India
 • search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿ ಜೊತೆಗೆ ಶಿಕ್ಷಕನ ಲವ್ವಿಡವ್ವಿ; ಧರ್ಮದೇಟು ಕೊಟ್ಟ ಜನ

|
Google Oneindia Kannada News

ಬೆಳಗಾವಿ, ಜೂ 09: ವಿದ್ಯಾರ್ಥಿನಿಯರ ಜೊತೆ ಲವ್ವಿಡವ್ವಿ ನಡೆಸಿ, ವಿಡಿಯೋ ಮಾಡಿಕೊಂಡ ಶಿಕ್ಷಕನಿಗೆ ಜನರು ಧರ್ಮದೇಟು ಕೊಟ್ಟ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೈರವಾಡ ಗ್ರಾಮದ ನಿವಾಸಿಯಾಗಿರೋ ಮಹೇಶ ಬಿರಾದಾರ (44) ಎಂಬ ಶಿಕ್ಷಕ ವಿದ್ಯಾರ್ಥಿನಿಗೆ ಯೊಬ್ಬಳಿಗೆ ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಪಕ್ಷಕ್ಕಾಗಿ ಇನ್ನೂ 10 ವರ್ಷ 24 ಗಂಟೆ ದುಡಿಯಲು ಸಿದ್ದ; ಯಡಿಯೂರಪ್ಪ ಪಕ್ಷಕ್ಕಾಗಿ ಇನ್ನೂ 10 ವರ್ಷ 24 ಗಂಟೆ ದುಡಿಯಲು ಸಿದ್ದ; ಯಡಿಯೂರಪ್ಪ

ಬಾಲಕಿಯನ್ನು ಪುಸಲಾಯಿಸಿ ರೋಮ್ಯಾನ್ಸ್ ಮಾಡಿದ್ದು, ಮೊಬೈಲ್‌ನಲ್ಲಿ ಪೋಟೋ ತೆಗೆದು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸ್ಟೇಟಸ್ ಹಾಕಿದ ಖದೀಮ ಶಿಕ್ಷಕ; ವಿದ್ಯಾರ್ಥಿನಿ 8ನೇ ತರಗತಿನಲ್ಲಿರುವಾಗಲೇ ಈ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ 10 ನೇ ತರಗತಿಗೆ ಹೋಗುವವರೆಗೂ ಇದೇ ಮುಂದುವರೆದಿತ್ತು.

ಬೆಲೆ ಹೆಚ್ಚಳವೇ ಬಿಜೆಪಿಯ ಸಾಧನೆ: ಸಿದ್ದರಾಮಯ್ಯ ವ್ಯಂಗ್ಯಬೆಲೆ ಹೆಚ್ಚಳವೇ ಬಿಜೆಪಿಯ ಸಾಧನೆ: ಸಿದ್ದರಾಮಯ್ಯ ವ್ಯಂಗ್ಯ

ನಂತರ ವಿದ್ಯಾರ್ಥಿನಿ ಕಾಲೇಜು ಸೇರಿದಾಗ ಮನೆಯಲ್ಲಿ ಆಕೆಗೆ ಮದುವೆ ಗೊತ್ತು ಮಾಡುವ ವೇಳೆ ಶಿಕ್ಷಕ ಈ ಪೋಟೋಗಳನ್ನು ತಮ್ಮ ವಾಟ್ಸ್ಆಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡು ವೈರಲ್ ಮಾಡಿರುವುದು ಆರೋಪ. ವಿದ್ಯಾರ್ಥಿ‌ನಿ ಮುಖ ಕಾಣುವ ಹಾಗೇ ಫೋಟೋ ಕಟ್ ಮಾಡಿ ಸ್ಟೇಟಸ್ ಹಾಕಿದ್ದಾನೆ.

ವಿದ್ಯಾರ್ಥಿನಿ ಜೊತೆಗಿನ ಫೊಟೋ ವೈರಲ್ ಮಾಡಿ ಮದುವೆ ನಿಲ್ಲಿಸುವ ದುರುದ್ದೇಶದಿಂದ ಶಿಕ್ಷಕ ಈ ರೀತಿ ಮಾಡಿರುವುದಾಗಿ ಆರೋಪಿಸಲಾಗಿದೆ. ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಶಿಕ್ಷಕ ಮಹೇಶ ಬಿರಾದಾರ ಮೇಲೆ ಹಲ್ಲೆ ನಡೆಸಲಾಗಿದೆ. ಯುವತಿಯ ಕುಟುಂಬಸ್ಥರು, ಗ್ರಾಮಸ್ಥರು ಶಿಕ್ಷಕನಿಗೆ ಚಪ್ಪಲಿ ಏಟು ನೀಡಿದ್ದಾರೆ.

Teacher Romance With Student Video Viral Villagers Attack On Teacher
   ಬೆಳಗಾವಿಯಲ್ಲಿ ಶಿಕ್ಷಕನಿಗೆ ಬಿತ್ತು ಗೂಸಾ, ಕಾರಣ | Oneindia Kannada

   ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನ ಮೇರೆಗೆ ದೈಹಿಕ ಶಿಕ್ಷಣ ಶಿಕ್ಷಕನ ವಿರುದ್ಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

   English summary
   Teacher romance with a student. He is a working in Belagavi district government high school at Yakkundi village.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X