ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 6ರಿಂದ ಬೆಳಗಾವಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

|
Google Oneindia Kannada News

ಬೆಳಗಾವಿ, ಜನವರಿ 25: ಬೆಳಗಾವಿ-ಬೆಂಗಳೂರು ನಡುವೆ ಫೆಬ್ರವರಿ 6ರಿಂದ ಸ್ಟಾರ್ ವಿಮಾನ ಹಾರಾಟ ಆರಂಭಿಸಲಿದೆ ಹಾಗೂ ಹುಬ್ಬಳ್ಳಿ-ದೆಹಲಿ ನಡುವೆ ಏಪ್ರಿಲ್‌ನಲ್ಲಿ ಹಾರಾಟ ಆರಂಭವಾಗಲಿದೆ.

ಶುಕ್ರವಾಎ ಆರಂಭಗೊಂಡಿರುವ ಬೆಂಗಳೂರು-ಹುಬ್ಬಳ್ಳಿ-ತಿರುಪತಿ ಈ ಕುರಿತು ಮಾಹಿತಿ ನೀಡಿರುವ ಸಂಜಯ್ ಘೋಡಾವತ್ ಗ್ರೂಪ್‌ನ ಅಧ್ಯಕ್ಷ ಸಂಜಯ್ ಘೋಡಾವತ್, ಮಾತನಾಡಿ ಬೆಂಗಳೂರು -ಹುಬ್ಬಳ್ಳಿ ನಡುವಿನ ವಿಮಾನಯಾನಕ್ಕೆ 1299 ರೂ, ಹುಬ್ಬಳ್ಳಿ-ತಿರುಪತಿ ಟಿಕೆಟ್ ದರ 2099 ರೂ ಹಾಗೂ ಬೆಂಗಳೂರು-ಬೆಳಗಾವಿ ಟಿಕೆಟ್ ದರ 2,599 ರಿಂದ ಆರಂಭವಾಗಲಿದೆ ಎಂದು ಹೇಳಿದರು.

ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

ಉಡಾನ್ ಯೋಜನೆಯ 3ನೇ ಹಂತದಲ್ಲಿ ಸ್ಟಾರ್ ಏರ್ ದೇಶದ ವಿವಿಧ ನಗರಗಳಿಗೆ ಕಡಿಮೆ ದರದಲ್ಲಿ ವಿಮಾನ ಸೇವೆ ಆರಂಭಿಸುವ ಆಶಯವನ್ನು ಹೊಂದಿದೆ. ಪ್ರಸ್ತುತ ಹುಬ್ಬಳ್ಳಿ-ಬೆಂಗಳೂರು ನಡುವಿನ ಹಾರಾಟಕ್ಕೆ ಮಾತ್ರ ಒಪ್ಪಿಗೆ ಸಿಕ್ಕಿದೆ. ಅಬುದಾಬಿ, ದುಬೈ, ಕುವೈತ್, ಮಸ್ಕತ್ ದೇಶಗಳಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನ ಸೇವೆ ಆರಂಭವಾಗಿದೆ.

Start Air to connect Bengaluru- belagavi from February 6

ಪ್ರತಿ ದಿನ ಬೆಳಗ್ಗೆ 7.35ಕ್ಕೆ ಬೆಂಗಳೂರಿನಿಂದ ಹೊರಡುವ ಸ್ಟಾರ್ ವಿಮಾನವು 8.35ಕ್ಕೆ ಹುಬ್ಬಳ್ಳಿ ತಲುಪಲಿದೆ. ಬೆಳಗ್ಗೆ 8.55ಕ್ಕೆ ಇಲ್ಲಿಂದ ಹೊರಟು 10ಕ್ಕೆ ತಿರುಪತಿ ತಲುಪಲಿದೆ. 10.20ಕ್ಕೆ ಅಲ್ಲಿಂದ ಪುನಃ ಸಂಚಾರ ಆರಂಭಿಸಿ 11.25ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 11.45ಕ್ಕೆ ಹೊರಟು ಮಧ್ಯಾಹ್ನ 12.45ಕ್ಕೆ ಬೆಂಗಳೂರು ತಲುಪಲಿದೆ. ಫೆ. 6ರಂದು 1.25ಕ್ಕೆ ಬೆಂಗಳೂರಿನಿಂದ ಹೊರಟು 2.30 ಬೆಳಗಾವಿ ತಲುಪಲಿದೆ. ಸಂಜೆ 5ಕ್ಕೆ ಬೆಳಗಾವಿಯಿಂದ ಹೊರಟು 6.5ಕ್ಕೆ ಬೆಂಗಳೂರಿಗೆ ಬರಲಿದೆ.

English summary
Star Air received the Air Operators Certificate from the Ministry of Civil Aviation on January 1, 2019. It will operating flights from Bengaluru to Belagavi from February 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X