ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋರ್ ವೆಲ್ ಮೃತ್ಯುಕೂಪಕ್ಕೆ ಇನ್ನೆಷ್ಟು ಜನ ಬಲಿಯಾಗಬೇಕು..?

ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಕೊಳವೆಬಾವಿ ದುರಂತಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಜನಪದ ನಾಣ್ಣುಡಿಯೊಂದಿದೆ. ಕೆರೆಗೆ ಹಾರ (ಬಲಿ) ನೀಡಿದರೆ ಕೆರೆಯಲ್ಲಿ ಜಲಧಾರೆ ಹರಿಯುತ್ತಿತ್ತು ಎಂಬುದು ಈಗಲೂ ಜನಜನಿತವಾದದ್ದು. ಆದರೆ ಈ ಮಾತು ಕಾವೇರಿ ದುರಂತಕ್ಕೆ ಸ್ವಲ್ಪ ಸಮೀಪವಿದ್ದಂತಿದೆ. ಹೌದು. ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯ ಮುಂದುವರಿದರೆ ವಿಫಲವಾದ ಕೊಳವೆ ಬಾವಿಗಳು ಮುಗ್ಧ ಕಂದಮ್ಮಗಳನ್ನು ಹಾರವಾಗಿ ಬಲಿ ತೆಗೆದುಕೊಳ್ಳಲು ಬಾಯ್ದೆರೆದು ನಿಂತಿವೆ.

ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಕೊಳವೆಬಾವಿ ದುರಂತಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 2000ರದಿಂದೀಚೆಗೆ ಕಳೆದ 17 ವರ್ಷಗಳಲ್ಲಿ 9 ಕೊಳವೆ ಬಾವಿ ದುರಂತಗಳು ನಡೆದಿವೆ. ಆದರೂ, ಜಮೀನು ಮಾಲೀಕರು ಮಾತ್ರ ಎಚ್ಚರಿಕೆ ವಹಿಸುತ್ತಿಲ್ಲ. ಬೋರ್ ವೆಲ್ ಕೊರೆದ ಬಳಿಕ ವಿಫಲವಾದ ಕೊಳವೆ ಬಾವಿಗಳನ್ನ ಮುಚ್ಚದಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ.[ಕೊಳವೆಬಾವಿಗೆ ಬಿದ್ದ ಮಗು: ನಾನೇನು ದೇವ್ರಾ, ಸಚಿವರ ಉಡಾಫೆ]

ಬೋರ್ ವೆಲ್ ತೆಗೆದ ಬಳಿಕ ಅವುಗಳನ್ನ ಮುಚ್ಚುವ ಬಗ್ಗೆ 2010ರಲ್ಲೇ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನ ನೀಡಿದೆ. 2014ರಲ್ಲಿ ಬಾಗಲಕೋಟೆಯಲ್ಲಿ ತಿಮ್ಮಣ್ಣ ಎಂಬ ಬಾಲಕ ಕೊಳವೆಬಾವಿಗೆ ಬಿದ್ದು ಸಾವನ್ನಪ್ಪಿದ ಬಳಿಕ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡುವಂತೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಮಾರ್ಗ ಸೂಚಿ ಜಾರಿಮಾಡದ ಕುರಿತಂತೆಯೂ ತರಾಟೆಗೆ ತೆಗೆದುಕೊಂಡಿತ್ತು.

ಬಳಿಕ ಸರ್ಕಾರ ರಾಜ್ಯಾದ್ಯಂತ ಕೊಳವೆ ಬಾವಿ ಮುಚ್ಚಲು ಆದೇಶಿಸಿತ್ತು. ನುರಾರು ಕೊಳವೆಬಾವಿಗಳನ್ನ ಮುಚ್ಚುವ ಕಾರ್ಯವೂ ನಡೆದಿತ್ತು. ಆದರೆ, ಇದಾದ ಬಳಿಕ ಮತ್ತೆ ನಿಲರ್ಕ್ಷ್ಯ ತೋರಿರುವುದು ಬೆಳಗಾವಿಯ ಅಥಣಿಯ ಝಂಜರವಾಡದಲ್ಲಿ ಸ್ಪಷ್ಟವಾಗಿದೆ. ಕೊಳವೆಬಾವಿಗೆ 6 ವರ್ಷದ ಬಾಲಕಿ ಕಾವೇರಿ ಬಿದ್ದಿರುವುದು ಇದಕ್ಕೆ ಸಾಕ್ಷಿ. ಕಾವೇರಿ ಪ್ರಕರಣ ರಾಜ್ಯದಲ್ಲಿ ಘಟಿಸಿದ ಬೋರ್‌ವೆಲ್ ದುರಂತಗಳನ್ನು ಮೆಲಕು ಹಾಕುವಂತೆ ಮಾಡಿದೆ.

ಕೊಳವೆ ಬಾವಿಗೆ ಸಿಲುಕಿ ಬಾರದ ಲೋಕಕ್ಕೆ ಮಗು :

ಕೊಳವೆ ಬಾವಿಗೆ ಸಿಲುಕಿ ಬಾರದ ಲೋಕಕ್ಕೆ ಮಗು :

2000ನೇ ಇಸವಿ. ದಾವಣಗೆರೆ ನಗರದ ಯಲ್ಲಮ್ಮ ನಗರದ ಕರಿಯ ಎಂಬ ಬಾಲಕ ಕೊಳವೆ ಬಾವಿಯಲ್ಲಿ ಸಿಲುಕಿದ್ದ. ಮಗುವನ್ನು ರಕ್ಷಿಸಲು ಸತತ ಪ್ರಯತ್ನ ನಡೆಸಲಾಯಿತಾದರೂ ಕರಿಯ ಅಸುನೀಗಿದ್ದ. ರಾಜ್ಯದ ಮಟ್ಟಿಗೆ ಬೋರ್‌ವೆಲ್ ಗೆ ಬಿದ್ದು ಮೃತಪಟ್ಟ ಘಟನೆ ಇದೇ ಮೊದಲನೆಯದು.

ಬದುಕಿದಳು ಕಲ್ಲವ್ವ

ಬದುಕಿದಳು ಕಲ್ಲವ್ವ

2006: ಬಾಗಲಕೋಟ ಜಿಲ್ಲೆ ಸಿಕ್ಕೇರಿ ಗ್ರಾಮದಲ್ಲಿ ಕಲ್ಲವ್ವ (26) ತೆರೆದ ಕೊಳವೆ ಬಾವಿಗೆ ಕಾಲುಜಾರಿ ಬಿದ್ದಿದ್ದಳು. ಹೊಲಕ್ಕೆ ನೀರು ಹಾಯಿಸಲು ತೆರಳಿದ್ದಾಗ ಘಟನೆ ನಡೆದಿತ್ತು. ಪೊಲೀಸರು 60 ಅಡಿ ಕೊಳವೆ ಬಾವಿಗೆ ಸಮಾನಾಂತರವಾಗಿ ಸುರಂಗ ಕೊರೆದು ಕಲ್ಲವ್ವಳನ್ನು ಸುರಕ್ಷಿತವಾಗಿ ರಕ್ಷಿಸಿದ್ದರು.[ಕೊಳವೆ ಬಾವಿಯಲ್ಲಿ ಬಿದ್ದ ಬಾಲಕಿ ಕಾವೇರಿ ಬದುಕಿ ಬರಲಿ]

ಮರುಕಳಿಸಿದ ಸಂದೀಪನ ನೆನಪು

ಮರುಕಳಿಸಿದ ಸಂದೀಪನ ನೆನಪು

2007ರ ಏ.24ರಂದು ಮಧ್ಯಾಹ್ನ 12.30- ರಾಯಚೂರು ಜಿಲ್ಲೆ ನೀರಮಾನ್ವಿಗ್ರಾಮದ ಸಂದೀಪ (9) ಊರಿನ ಸಮೀಪದ ಮಾವಿನ ತೋಟದಲ್ಲಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಹಟ್ಟಿ ಚಿನ್ನದ ಗಣಿ ಕಂಪನಿ ಸೇರಿ ನಾನಾ ತಜ್ಞರ ತಂಡಗಳು ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಿದರೂ ಸಂದೀಪನನ್ನು ಜೀವ ಸಹಿತ ಉಳಿಸಿಕೊಳ್ಳಲಾಗಿರಲಿಲ್ಲ.[ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]

ನವಜೀವನ ಪಡೆದಿದ್ದ ನವನಾಥ

ನವಜೀವನ ಪಡೆದಿದ್ದ ನವನಾಥ

2007: ಗುಲ್ಬರ್ಗ ಜಿಲ್ಲೆ ಆಳಂದ ತಾಲೂಕಿನ ಭೂಸನೂರ ಗ್ರಾಮದ ಹೊರವಲಯದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಐದು ವರ್ಷದ ಬಾಲಕ ನವನಾಥ ಜೀವಂತವಾಗಿ ಮರಳಿ ಬಂದು ನವಜೀವನ ಪಡೆದುಕೊಂಡಿದ್ದ. ದೇವಂತಗಿ ಗ್ರಾಮದ ನವನಾಥ ಕಾಂಬಳೆ ಎಂಬಾತ 2007 ರಲ್ಲಿ ಬೋರ್‌ವೆಲ್ ನೊಳಗೆ ಬಿದ್ದಿದ್ದ. ಜಿಲ್ಲಾಡಳಿತ ವಹಿಸಿದ್ದ ಕಾಳಜಿಯಿಂದ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಣೆ ಮಾಡಲಾಗಿತ್ತು. ಈಗ ಆತ ಸ್ವಂತ ಊರಲ್ಲಿದ್ದಾನೆ.[ಗದಗ ಕೊಳವೆ ಬಾವಿ ದುರಂತ: ಕಾರ್ಮಿಕರಿಬ್ಬರೂ ಸಾವು]

ಕಾಣದಾದ ಕಾಂಚನಾ

ಕಾಣದಾದ ಕಾಂಚನಾ

2009ರ ಆಗಸ್ಟ್ 3. ಮಧ್ಯಾಹ್ನ 4.30ರ ಸಮಯ. ಕಾಂಚನಾ ಭರಮಣ್ಣ ಪೂಜಾರಿ (6)ಇಂಡಿ ತಾಲೂಕಿನ ದೇವರನಿಂಬರಗಿಯ ತೋಟದ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು. ವಾರಗಟ್ಟಲೆ ಕಾರ್ಯಾಚರಣೆ ನಡೆಯಿತು. 60ಅಡಿ ಆಳದಲ್ಲಿ ಬಿದ್ದ ಕಾಂಚಾನಳ ಕಾರ್ಯಾಚರಣೆಗೆ ಜಿಲ್ಲಾಡಳಿತ 17 ಲಕ್ಷಕ್ಕೂ ಅಧಿಕ ಮೊತ್ತ ವ್ಯಯಿಸಿತ್ತು.[500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ ಮಗು ಸಾವು]

ಬಾರದ ಲೋಕಕ್ಕೆ ಸಾಗಿದ ತಿಮ್ಮಣ್ಣ

ಬಾರದ ಲೋಕಕ್ಕೆ ಸಾಗಿದ ತಿಮ್ಮಣ್ಣ

2014 ಆಗಸ್ಟ್ 4, ಬಾಗಲಕೋಟ ಜಿಲ್ಲೆಯ ಸೂಳಿಕೆರಿಯಲ್ಲಿ ತಿಮ್ಮಣ್ಣ ಎಂಬ ಪುಟ್ಟ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ಜಮೀನಿನ ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣ 160 ಅಡಿ ಕೆಳಗಿಳಿದಿದ್ದ. ಅತಿಯಾದ ಆಳದಲ್ಲಿ ಬಾಲಕ ಸಿಲುಕಿದ್ದ ಪರಿಣಾಮ ಕಾರ್ಯಾಚರಣೆ ಹೇಗೆ ನಡೆಸಬೇಕು ಎಂಬ ಬಗ್ಗೆ ದೊಡ್ಡ ಜಿಜ್ಞಾಸೆ ಜಿಲ್ಲಾಡಳಿತವನ್ನು ಕಾಡಿತ್ತು. ನೂರಾರು ಸಲಹೆ, ತಜ್ಞರ ನೆರವಿನ ನಂತರ ರೋಬೊ ಮಾದರಿ ಕಾರ್ಯಾಚರಣೆ ಫಲ ನೀಡಲಿಲ್ಲ. ತಿಮ್ಮಣ್ಣ ಬಾರದ ಲೋಕಕ್ಕೆ ತೆರಳಿದ್ದ.

ಹೀಗಾಗಿ ಈ ಬಗೆಯ ಘಟನೆಗಳು ಮತ್ತೆ ಮತ್ತೆ ಮರುಕಳಿಸಿ ಅಪಾರವಾಗಿ ಹಳಹಳಿಸುವಂತೆ ಮಾಡುತ್ತವೆ. ನಮ್ಮ ಉದಾಸೀನತೆಯಿಂದ ಕೊನೆಗೂ ನಮ್ಮಲ್ಲಿ ಉಳಿದದ್ದು ಹಳಹಳಿಕೆ.. ಬೇಸರ.. ಅಸಹಾಯಕತೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಇದರ ವಿರುದ್ಧ ಸಮರ ಸಾರೋಣ. ನಾಳೆಯ ನೆಮ್ಮದಿಗಾಗಿ ಬದುಕೋಣ. ಇದು ಒನ್ ಇಂಡಿತಾ ಅಭಿಲಾಷೆ ಕೂಡ.[ಕೊಳವೆ ಬಾವಿ ಮುಚ್ಚದಿದ್ದರೆ ಪೊಲೀಸ್ ಕೇಸ್]

English summary
In a tragic incident, where a 6 years old Kaveri a girl from Athani, Belagavi, has fallen into bore well is still struggling for lif. The insident reminds so many similar incident which took place in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X