ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕ್ ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್ ಲಪಟಾಯಿಸಿದರು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 28: ಚೆನ್ನಾಗಿ ಟಿಕ್ ಟಾಕ್ ಮಾಡಬೇಕೆಂದು ವಿದ್ಯಾರ್ಥಿಗಳು, ಕ್ಯಾಮೆರಾ, ಲಾಪ್ ಟಾಪ್ ಕದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪದವಿ ಓದುತ್ತಿರುವ ವಿದ್ಯಾರ್ಥಿಗಳಾದ ಸಂತೋಷ್, ಸಂಪತ್, ಮತ್ತೊಬ್ಬ ವಿದ್ಯಾರ್ಥಿ ಪ್ರತಿದಿನವೂ ಮೊಬೈಲ್ ನಲ್ಲಿ ಟಿಕ್ ಟಾಕ್ ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಅದು ಅವರಿಗೆ ಅಂದುಕೊಂಡ ಮಟ್ಟಿಗೆ ಲೈಕ್, ಕಮೆಂಟ್ ತರಲಿಲ್ಲ. ಹೀಗಾಗಿ ಫೋಟೋ ಸ್ಟುಡಿಯೋ ಒಂದಕ್ಕೆ ನುಗ್ಗಿದ ಅವರು ಹೈಕ್ವಾಲಿಟಿ ಕ್ಯಾಮೆರಾ, ಲ್ಯಾಪ್ ಟಾಪ್ ಕದ್ದಿದ್ದಾರೆ. ಅದರಿಂದ ವಿಡಿಯೋ ಮಾಡಿ ಟಿಕ್ ಟಾಕ್ ಗೆ ಹಾಕಲು ಶುರು ಮಾಡಿದ್ದಾರೆ.

ಟಿಇಟಿಯಲ್ಲಿ ಅಕ್ರಮದ ವಾಸನೆ: ದಾವಣಗೆರೆಯ ಮನೆಯಲ್ಲಿ ಸಿಕ್ಕಿದ್ದೇನು?ಟಿಇಟಿಯಲ್ಲಿ ಅಕ್ರಮದ ವಾಸನೆ: ದಾವಣಗೆರೆಯ ಮನೆಯಲ್ಲಿ ಸಿಕ್ಕಿದ್ದೇನು?

ಆದರೆ ಅವರ ಚಾಳಿ ಅಲ್ಲಿಗೇ ನಿಲ್ಲಲಿಲ್ಲ. ಆ ಬಳಿಕ 7 ಮನೆಗಳಲ್ಲಿ ಕಳ್ಳತನ ಮಾಡಿದರು. ವಿದ್ಯಾರ್ಥಿಗಳು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ಅವರನ್ನು ಬಂಧಿಸಿ ಒಂದು ಲ್ಯಾಪ್ ಟಾಪ್, ಮೂರು ಕ್ಯಾಮೆರಾ, ಕಿಬೋರ್ಡ್, ಮೆಮೋರಿ ಕಾರ್ಡ್, ಒಂದು ಬೈಕ್ ಹಾಗೂ ಕಾಸ್ಟ್ಯೂಮ್ ಮತ್ತು 1.16 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Students Stolen Laptop And Camera To Record Tiktok In Belagavi

ಬೆಳಗಾವಿ ನಗರದಲ್ಲಿ ಕೆಲವು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ ಪ್ರಕರಣ ಬೇಧಿಸಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಿದ್ದಾರೆ. ಮೂವರ ಬಂಧನದಿಂದಾಗಿ ಏಳು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಲೋಕೇಶ್ ಕುಮಾರ್ ಮನವಿ ಮಾಡಿದ್ದಾರೆ.

English summary
students stole camera, laptop to record tiktok. This incident took place in Belgavi. Undergraduate students Santosh, Sampath, and another student were arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X