ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಠುಸ್ ಆದ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್.01: ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್ ಇಂದು ಗುರುವಾರ ಕರಾಳ ದಿನಾಚರಣೆ ಆಚರಿಸುತ್ತಿದೆ.

ಬೆಳಗಾವಿಯ ಸಂಭಾಜಿ ಉದ್ಯಾನವನದಲ್ಲಿ ಎಂಇಎಸ್ ಕಾರ್ಯಕರ್ತರು ಭಾಗವಹಿಸಿದ್ದು, ಮಾಜಿ ಶಾಸಕರಾದ ಸಂಭಾಜಿ ಪಾಟೀಲ್, ಮನೋಹರ ಕಿಣೇಕರ್ ನೇತೃತ್ವದಲ್ಲಿ ಕರಾಳ ದಿನಾಚರಣೆ ನಡೆಯುತ್ತಿದೆ.

ಕನ್ನಡ ರಾಜ್ಯೋತ್ಸವದಂದು ಕಿರಿಕ್ ಮಾಡಲು ಅನುಮತಿ ಕೇಳಿದ ಎಂಇಎಸ್‌ಕನ್ನಡ ರಾಜ್ಯೋತ್ಸವದಂದು ಕಿರಿಕ್ ಮಾಡಲು ಅನುಮತಿ ಕೇಳಿದ ಎಂಇಎಸ್‌

ಸಂಭಾಜಿ ಉದ್ಯಾನವನದಿಂದ ಗೋವಾವೇಸ್ ವರೆಗೂ ಕರಾಳ ದಿನದ ಬೈಕ್ ರಾಲಿ ನಡೆದಿದ್ದು, ನಾಡದ್ರೋಹಿ ಎಂಇಎಸ್ ಗೆ ಪೋಲಿಸ್ ಇಲಾಖೆ ಷರತ್ತು ಬದ್ಧ ಅನುಮತಿ ನೀಡಿದೆ. ಕರ್ನಾಟಕ ಸರಕಾರ ವಿರೋಧಿ ಹಾಗೂ ಪ್ರಚೋದನಾತ್ಮಕ ಘೋಷಣೆಗಳು ಕೂಗದಂತೆ ಷರತ್ತು ಸಹ ವಿಧಿಸಿದೆ.

Traitor MES today celebrates a dark day on Thursday

ಆದರೆ ನಾಡದ್ರೋಹಿ ಎಂಇಎಸ್ ನಡೆಸುತ್ತಿರುವ ಕರಾಳ ದಿನಾಚರಣೆಗೆ ಮರಾಠಿ ಭಾಷಿಕರ ಬೆಂಬಲ ಸಿಕ್ಕಿಲ್ಲ. ರಾಲಿಯಲ್ಲಿ ನೂರಾರು ಜನ ಮಾತ್ರ ಭಾಗಿಯಾಗಿದ್ದು, ನಾಡ ವಿರೋಧಿ ಘೋಷಣೆ ಕೂಗಿದ್ದಾರೆ.

 ಮರಾಠಿ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಕನ್ನಡಪರ ಸಂಘಟನೆ ಒಕ್ಕೂಟ ಆಗ್ರಹ ಮರಾಠಿ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಕನ್ನಡಪರ ಸಂಘಟನೆ ಒಕ್ಕೂಟ ಆಗ್ರಹ

ಅಷ್ಟೇ ಅಲ್ಲ, ನಿನ್ನೆ ರಾತ್ರಿ ಕೊಂಡಸಕೊಪ್ಪ ಗ್ರಾಮದ ಕನ್ನಡ ಶಾಲೆಯ ಮೇಲೆ ಕಪ್ಪು ಬಾವುಟ ಹಾರಿಸಿ ನಾಡದ್ರೋಹಿ ಎಂಇಎಸ್ ಎಂದಿನಂತೆ ತನ್ನ ಪುಂಡಾಟ ಮುಂದುವರೆಸಿದೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Traitor MES today celebrates a dark day on Thursday

 ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ

ಘಟನೆ ತಿಳಿದು ಬಂದ ಕನ್ನಡ ಪರ ಕಾರ್ಯಕರ್ತ ಕಪ್ಪು ಬಾವುಟ ಕಿತ್ತೆಸೆದು, ನಂತರ ಪೊಲೀಸರು ರಾಷ್ಟ್ರ ಧ್ವಜ ಹಾರಿಸಿದ್ದಾರೆ.

English summary
Traitor MES today celebrates a dark day on Thursday. Under the leadership of Former MLAs Sambhaji Patil and Manohar Kinekar celebrates a dark day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X