ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಕೊರೊನಾ ವೈರಸ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಇನ್ನೂ ಆಗಿಲ್ಲ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 5: ಮಹಾಮಾರಿ ಕೊರೊನಾ ವೈರಸ್ ಸೊಂಕಿನಿಂದ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಇಬ್ಬರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಮೃತರ ಅಂತ್ಯಕ್ರಿಯೆ ಮಾಡದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಶನಿವಾರ ಮಧ್ಯಾಹ್ನ ರಾಯಬಾಗ ತಾಲ್ಲೂಕಿನ ಕುಡಚಿಯ 70 ವರ್ಷದ ವೃದ್ಧ, ಬೆಳಗಾವಿಯ ವೀರಭದ್ರನಗರದ 48 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರ ಶವಗಳನ್ನು ಕೋವಿಡ್ ಮಾರ್ಗಸೂಚಿಯ ಪ್ರಕಾರ ಪ್ಯಾಕ್ ಮಾಡಲಾಗಿದೆ. ಆದರೆ ಅಂತ್ಯಕ್ರಿಯೆ ಮಾಡೋದು ಯಾವಾಗ ಎಂದು ಮೃತರ ಕುಟುಂಬಸ್ಥರು ನಿನ್ನೆಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೇ ಕಾದು ಕುಳಿತಿದ್ದಾರೆ.

ಕೊರೊನಾ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆಕೊರೊನಾ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ

ಈ ಕುರಿತು ಬೀಮ್ಸ್ ನಿರ್ದೇಶಕ ದಾಸ್ತಿಕೊಪ್ಪ ಅವರನ್ನು ವಿಚಾರಿಸಿದಾಗ, ಇಬ್ಬರ ಅಂತ್ಯಕ್ರಿಯೆ ಮಾಡುವಂತೆ DHO ಅವರಿಗೆ ಹೇಳಿದ್ದೇವೆ, ಬೆಳಗಾವಿಯ NGO ದವರು ಮೃತರ ಅಂತ್ಯಕ್ರಿಯೆ ಮಾಡುತ್ತಾರೆ. ರಾತ್ರಿ ಹೊತ್ತಿನಲ್ಲಿ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ, ಹೀಗಾಗಿ ಅಂತ್ಯಕ್ರಿಯೆ ಇವತ್ತು ಮಾಡುತ್ತೇವೆ ಎಂದು ಹೇಳಿದ್ದಾರೆ.

Belagavi: The Funeral Of Those Who Died Of Coronavirus Is Not Yet Over

ಸಂಡೇ ಲಾಕ್ ಡೌನ್: ಬೆಳಗಾವಿಯಲ್ಲಿ ಸಂಪೂರ್ಣ ಬಂದ್ಸಂಡೇ ಲಾಕ್ ಡೌನ್: ಬೆಳಗಾವಿಯಲ್ಲಿ ಸಂಪೂರ್ಣ ಬಂದ್

ಮೃತರ ಅಂತ್ಯಕ್ರಿಯೆ ಆರೋಗ್ಯ ಇಲಾಖೆ ಮಾಡಬೇಕೋ, ಮಹಾನಗರ ಪಾಲಿಕೆಯವರು ಮಾಡಬೇಕೋ ಎನ್ನುವ ಕಿತ್ತಾಟದಿಂದ ಮೃತರ ಅಂತ್ಯಕ್ರಿಯೆಗೆ ವಿಳಂಬವಾಗುತ್ತಿದೆ ಎನ್ನಲಾಗಿದ್ದು, ಮೃತರ ಕುಟುಂಬಸ್ಥರು ಮಾತ್ರ ಅಸಹಾಯಕರಾಗಿ ಅಂತ್ಯಕ್ರಿಯೆ ಯಾವಾಗ ಎಂದು ಕಾಯುತ್ತಿದ್ದಾರೆ.

English summary
Two Coronavirus Infection people died at Belagavi Bhims hospital on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X