ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದೆಂಥಾ ವಿಚಿತ್ರ..? ಬಾಲಕಿಯ ಕಣ್ಣಿನಿಂದ ಬರುತ್ತಿವೆ ಕಲ್ಲುಗಳು!

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಬೆಳಗಾವಿಯ ಹಳ್ಳಿಯೊಂದರಲ್ಲಿ ಬಾಲಕಿಯ ಕಣ್ಣಿನಿಂದ ಹೊರಬರುತ್ತಿದೆ ಕಲ್ಲುಗಳು | Oneindia Kannada

ಬೆಳಗಾವಿ, ಜುಲೈ.05: ಅಚ್ಚರಿಯ ಸಂಗತಿಯೊಂದು ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯ ಇಸ್ಲಾಂಪುರದಲ್ಲಿ ಬೆಳಕಿಗೆ ಬಂದಿದೆ. ನಮಗೆಲ್ಲರಿಗೂ ಕಣ್ಣಿನಿಂದ ನೀರು ಬರುವುದು ಗೊತ್ತು. ಆದರೆ ಇಲ್ಲೊಬ್ಬಳು ಬಾಲಕಿಯ ಕಣ್ಣಲ್ಲಿ ಕಣ್ಣೀರಿನ ಬದಲು ಹರಳು ಅಂದರೆ ಚಿಕ್ಕ ಚಿಕ್ಕ ಬೆಣಚಕಲ್ಲು ಬರುತ್ತಿದೆಯಂತೆ.

ಹೌದು, ನಮಗೆ ನೋಡಲು, ಕೇಳಲು ಇದೊಂತರ ವಿಚಿತ್ರವೆನಿಸಿದರೂ ಇದೇ ಸತ್ಯ. ಆ ಬಾಲಕಿ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದಂತೆ ಒಂದೊಂದೇ ಬೆಣಚಕಲ್ಲು ಉದುರುತ್ತಿವೆ. ಪ್ರತಿ ಒಂದು ಗಂಟೆಗೊಮ್ಮೆ ಬೆಣಚಕಲ್ಲುಗಳು ಬಾಲಕಿಯ ಕಣ್ಣಿಂದ ಹೊರಬರುತ್ತಿವೆ.

ಚಾಮರಾಜನಗರ: ಶಿಕ್ಷಕನ ಎಡವಟ್ಟಿನಿಂದ ವಿದ್ಯಾರ್ಥಿ ಬಾಳಲ್ಲಿ ಕತ್ತಲುಚಾಮರಾಜನಗರ: ಶಿಕ್ಷಕನ ಎಡವಟ್ಟಿನಿಂದ ವಿದ್ಯಾರ್ಥಿ ಬಾಳಲ್ಲಿ ಕತ್ತಲು

ಶಬಾನಾ ಯಾಕೂಬಸಾಬ್ ಮುಜಾವರ್(11) ಎಂಬ ಬಾಲಕಿಯ ಕಣ್ಣಲ್ಲಿ ಈ ರೀತಿ ಬೆಣಚಕಲ್ಲುಗಳು ಉದುರುತ್ತಿದ್ದು, ಕಳೆದ 15 ದಿನಗಳಿಂದ ಈ ರೀತಿ ವಿಚಿತ್ರ ನಡೆಯುತ್ತಿದೆ. ಇದುವರೆಗೆ 120 ಬೆಣಚಕಲ್ಲುಗಳು ಆಕೆಯ ಕಣ್ಣಿಂದ ಉದುರಿವೆ. ಕಲ್ಲು ಎಲ್ಲಿ ಉತ್ಪತ್ತಿಯಾಗುತ್ತಿವೆ ಎಂಬುದು ತಿಳಿಯುತ್ತಿಲ್ಲ.

Stones are coming out of a girls eye

ಹೀಗೆ ಕಣ್ಣುಗಳಿಂದ ಬೆಣಚಕಲ್ಲು ಯಾವಾಗ ಉದುರಲು ಆರಂಭಿಸಿದವೋ, ತಕ್ಷಣವೇ ಶಬಾನಾ ಪೋಷಕರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆಕೆಯ ಕಣ್ಣುಗಳನ್ನು ಪರೀಕ್ಷಿಸಿದ ವೈದ್ಯರು, ನಮಗೂ ಇದು ವಿಚಿತ್ರ ಎನಿಸುತ್ತಿದೆ ಎಂದು ಹೇಳಿ ಕಳುಹಿಸುತ್ತಿದ್ದಾರೆ.

ಆದರೆ ಶಬಾನಾ ಕಣ್ಣಲ್ಲಿ ಬೆಣಚಕಲ್ಲುಗಳು ಉದುರುವುದು ಇನ್ನು ನಿಂತಿಲ್ಲ. ಇದಕ್ಕೆ ಸೂಕ್ತ ಪರೀಕ್ಷೆ ತಜ್ಞವೈದ್ಯರಿಂದ ನಡೆಯಬೇಕಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಪ್ರಕೃತಿಯ ವಿಚಿತ್ರ ಘಟನೆಗಳಲ್ಲಿ ಇದು ಒಂದು ಎನ್ನುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಹೀಗೆ ಚಿಕ್ಕನಾಯಕನಹಳ್ಳಿ ಹಂದನಕೆರೆಯ ನಿರುವಗಲ್ ಗೊಲ್ಲರಹಟ್ಟಿ ಗ್ರಾಮದ ಪುನೀತ್‌ ಕುಮಾರ್‌ ಎಂಬ ಬಾಲಕನ ಕಣ್ಣಿನಿಂದ ಚಿಕ್ಕ ಗಾತ್ರದ ಕಲ್ಲುಗಳು ಹೊರಬರುತ್ತಿದ್ದವು. ಇದೀಗ ಶಬಾನಾ ಸರದಿ. ಇದಕ್ಕೆಲ್ಲ ಈಗ ವೈದ್ಯರೇ ಉತ್ತರ ಹೇಳಬೇಕಿದೆ.

English summary
Stones are coming out of a girl's eye. The incident came to light in Yaragtti at belgaum district. Every hour, the Stones are coming out of the eye of the girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X