ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗ್ಪುರ, ಜೋಧ್‌ಪುರಕ್ಕೆ ಬೆಳಗಾವಿಯಿಂದ ವಿಮಾನ ಸಂಚಾರ

|
Google Oneindia Kannada News

ಬೆಳಗಾವಿ, ಫೆಬ್ರವರಿ 12: ಬೆಳಗಾವಿ ವಿಮಾನ ನಿಲ್ದಾಣದಿಂದ ನಾಗ್ಪುರ ಮತ್ತು ಜೋಧ್‌ಪುರಕ್ಕೆ ವಿಮಾನ ಸಂಚಾರ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಬೆಳಗಾವಿ ಹಲವು ನಗರಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸುತ್ತಿದೆ.

ಸ್ಟಾರ್ ಏರ್ ಸಂಸ್ಥೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ನಾಗ್ಪುರ ಮತ್ತು ಜೋಧ್‌ಪುರಕ್ಕೆ ವಿಮಾನ ಸಂಚಾರ ಆರಂಭಿಸುತ್ತಿದೆ. ಫೆಬ್ರವರಿ 16ರಿಂದ ಬೆಳಗಾವಿ-ಜೋಧ್‌ಪುರ ವಿಮಾನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ದೇಶದಲ್ಲಿ 24 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರ ದೇಶದಲ್ಲಿ 24 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರ

Star Air To Connect Jodhpur And Nagpur With Belagavi

ಬೆಳಗಾವಿ-ನಾಗ್ಪುರ ಮತ್ತು ಬೆಳಗಾವಿ-ಜೋಧ್‌ಪುರ ವಿಮಾನಗಳು ವಾರದಲ್ಲಿ ಮೂರು ದಿನಗಳು ಅಂದರೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚಾರ ನಡೆಸಲಿವೆ.

ಫೆಬ್ರವರಿ 16ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸಂಚಾರ ಫೆಬ್ರವರಿ 16ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸಂಚಾರ

ವೇಳಾಪಟ್ಟಿ; ಬೆಳಗಾವಿ-ಜೋಧ್‌ಪುರ ವಿಮಾನ ಫೆಬ್ರವರಿ 16ರಿಂದ ಸಂಚಾರ ನಡೆಸಲಿದೆ. ಬೆಳಗಾವಿಯಿಂದ ಬೆಳಗ್ಗೆ 10 ಗಂಟೆಗೆ ಹೊರಡಲಿರುವ ವಿಮಾನ 12.10ಕ್ಕೆ ಜೋಧ್‌ಪುರ ತಲುಪಲಿದೆ. 12.40ಕ್ಕೆ ಜೋಧ್‌ಪುರದಿಂದ ಹೊರಡಲಿದ್ದು, 2.50ಕ್ಕೆ ಬೆಳಗಾವಿಗೆ ಬರಲಿದೆ.

ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ; ಕೇಂದ್ರಕ್ಕೆ ನೋಟಿಸ್ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ; ಕೇಂದ್ರಕ್ಕೆ ನೋಟಿಸ್

ಬೆಳಗಾವಿ-ನಾಗ್ಪುರ ವಿಮಾನ ಮಾರ್ಚ್ 16ರಿಂದ ಸಂಚಾರವನ್ನು ಆರಂಭಿಸಲಿದೆ. ಮಧ್ಯಾಹ್ನ 3.20ಕ್ಕೆ ಬೆಳಗಾವಿಯಿಂದ ಹೊರಡುವ ವಿಮಾನ ಸಂಜೆ 4.45ಕ್ಕೆ ನಾಗ್ಪುರ ತಲುಪಲಿದೆ. ಸಂಜೆ 5.10ಕ್ಕೆ ಹೊರಟು 6.35ಕ್ಕೆ ಬೆಳಗಾವಿಗೆ ಆಗಮಿಸಲಿದೆ.

English summary
Star air will start flight service from Sambra airport Belagavi to Jodhpur and Nagpur. Flight will run in 3 days in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X