ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

CRPF ಯೋಧನಿಗೆ ಹಿಂಸೆ: ಸದಲಗಾ ಪಿಎಸ್‌ಐ ಅಮಾನತು

|
Google Oneindia Kannada News

ಬೆಳಗಾವಿ, ಏಪ್ರಿಲ್ 29: ಸಿಆರ್‌ಪಿಎಪ್ ಕೋಬ್ರಾ ಪಡೆಯ ಯೋಧ ಸಚಿನ್ ಸಾವಂತ್ ಮೇಲೆ ಅಮಾನವೀಯ ವರ್ತನೆ ತೋರಿದ್ದಾರೆ ಎಂಬ ಆರೋಪದ ಮೇಲೆ ಚಿಕ್ಕೋಡಿ ತಾಲೂಕಿನ ಸದಲಗಾ ಠಾಣೆಯ ಪಿಎಸ್ಐ ಬುಧವಾರ ಅಮಾನತಾಗಿದ್ದಾರೆ.

ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದ ಬಗ್ಗೆ ಸದಲಗಾ ಪೊಲೀಸರ ವರ್ತನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಹಾಗೂ ಕರ್ತವ್ಯ ಲೋಪ ಆರೋಪದಡಿ ಪಿಎಸ್ಐ ಅನಿಲ್ ಕುಂಬಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದ್ದಾರೆ.

ಸಿಆರ್​ಪಿಎಫ್ ಕೋಬ್ರಾ ಕಮಾಂಡೋ ಬಂಧನ ಪ್ರಕರಣ: ತನಿಖೆಗೆ ಆದೇಶಸಿಆರ್​ಪಿಎಫ್ ಕೋಬ್ರಾ ಕಮಾಂಡೋ ಬಂಧನ ಪ್ರಕರಣ: ತನಿಖೆಗೆ ಆದೇಶ

ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪಿಎಸ್ಐ ಅನಿಲ್ ಕುಂಬಾರ್ ಕರ್ತವ್ಯ ಲೋಪ ಕಂಡು ಬಂದಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಘಟನೆ ನಡೆದ ದಿನವೇ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ಮರುದಿನ ಪತ್ರ ರವಾನಿಸಲಾಗಿತ್ತು. ತನಿಖೆ ಮುಂದುವರೆದಿದ್ದು ಪೇದೆಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Torture On CRPF Police Constable In Belagavi District: Sadalaga PSI Suspended

ಏಪ್ರಿಲ್​ 23ರಂದು ಯೋಧನನ್ನು ಚೈನಿನಲ್ಲಿ ಕಟ್ಟಿಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸಬ್‌ಇನ್ಸ್‌ಪೆಕ್ಟರ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

English summary
Torture On CRPF Police Constable In Belagavi District: Sadalaga PSI Suspended.IGP Raghavendra Suhas said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X