ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌. ಎಸ್. ಎಲ್‌. ಸಿ ಪರೀಕ್ಷೆ; ವಾಟಾಳ್ ನಾಗರಾಜ್ ಹೊಸ ಬೇಡಿಕೆ

|
Google Oneindia Kannada News

ಬೆಳಗಾವಿ, ಜೂನ್ 19 : ಈ ಬಾರಿಯ ಎಸ್‌. ಎಸ್. ಎಲ್. ಸಿ ಪರೀಕ್ಷೆಯನ್ನು ನಡೆಸಬಾರದು ಎಂಬ ಹೋರಾಟವನ್ನು ವಾಟಾಳ್ ನಾಗರಾಜ್ ಮುಂದುವರೆಸಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಹೆಸರಿನಲ್ಲಿ ವಿಮೆ ಮಾಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Recommended Video

ದೇಶಾದ್ಯಂತ ಕೊವಿಡ್ ಪರೀಕ್ಷೆ ಬೆಲೆಯಲ್ಲಿ ಏಕರೂಪತೆ ಇರಲಿ' ಎಂದ ಸುಪ್ರೀಂಕೋರ್ಟ್ | Covid Test | Oneindia Kannada

ಶುಕ್ರವಾರ ಎಸ್. ಎಸ್. ಎಲ್‌. ಸಿ ಪರೀಕ್ಷೆ ನಡೆಸಬಾರದು ಎಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲು ಹೊರಟಿದ್ದ ವಾಟಾಳ್ ನಾಗರಾಜ್‌ರನ್ನು ಪೊಲೀಸರು ವಶಕ್ಕೆ ಪಡೆದರು. ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ಮಾಡಬಾರದು ಎಂದು ಠಾಣೆಗೆ ಕರೆದುಕೊಂಡು ಹೋದರು.

SSLC ಪರೀಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್SSLC ಪರೀಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, "ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಯದಲ್ಲಿಯೇ ಪರೀಕ್ಷೆ ಬರೆದಿದ್ದಾರೆ. ಈಗ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಎಸ್‌. ಎಸ್. ಎಲ್‌. ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಏನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ" ಎಂದರು.

SSLC ಪರೀಕ್ಷೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುವುದೇನು?SSLC ಪರೀಕ್ಷೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುವುದೇನು?

ಕರ್ನಾಟಕ ಸರ್ಕಾರ ಜೂನ್ 25ರಿಂದ ಜುಲೈ 4ರ ತನಕ ಎಸ್‌. ಎಸ್‌. ಎಲ್. ಸಿ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷೆ ತಯಾರಿ ಬಗ್ಗೆ ಸಭೆಗಳನ್ನು ನಡೆಸಿದ್ದಾರೆ. ಪರೀಕ್ಷೆ ನಡೆಸಬಾರದು ಎಂಬ ಒತ್ತಾಯಗಳು ಕೇಳಿ ಬರುತ್ತಲೇ ಇವೆ.

ಎಸ್. ಎಸ್. ಎಲ್‌. ಸಿ ಪರೀಕ್ಷೆ ರದ್ದು ಮಾಡಿ; ಸಚಿವರಿಗೆ ಸಿದ್ದರಾಮಯ್ಯ ಪತ್ರಎಸ್. ಎಸ್. ಎಲ್‌. ಸಿ ಪರೀಕ್ಷೆ ರದ್ದು ಮಾಡಿ; ಸಚಿವರಿಗೆ ಸಿದ್ದರಾಮಯ್ಯ ಪತ್ರ

ವಿಮೆ ಮಾಡಿಸಲು ಆಗ್ರಹ

ವಿಮೆ ಮಾಡಿಸಲು ಆಗ್ರಹ

"ಎಸ್. ಎಸ್. ಎಲ್‌. ಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಹೆಸರಿನಲ್ಲಿ 50 ಲಕ್ಷ, ಪರೀಕ್ಷೆ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳ ಹೆಸರಿನಲ್ಲಿ 25 ಲಕ್ಷ ವಿಮೆ ಮಾಡಿಸಬೇಕು" ಎಂದು ವಾಟಾಳ್ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದರು.

ಸುರೇಶ್ ಕುಮಾರ್ ಮನೆ ಮುಂದೆ ಧರಣಿ

ಸುರೇಶ್ ಕುಮಾರ್ ಮನೆ ಮುಂದೆ ಧರಣಿ

"ಎಸ್. ಎಸ್. ಎಲ್‌. ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಮುಂದೆ ಮತ್ತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದೆ ಜೂನ್ 23ರಂದು ಪ್ರತಿಭಟನೆ ನಡೆಸುತ್ತೇನೆ" ಎಂದು ವಾಟಾಳ್ ನಾಗರಾಜ್ ಘೋಷಣೆ ಮಾಡಿದರು.

ಪರೀಕ್ಷೆ ರದ್ದುಗೊಳಿಸಲು ಒತ್ತಾಯ

ಪರೀಕ್ಷೆ ರದ್ದುಗೊಳಿಸಲು ಒತ್ತಾಯ

ಕೋವಿಡ್ - 19 ಭೀತಿಯ ಹಿನ್ನಲೆಯಲ್ಲಿ ತಮಿಳುನಾಡು, ತೆಲಂಗಾಣ, ಪುದುಚೇರಿ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ. ಕರ್ನಾಟಕದಲ್ಲಿ ಪರೀಕ್ಷೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಜೂನ್ 25ರಿಂದ ಪರೀಕ್ಷೆ

ಜೂನ್ 25ರಿಂದ ಪರೀಕ್ಷೆ

ಎಸ್. ಎಸ್. ಎಲ್‌. ಸಿ ಪರೀಕ್ಷೆ ಮಾರ್ಚ್‌ ತಿಂಗಳಿನಲ್ಲಿ ನಡೆಯಬೇಕಿತ್ತು. ಆದರೆ, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಪರೀಕ್ಷೆ ಮುಂದೂಡಲಾಗಿತ್ತು. ಜೂನ್ 25ರಿಂದ ಪರೀಕ್ಷೆ ನಡೆಯಲಿದ್ದು, 8,48,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

English summary
Karnataka government should keep a deposit of Rs 50 lakh for each student appearing for SSLC examination and Rs 25 lakh for each teacher urged Kannada Chaluvali Vatal Paksha president Vatal Nagaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X