ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ-ಹೈದರಾಬಾದ್‌ ನಡುವೆ ಸ್ಪೈಸ್ ಜೆಟ್ ಹಾರಾಟ ಆರಂಭ

|
Google Oneindia Kannada News

ಬೆಳಗಾವಿ, ಮೇ 02 : ಉಡಾನ್ 3ನೇ ಹಂತದ ಯೋಜನೆಗೆ ಬೆಳಗಾವಿ ಸೇರ್ಪಡೆಗೊಂಡಿದೆ. ಸ್ಪೈಸ್ ಜೆಟ್ ಬೆಳಗಾವಿ-ಹೈದರಾಬಾದ್ ನಡುವೆ ಪ್ರತಿದಿನದ ವಿಮಾನ ಸಂಚಾರವನ್ನು ಆರಂಭಿಸಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಸ್ಪೈಸ್‌ ಜೆಟ್‌ನ ಮೊದಲ ವಿಮಾನ ಮೇ 1ರಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಿಮಾನ ನಿಲ್ದಾಣದ ಅಧಿಕಾರಿಗಳು, ಸ್ಪೈಸ್ ಜೆಟ್ ಸಿಬ್ಬಂದಿ ವಿಮಾನವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ಮಂಗಳೂರು ಸೇರಿದಂತೆ 5 ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಸಂಸ್ಥೆಗೆಮಂಗಳೂರು ಸೇರಿದಂತೆ 5 ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಸಂಸ್ಥೆಗೆ

ಉಡಾನ್ 3ನೇ ಹಂತದ ಯೋಜನೆಗೆ ಬೆಳಗಾವಿಯನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ದೇಶದ ಹಲವು ನಗರಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಸ್ಟಾರ್ ಏರ್ ಸಂಸ್ಥೆ ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಸಂಚಾರ ನಡೆಸುತ್ತಿದೆ.

ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ

SpiceJet launches Belagavi Hyderabad daily flight

ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ಅವರು ಈ ಕುರಿತು ಮಾತನಾಡಿದ್ದು, 'ಇಲ್ಲಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರ ಒತ್ತಾಯದಿಂದಾಗಿ ಬೆಳಗಾವಿ ಉಡಾನ್ ಯೋಜನೆಗೆ ಸೇರಿದೆ' ಎಂದು ಹೇಳಿದರು.

ವೇಳಾಪಟ್ಟಿ : ಸ್ಪೈಸ್ ಜೆಟ್ ಬೆಳಗಾವಿ-ಹೈದರಾಬಾದ್ ನಡುವೆ ಪ್ರತಿದಿನ ವಿಮಾನ ಹಾರಾಟವನ್ನು ನಡೆಸಲಿದೆ. ಹೈದರಾಬಾದ್‌ನಿಂದ ಹೊರಡುವ ವಿಮಾನ ಸಂಜೆ 5.35ಕ್ಕೆ ಬೆಳಗಾವಿಗೆ ಬರುತ್ತದೆ. 5.55ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಹೊರಡಲಿದೆ.

English summary
Belagavi Sambra airport sleeted under Udan 3rd phase project. SpiceJet launched Belagavi-Hyderabad daily flight from May 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X