ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಖಾಸುಮ್ಮನೆ ಆರೋಪ, ಆಕ್ಷೇಪ ಎತ್ತಬೇಡಿ ಎಂದ ಸುರೇಶ ಅಂಗಡಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಸುರೇಶ ಅಂಗಡಿ ಆಕ್ರೋಶ | Oneindia Kannada

ಬೆಳಗಾವಿ, ಸೆಪ್ಟೆಂಬರ್ 6: ಮಾಜಿ ಸಚಿವ ಡಿಕೆಶಿ ಮೇಲೆ ಇಡಿ ದಾಳಿ ವಿಚಾರವಾಗಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಡಿಕೆಶಿ ಇಡಿ ಅಧಿಕಾರಿಗಳ ತನಿಖೆಗೆ ಸಹಕರಿಸಬೇಕು, ಸುಖಾಸುಮ್ಮನೆ ಆರೋಪ, ಆಕ್ಷೇಪ ಎತ್ತಬಾರದು" ಎಂದಿದ್ದಾರೆ.

ಡಿಕೆಶಿ ಬಂಧನದ ಬಗ್ಗೆ ನನ್ನ ಏನೂ ಕೇಳ್ಬೇಡಿ, ಕಾನೂನು ಪ್ರಕಾರ ಎಲ್ಲಾ ಆಗುತ್ತೆ: ಕಾರಜೋಳಡಿಕೆಶಿ ಬಂಧನದ ಬಗ್ಗೆ ನನ್ನ ಏನೂ ಕೇಳ್ಬೇಡಿ, ಕಾನೂನು ಪ್ರಕಾರ ಎಲ್ಲಾ ಆಗುತ್ತೆ: ಕಾರಜೋಳ

ಡಿಕೆಶಿ ಬಂಧನಕ್ಕಾಗಿ ಅವರ ಅಭಿಮಾನಿಗಳು ಪ್ರತಿಭಟನೆ ಕೈಗೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, "ಡಿಕೆಶಿ ಅಭಿಮಾನಿಗಳು ಸುಮ್ಮನೆ ಸಾರ್ವಜನಿಕರ ಆಸ್ತಿ ಹಾನಿ‌ ಮಾಡಬಾರದು. ಈ ಹಿಂದೆ ನನ್ನ ಮತ್ತು ಬಿಜೆಪಿ ಸಂಸದ ಸಿದ್ದೇಶ ಅವರ ಮೇಲೂ ಐಟಿ ದಾಳಿ ಆಗಿದೆ. ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ. ಕಾಂಗ್ರೆಸ್ ಅಂತ ತಿಳಿದು ಯಾರೂ ದಾಳಿ ಮಾಡಲ್ಲ. ಅನುಮಾನ ಬಂದವರ ಮೇಲೆ ದಾಳಿ ಮಾಡಲಾಗುತ್ತದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

Suresh Angadi Spoke About DK Shivakumar In Belagavi

ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದ ಪುತ್ತೂರಿನ ವಕೀಲ ಇವರೇ..!ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದ ಪುತ್ತೂರಿನ ವಕೀಲ ಇವರೇ..!

ಕೇಂದ್ರದಲ್ಲಿ 370 (a) ಜಾರಿ ವಿಚಾರವಾಗಿಯೂ ಮಾತನಾಡಿದ ಅವರು, "ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಂದ ಇದೆಲ್ಲಾ ಸಾಧ್ಯವಾಗಿದೆ. ಅವರಿಗೆ ಅಭಿನಂದನೆ" ಎಂದಿದ್ದಾರೆ. ಜೊತೆಗೆ "ಹಿಂದಿನ ಕಾಂಗ್ರೆಸ್ ಗಾಂಧಿ ಕಾಂಗ್ರೆಸ್ ಆಗಿತ್ತು. ಆದರೆ ಇವತ್ತಿನ ಕಾಂಗ್ರೆಸ್ ಇಟಾಲಿಯನ್ ಕಾಂಗ್ರೆಸ್ ಆಗಿದೆ" ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.

English summary
Minister Suresh Angadi has responded to the ED attack on former minister Dk Shivakumar. Speaking at a press conference, he said, "shivakumar should co operative to Investigation of ED".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X