ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಶ್ರೀರಾಮ ಸೇನೆ ನಿಷೇಧಕ್ಕೆ ಚಿಂತನೆ

|
Google Oneindia Kannada News

ಬೆಳಗಾವಿ, ಸೆ. 12 : ವಿವಾದಿತ ಶ್ರೀರಾಮ ಸೇನೆಯನ್ನು ಕರ್ನಾಟಕದಲ್ಲಿ ನಿಷೇಧಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಮೋದ್‌ ಮುತಾಲಿಕ್‌ ನೇತೃತ್ವದ ಶ್ರೀರಾಮ ಸೇನೆ ಸಂಘಟನೆಗೆ ಗೋವಾದಲ್ಲಿ ಈಗಾಗಲೇ ನಿಷೇಧ ಹೇರಲಾಗಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲೂ ಇಂಥ ಚಿಂತನೆ ಮಾಡಬೇಕಾದ್ದು ಅನಿವಾರ್ಯ ಎಂದು ಹೇಳಿದರು.

siddaramayya

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಲಾಗುತ್ತದೆ ಎಂಬ ವದಂತಿಗಳಿಗೆ ಅರ್ಥವಿಲ್ಲ. ಎಂದಿಗೂ ಬೆಂಗಳೂರೇ ಎಂದಿಗೂ ರಾಜಧಾನಿಯಾಗಿರುತ್ತದೆ. ರಾಜ್ಯದ ಎಲ್ಲ ನಗರಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಚಿಕ್ಕೋಡಿಗೆ ಬೆಳವಣಿಗೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.(ಪ್ರೇಮಿಗಳಿಗೆ ಮತ್ತೆ ಮುತಾಲಿಕ್ ಭಯ)

ಬೆಳಗಾವಿಗೆ ನೂತನ ಪೊಲೀಸ್‌ ಕಮೀಷನರ್‌
ಬೆಳಗಾವಿಗೆ ನೂತನ ಪೊಲೀಸ್‌ ಕಮೀಷನರ್‌ ನೇಮಕವಾಗಿದೆ. ಪ್ರಥಮಮ ಪೊಲೀಸ್‌ ಆಯುಕ್ತರಾಗಿ ಭಾಸ್ಕರ್‌ ರಾವ್‌ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗಾವಿ ನಾಗರಿಕರ ಅನೇಕ ದಿನಗಳ ಕನಸು ಈಗ ನನಸಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇದೊಂದು ಮಹತ್ತರ ಮೈಲಿಗಲ್ಲು ಎಂದು ಹೇಳಲಾಗಿದೆ.

English summary
State government thinking to ban Sriram sene which are led by Pramod Mutalik said by CM Siddaramah on thurday in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X