ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರ ಪ್ರತಿಭಟನೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 05 : ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹಾಗೂ ಶಿವಸಾಗರ ಶುಗರ್ಸ್ ಕಾರ್ಖಾನೆ ಕಬ್ಬು ಕಳಿಸಿದ ರೈತರಿಗೆ ಬರಬೇಕಾದ ಬಾಕಿ ಹಣ ನೀಡಿದ ಹಿನ್ನಲೆ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕಬ್ಬು ಬೆಳಗಾಗರಿಗೆ ಮೂರು ವರ್ಷದಿಂದ ಬಾಕಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ನಾವು ಕಬ್ಬುಬೆಳೆಯನ್ನು ನಂಬಿಕೊಂಡೇ ನಮ್ಮ ಸಂಸಾರವನ್ನು ಸಾಗಿಸುತ್ತಿದ್ದೇವೆ. ಹಣವನ್ನು ನೀಡದೆ ಸಚಿವ ರಮೇಶ್ ಜಾರಕಿಹೊಳಿ ಸತಾಯಿಸುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ಹಲವಾರು ಬಾರಿ ಬಾಕಿ ಹಣ ಕೊಡಿಸುತ್ತೇವೆ ಸಿದ್ದರಾಮಯ್ಯ ಅವರು ಭರಸವೆ ನೀಡಿದ್ದರು. ಆದರೆ ಇದುವರೆಗೂ ಬಾಕಿ ಬಂದಿಲ್ಲ. ಮುಖ್ಯಮಂತ್ರಿಗಳು ಬಂದು ಬಾಕಿ ಕೊಡಿಸುವರೆಗೆಪ್ರತಿಭಟನೆ ಮುಂದುವರೆಸುತ್ತೇವೆ ಎಂದು ರೈತರು ಹೇಳಿದ್ದಾರೆ. ಬಾಕಿ ಕೊಡದ ಸರ್ಕಾರದ ವಿರುದ್ದ ಬೆಳಗಾವಿ ರೈತರ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

Sugarcane growers protest seeking arrears

ಕಳೆದ ೩ ವರ್ಷ ದಿಂದ ನೂರಾರು ರೈತರ ಕಬ್ಬಿನ ಬಾಕಿ ಇದೆ. ಕಾರ್ಖಾನೆ ಮಾಲೀಕರು ಸ್ಥಳಕ್ಕೆ ಭೇಟಿ ನೀಡುವ ವರೆಗೆ ಧರಣಿ. ಶೀಘ್ರವೇ ಬಾಕಿ ಹಣ ನೀಡವಂತೆ ರೈತರಿಂದ ಆಗ್ರಹಿಸಿದ್ದಾರೆ.

English summary
Sugar cane growers held protest in Belgaum Seeking arrears of three years sugar cane against Soubhagya laxmi sugar factory which was failed to distribute payment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X