ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಳಗಾವಿ; ITBP ಕೇಂದ್ರದಿಂದ ಎರಡು ಎಕೆ 47 ರೈಫಲ್ ನಾಪತ್ತೆ

|
Google Oneindia Kannada News

ಬೆಳಗಾವಿ, ಆಗಸ್ಟ್ 19: ಬೆಳಗಾವಿ ಜಿಲ್ಲೆಯ ಹಾಲಭಾವಿ ಗ್ರಾಮದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ (ITBP) ಕ್ಯಾಂಪಿನಿಂದ ಎರಡು ಎಕೆ - 47 ರೈಫಲ್‌ಗಳು ಕಾಣೆಯಾಗಿವೆ.

ಹಾಲಭಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ಎಕೆ-47 ರೈಫಲ್​ಗಳು ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯ ರಾಜೇಶ್ ಕುಮಾರ್ ಮತ್ತು ಸಂದೀಪ್ ಮೀನಾ ಅವರಿಗೆ ಸೇರಿದವು.

ಸಿಐಜೆಡಬ್ಲ್ಯು (counter-insurgency and jungle warfare) ಶಾಲೆಯಲ್ಲಿ ಆಗಸ್ಟ್​ 17ರಂದು ಇರಿಸಲಾಗಿದ್ದ ಎರಡು ಎಕೆ-47 ರೈಫಲ್​ಗಳು ಕಾಣೆಯಾಗಿವೆ. ಈ ಬಗ್ಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಐಟಿಬಿಪಿ ಅಧಿಕಾರಿಗಳು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Two AK 47 Rifles Missing From ITBP Training Campus In Belagavi

ರೈಫಲ್ ಕಳುವು ಪ್ರಕರಣ ಭಾರಿ ಆತಂಕಕ್ಕೆ ಕಾರಣವಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಪೊಲೀಸ್ ಆಯುಕ್ತ ಎಂ.ಬಿ. ಬೋರಲಿಂಗಯ್ಯ ಅವರು ಪ್ರಕರಣದ ತನಿಖೆಗಾಗಿ ಉಪ ಆಯುಕ್ತರಾದ (ಅಪರಾಧ) ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ. ನಗರ ಪೊಲೀಸರ ತಂಡ ಆಗಸ್ಟ್ 18ರಂದು ಸಿಐಜೆಡಬ್ಲ್ಯು ಶಾಲೆಗೆ ಭೇಟಿ ನೀಡಿತ್ತು.

ಐಟಿಬಿಪಿಯು ಜುಲೈ 29ರಿಂದ ಬೆಳಗಾವಿ ಜಿಲ್ಲೆಯ ಹಾಲಭಾವಿ ಗ್ರಾಮದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಕ್ಯಾಂಪಿನಲ್ಲಿ ನಕ್ಸಲ್ ನಿಗ್ರಹ ತರಬೇತಿ ಶಿಬಿರ ನಡೆಸುತ್ತಿದೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ದೂರಿನ ಪ್ರಕಾರ, ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯ ರಾಜೇಶ್ ಕುಮಾರ್ ಮತ್ತು ಸಂದೀಪ್ ಮೀನಾ ಅವರು ಹೊತ್ತೊಯ್ದ ಎರಡು ಎಕೆ 47 ರೈಫಲ್‌ಗಳನ್ನು ಆಗಸ್ಟ್ 17 ರಂದು 'ವಾಡಿಕೆಯ ಪ್ರೋಟೋಕಾಲ್ ಮತ್ತು ಮುನ್ನೆಚ್ಚರಿಕೆ' ಪ್ರಕಾರ ಶಾಲೆಯಲ್ಲಿ ಇರಿಸಲಾಗಿತ್ತು, ಆದರೆ ಆಗಸ್ಟ್ 17 ರಂದು ರೈಫಲ್‌ಗಳು ಕಾಣೆಯಾಗಿದ್ದಾವೆ" ಎಂದು ತಿಳಿಸಲಾಗಿದೆ.

English summary
Two AK 47 rifles missing from ITBP training campus in Halbhavi village in Belagavi. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X