ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕಾಕ್ ಚುನಾವಣಾ ಕಣದಲ್ಲಿ ಸಹೋದರರ ಸವಾಲ್, ಪೂಜಾರಿಗೆ ಎಚ್ ಡಿಕೆ ಸಾಥ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 18: ಉಪಚುನಾವಣೆಗೆ ಗೋಕಾಕ್ ಅಖಾಡ ಸಿದ್ಧಗೊಳ್ಳುತ್ತಿದೆ. ಜಾರಕಿಹೊಳಿ ಸಹೋದರರ ಸವಾಲ್ ನಿಂದ ಗೋಕಾಕ್ ಇನ್ನಷ್ಟು ಕುತೂಹಲ ಕೆರಳಿಸಿದೆ. ಅನರ್ಹ ಶಾಸಕನಾಗಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದರೆ, ಲಖನ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಉಪಚುನಾವಣೆಗೆ ಕೆಲವೇ ದಿನಗಳಿದ್ದು, ಎಲ್ಲೆಲ್ಲೂ ಸವಾಲಿಗೆ ಸಿದ್ಧತೆ ನಡೆಯುತ್ತಿದೆ.

ಈ ನಡುವೆ ನಿನ್ನೆಯಷ್ಟೆ ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿಗೆ ಟಿಕೆಟ್ ಘೋಷಿಸುವ ಮೂಲಕ ಜೆಡಿಎಸ್ ಗೋಕಾಕ್ ಉಪ ಚುನಾವಣಾ ಕಣಕ್ಕೆ ಕಾಲಿಟ್ಟಿತ್ತು. ಇದೀಗ ಈ ಮೂವರ ನಡುವಿನ ಹಣಾಹಣಿಗೆ ಗೋಕಾಕ್ ಕಣ ಸಜ್ಜಾಗುತ್ತಿದೆ.

 ಸಹೋದರರ ನಿದ್ದೆಗೆಡಿಸಿದ ಪೂಜಾರಿ

ಸಹೋದರರ ನಿದ್ದೆಗೆಡಿಸಿದ ಪೂಜಾರಿ

ಅಶೋಕ ಪೂಜಾರಿ ನಾಮಪತ್ರ ಸಲ್ಲಿಸಿರುವುದು ಸಹೋದರರ ನಿದ್ದೆ ಗೆಡಿಸಿರುವುದಂತೂ ಹೌದು. ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ ಪೂಜಾರಿ ಇದೀಗ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನ ಮಾಡಿದ್ದ ಜಾರಕಿಹೊಳಿ ವಿರುದ್ಧ ಇದು ಸೇಡಿನಂತೆಯೂ ಕೆಲಸ ಮಾಡಿದೆ. ಅಶೋಕ ಪೂಜಾರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಾಥ್ ನೀಡಿರುವುದು ರಮೇಶ್ ಜಾರಕಿಹೊಳಿ ವಿರುದ್ಧದ ಸ್ಪರ್ಧೆಯಂತೆಯೂ ಕಾಣುತ್ತಿದೆ. ಗೋಕಾಕ್ ತಹಶೀಲ್ದಾರ್ ಕಚೇರಿಯಲ್ಲಿ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.

ಲಖನ್ V/S ರಮೇಶ್: ಗೋಕಾಕ್ ಚುನಾವಣೆ ಕುತೂಹಲದ ಕಣಲಖನ್ V/S ರಮೇಶ್: ಗೋಕಾಕ್ ಚುನಾವಣೆ ಕುತೂಹಲದ ಕಣ

 ಕಾಂಗ್ರೆಸ್ ನಿಂದ ಕಣಕ್ಕಿಳಿದ ಲಖನ್

ಕಾಂಗ್ರೆಸ್ ನಿಂದ ಕಣಕ್ಕಿಳಿದ ಲಖನ್

ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಲಖನ್ ಅಭಿಮಾನಿಗಳು ಕೊಳವಿ ಹನುಮಂತ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ಸ್ಟ್ಯಾಂಡ್ ಮಾರ್ಗವಾಗಿ ಮೆರವಣಿಗೆ ಸಾಗಿ ತಹಶೀಲ್ದಾರ್ ಕಚೇರಿಯಲ್ಲಿ ಲಖನ್ ಜಾರಕಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಲಖನ್ ಜಾರಕಿಹೊಳಿಗೆ ಸಹೋದರ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.

 ನಾಮಪತ್ರ ಸಲ್ಲಿಸಿದ ರಮೇಶ್ ಜಾರಕಿಹೊಳಿ

ನಾಮಪತ್ರ ಸಲ್ಲಿಸಿದ ರಮೇಶ್ ಜಾರಕಿಹೊಳಿ

ಈ ಕಡೆ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎನ್ ಎಸ್ ಎಫ್ ಕಚೇರಿಯಿಂದ ಮೆರವಣಿಗೆ ಆರಂಭವಾಗಿ ಕೊಳವಿ ಹನುಮಂತ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ಸ್ಟ್ಯಾಂಡ್ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು. ರಮೇಶ ಜಾರಕಿಹೊಳಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಸಾಥ್ ನೀಡಿದ್ದಾರೆ.

ಆರೋಪಕ್ಕೆ ಉತ್ತರವಾಗಿ ಗಳಗಳನೆ ಅತ್ತ ಅಶೋಕ ಪೂಜಾರಿಆರೋಪಕ್ಕೆ ಉತ್ತರವಾಗಿ ಗಳಗಳನೆ ಅತ್ತ ಅಶೋಕ ಪೂಜಾರಿ

 ಗೋಕಾಕ್ ನಲ್ಲಿ ಸಹೋದರರ ಸವಾಲ್

ಗೋಕಾಕ್ ನಲ್ಲಿ ಸಹೋದರರ ಸವಾಲ್

ನಿನ್ನೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗೋಕಾಕ್‌ನಲ್ಲಿ ಸಹೋದರರ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವುದು ಖಚಿತವಾಗಿತ್ತು. ಬಿಜೆಪಿಗಿಂತ ಮೊದಲೇ ಉಪಚುನಾವಣೆಯ ತಯಾರಿ ನಡೆಸಿದ್ದ ಕಾಂಗ್ರೆಸ್ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿತ್ತು. ಉಪ ಚುನಾವಣೆ ಮುಗಿಯುವವರೆಗೂ ಲಖನ್ ಜಾರಕಿಹೊಳಿ ತನ್ನ ತಮ್ಮ ಅಲ್ಲ ತನ್ನ ಎದುರಾಳಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಅದರಂತೆಯೇ ಗೋಕಾಕ್‌ನಲ್ಲಿ ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ ಕಣಕ್ಕಿಳಿದಿದ್ದು, ಇತ್ತ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಗೋಕಾಕ್ ಚುನಾವಣೆ ಬಾರಿ ಕುತೂಹಲವನ್ನು ಮೂಡಿಸಿದೆ.

ಇಂದು ಅನರ್ಹ ಶಾಸಕರ ನಾಮಪತ್ರ ಸಲ್ಲಿಕೆ: ಬಿಜೆಪಿಯಲ್ಲಿ ಅಸಮಾಧಾನದ ಹೊಗೆಇಂದು ಅನರ್ಹ ಶಾಸಕರ ನಾಮಪತ್ರ ಸಲ್ಲಿಕೆ: ಬಿಜೆಪಿಯಲ್ಲಿ ಅಸಮಾಧಾನದ ಹೊಗೆ

English summary
The Gokak is preparing for the by-election. Gokak is even more curios centre by the Jarakiholi brothers challenge. Today three candidates from gokak filed nomination
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X