ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಪಾವತಿಸದ ರೈತರಿಗೆ ವಾರೆಂಟ್!: ಆತಂಕದಲ್ಲಿ ಪ್ರವಾಹಪೀಡಿತ ರೈತರು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 23: ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಬೆಳಗಾವಿ ಜಿಲ್ಲೆಯ ಇಬ್ಬರು ರೈತರಿಗೆ ಬ್ಯಾಂಕಿನಿಂದ ನೊಟೀಸ್ ಜಾರಿಯಾಗಿದೆ.

ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ, 15000 ಅನ್ನದಾತರು ಭಾಗಿದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ, 15000 ಅನ್ನದಾತರು ಭಾಗಿ

ನೀಲಕಂಠ ಲಕ್ಕಣ್ಣವರ್, ನಿಂಗಪ್ಪ ಲಕ್ಕಣ್ಣವರ್ ಸಹೋದರರಿಗೆ ಕೊಲ್ಕತ್ತಾ ನ್ಯಾಯಾಲಯದ ಆದೇಶದ ಮೇರೆಗೆ ರಾಮದುರ್ಗ ಪೊಲೀಸರಿಂದ ರೈತರಿಗೆ ವಾರೆಂಟ್ ಜಾರಿಯಾಗಿದೆ.

ಪ್ರವಾಹದಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿಪ್ರವಾಹದಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿ

ರಾಮದುರ್ಗ ತಾಲೂಕಿನ ಹಂಪಿಹೋಳಿ ಗ್ರಾಮ ಮಲಪ್ರಭಾ ನದಿಯ ಭಾರೀ ಪ್ರವಾಹ ಹಿನ್ನೆಲೆ ಒಂದೇ ತಿಂಗಳಲ್ಲಿ ಎರಡು ಬಾರಿ ಸಂಪೂರ್ಣವಾಗಿ ಮುಳುಗಿತ್ತು. ಇದರಿಂದ ಈ ಗ್ರಾಮಸ್ಥರ ತೀವ್ರ ಸಂಕಷ್ಟಕ್ಕೀಡಾಗಿದ್ದರು.

Two Farmers Got Notice From Bank In Ramdurga

ಐದು ವರ್ಷದ ಹಿಂದೆ ಎಲ್ ಅಂಡ್ ಟಿ ಫೈನಾನ್ಸ್ ನಿಂದ ಟ್ರ್ಯಾಕ್ಟರ್ ಖರೀದಿಸಿ ನಿಗದಿತ ಸಮಯದಲ್ಲಿ ಎರಡು ಕಂತು ಪಾವತಿಸಲಾಗಿತ್ತು. ನಂತರ ಬರದಿಂದ ರೈತರಿಗೆ ಕಂತು ಪಾವತಿಸಲು ಸಾಧ್ಯವಾಗಿರದ ಕಾರಣ ಫೈನಾನ್ಸ್ ನವರು ಕಳೆದ ವರ್ಷವೇ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದರು. ವಾರೆಂಟ್ ಜಾರಿಯಾಗಿರುವುದರಿಂದ ಈ ಭಾಗದಲ್ಲಿ ರೈತರು ಆತಂಕಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವಿದ್ದಾಗಲೂ ವಾರೆಂಟ್ ಜಾರಿ ಮಾಡಿದ್ದು ಎಷ್ಟು ಸರಿ? ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡ ರೈತರು ಸಾಲದ ಕಂತು ಪಾವತಿಸುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ರೈತರ ಪ್ರಶ್ನೆ.

English summary
Notices have been issued to the two farmers in Belgaum district despite the order of the District Collector.warrant has been issued to the farmers by Ramadurga police on the orders of the Kolkata court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X