ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಡೇ ಲಾಕ್ ಡೌನ್: ಬೆಳಗಾವಿಯಲ್ಲಿ ಸಂಪೂರ್ಣ ಬಂದ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 5: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಂಜಾನೆಯೇ ಪೊಲೀಸರು ರಸ್ತೆಗೆ ಇಳಿದಿದ್ದಾರೆ, ವಾಹನ ಮತ್ತು ಜನರ ಓಡಾಟ ಇಲ್ಲವೇ ಇಲ್ಲ. ಜನರಂತೂ ಕಾಣಿಸುತ್ತಿಲ್ಲ, ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಬೆಳಗಾವಿ ನಗರ ಮತ್ತು ಸಂಪೂರ್ಣ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಿದೆ.

ಬೆಳಗಾವಿ ನಗರದಲ್ಲಿ ಹಾಲು, ಔಷಧಿ ಅಂಗಡಿ ಹೊರತುಪಡಿಸಿದರೆ ಬೇರೆ ಯಾವ ಅಂಗಡಿಯೂ ಬಾಗಿಲು ತೆರೆದಿಲ್ಲ. ಬೆಳಗಾವಿಯ ಹೋಲ್ ಸೇಲ್ ತರಕಾರಿಯ ಎಪಿಎಂಸಿ ಮಾರುಕಟ್ಟೆಯೂ ಸಂಪೂರ್ಣವಾಗಿ ಬಂದ್ ಆಗಿದೆ. ಅಗತ್ಯ ಸರಕು ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳ ನಗರ ಪ್ರವೇಶಕ್ಕೆ ಪೊಲೀಸರು ಅನುಮತಿ ನೀಡುತ್ತಿಲ್ಲ.

ಭಾನುವಾರದ ಸಂಪೂರ್ಣ ಲಾಕ್ ಡೌನ್; ರಸ್ತೆಗಿಳಿದ ಪೊಲೀಸರುಭಾನುವಾರದ ಸಂಪೂರ್ಣ ಲಾಕ್ ಡೌನ್; ರಸ್ತೆಗಿಳಿದ ಪೊಲೀಸರು

ನಿಪ್ಪಾಣಿ-ಕುಗನೋಳಿ ಚೆಕ್ ಪೋಸ್ಟ್ ನಲ್ಲೂ ಅಗತ್ಯ ವಸ್ತುಗಳ ಸರಕು ಸಾಗಿಸುವ ವಾಹನಗಳನ್ನು ಮಾತ್ರ ಗಡಿ ಪ್ರವೇಶ ಮಾಡಲು ಅವಕಾಶ ಮಾಡಿ ಕೊಡಲಾಗುತ್ತಿದೆ.

Sunday Lockdown: Complete Bandh In Belagavi

ಬೆಳಗಾವಿ ಮಹಾನಗರದ ಎಲ್ಲ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಪೊಲೀಸರ ಕಣ್ಗಾವಲು ಇದ್ದು, ಬೆಳ್ಳಂ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿರುವ ಪೊಲೀಸರು ಯಾರೊಬ್ಬರು ನಗರ ಪ್ರವೇಶ ಮಾಡದಂತೆ ತಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಒಟ್ಟಾರೆ ಬೆಳಗಾವಿ ನಗರ ಮತ್ತು ಜಿಲ್ಲೆ ಸಂಪೂರ್ಣವಾಗಿ ಲಾಕ್ ಡೌನ್ ಯಶಸ್ವಿಯಾಗಿದೆ.

English summary
In the border district of Belagavi, the police were on the road early in the morning. A complete lockdown is in place in Belagavi city and the entire district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X