ಗಲಾಟೆ ನಡೆಯುವಾಗ ಅದನ್ನು ಫಿಶ್ ಮಾರುಕಟ್ಟೆಗೆ ಯಾರು, ಯಾಕೆ, ಯಾವ ಸಂದರ್ಭದಲ್ಲಿ ಹೋಲಿಸಿದರೋ ಬಲ್ಲವರಾರು? ಫಿಶ್ ಮಾರ್ಕೆಟ್ ಅಂದ್ರೆ ಗಲಾಟೆಯಾಗಲೇಬೇಕೆ? ಗೊತ್ತಿದ್ದವರು ದಯವಿಟ್ಟು ಸಂದರ್ಭ ಸಮೇತರಾಗಿ ವಿವರಿಸಿ. ಉತ್ತರಕ್ಕೆ 10 ಅಂಕಗಳು.

Two women fight in fish market in Chikkodi

ಅದೇನೋ ಗೊತ್ತಿಲ್ಲ, ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಊರಿನಲ್ಲಿ ಇಬ್ಬರು ಸೀರೆಯುಟ್ಟ ಮೀನು ಮಾರುವ ಮೀನಾಕ್ಷಿಗಳು, ಸೊಂಟಕ್ಕೆ ಸೀರೆ ಸಿಕ್ಕಿಸದೆ ಮೀನು ಮಾರುಕಟ್ಟೆಯಲ್ಲಿ ಶರಂಪರ ಜಗಳಾಡಿದ್ದಾರೆ. ಕುರುಪಿಯನ್ನು ಕೈಯಲ್ಲಿ ಹಿಡಿದು, ಕೊಚ್ಚಿಹಾಕುತ್ತೇನೆ ಅಂತೆಲ್ಲ ಬೈದಾಡಿಕೊಂಡಿದ್ದಾರೆ.

Two women fight in fish market in Chikkodi

ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಿಕ್ಕೋಡಿ ಚಿಕ್ಕಮ್ಮಂದಿರ ನಡುವೆ ಜಗಳ ಹುಟ್ಟಿಕೊಂಡಿದ್ದು ಮೀನು ಮಾರಾಟದ ಸ್ಥಳಕ್ಕಾಗಿ. ಕಾದಾಟ ಮಾತುಗಳಿಂದ ಶುರುವಾಗಿ, ಮರಾಠಿ ಭಾಷೆಯಲ್ಲಿ ಬೈಗುಳದಿಂದ ಮುಂದುವರೆದು, ಕೈಕೈ ಮಿಲಾಯಿಸಿ, ಕೊನೆಗೆ ಕುರುಪಿ (ಮಚ್ಚಿನಂಥ ಆಯುಧ)ಯನ್ನು ಹಿಡಿದುಕೊಂಡು ಕಾದಾಡಿದ್ದಾರೆ.

ಕುರುಪಿ ಹಿಡಿದು ಕಾದಾಡುವಾಗ ಇದ್ಯಾಕೋ ವಿಪರೀತಕ್ಕೆ ಹೋಗುತ್ತಿದೆಯೆಂದು ಒಬ್ಬಳು ಶಸ್ತ್ರಾಸ್ತ್ರವನ್ನು ಕೆಳಗಿಟ್ಟಿದ್ದಾಳೆ. ಅಲ್ಲಿದ್ದವರು ಅವರ ಜಗಳಕ್ಕೆ ಮಂಗಳ ಹಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ಮಹಿಳಾ ಕದನ ಪರ್ವವನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದ್ದಾರೆ.

English summary
Video : Two women fight for the place in fish market in Chikkodi town in Belagavi district. A passerby has recorded the incident in his mobile phone, which has become viral now. By the way, wherever fight happens, why it is called fish market?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X