ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗನ ಶವವನ್ನು ತನ್ನ ಕೈಯಾರೆ ಹೊರ ತೆಗೆದ ತಂದೆಯ ಕರುಣಾಜನಕ ಕತೆ

|
Google Oneindia Kannada News

ಬೈಲಹೊಂಗಲ, ಆಗಸ್ಟ್ 13: ಈ ಜಲ ಪ್ರವಾಹದಲ್ಲಿ ಜೀವ ಕಳೆದುಕೊಂಡವರೆಷ್ಟೋ, ಮನೆ, ಜಮೀನು, ಬೆಳೆ, ಸಂಬಂಧಿಕರು, ತಾವು ಇಷ್ಟಪಟ್ಟು ಸಲಹಿದ ಜಾನುವಾರುಗಳು ನೋಡನೋಡುತ್ತಿದ್ದಂತೆಯೇ ಕಣ್ಮರೆಯಾಗಿವೆ.

ಹಾಗೆಯೇ ಧಾರಾಕಾರ ಮಳೆಗೆ ಮೈದುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ತಂದೆಯೇ ಹೊರಕ್ಕೆ ತಂದು ಕರಣುಜಾನಕ ಕತೆ ಇದು. ಮಗ ಕಳೆದು ಹೋಗಿದ್ದಾನೆ, ದೇವರೇ ಬದುಕಿದ್ದರೆ ಸಾಕಪ್ಪಾ ಎಂದು ಬೇಡಿಕೊಳ್ಳುತ್ತಲೇ ಪೊಲೀಸ್ ಠಾಣೆಗೆ ಕಾಣೆಯಾದ ಮಗನ ಬಗ್ಗೆ ದೂರು ನೀಡಿದ್ದಾರೆ.

ಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತ ಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತ

ಮರುದಿನವೂ ಮಗ ಬಂದಿಲ್ಲ, ಒಂದೆಡೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ, ಮಗ ಬಂದೇ ಬರುತ್ತಾನೆ ಎಂದು ಹೆಂಡತಿಗೆ ಸಮಾಧಾನ ಮಾಡುತ್ತಿದ್ದರೂ ಕಣ್ತುಂಬಿ ಬರುತ್ತಿದೆ. ಎಲ್ಲಿ ಹುಡುಕಿದರೂ ಮಗ ಪತ್ತೆಯಿಲ್ಲ.

Son Dies In Flood Family Mourns

ಮರುದಿನ ಸೋಮವಾರ ಬೆಳಗ್ಗೆ ಮೃತ ಯುವಕನ ಚಿಕ್ಕಪ್ಪ ಈರಪ್ಪ ಹೊಲದ ಕಡೆ ಹೋದ ಸಂದರ್ಭದಲ್ಲಿ ಸಂಗಮೇಶ್ ಕೊಚ್ಚಿಕೊಂಡು ಹೋಗಿದ್ದ ಸ್ಥಳದಿಂದ 200 ಮೀ ದೂರದಲ್ಲಿ ಗಿಡಗಂಟಿಯೊಳಗೆ ಆತನ ಶವ ಸಿಲುಕಿರುವುದು ನೋಡಿದ್ದಾರೆ. ತಕ್ಷಣ ಮನೆಗೆ ದೌಡಾಯಿಸಿ , ತನ್ನ ಅಣ್ಣ ಬಸಪ್ಪನಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಮನೆಗೆ ದೌಡಾಯಿಸಿ ಕೊನೆಗೆ ಶವದ ಮೇಲಿದ್ದ ಬಟ್ಟೆ ಯ ಆಧಾರದ ಮೇಲೆ ಆತ ತಮ್ಮ ಮಗನೇ ಎಂದು ಖಚಿತಪಡಿಸಿಕೊಂಡು ಬಸಪ್ಪ ಹಳ್ಳಕ್ಕೆ ಇಳಿದು ತಾವೇ ಸಾಕಿ ಬೆಳಸಿದ ಕೈಯಿಂದ ಮಗನ ಶವ ಹೊರಕ್ಕೆ ತೆಗೆದಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಈ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶನಿವಾರ ಮೇವು ತರಲು ಹೋಗಿ , ಬೆಳವಡಿ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಸಂಗೊಳ್ಳಿ-ಜಿಡ್ಡಿ ಹಳ್ಳವನ್ನು ದಾಟುವ ವೇಳೆ ಗ್ರಾಮದ ಸಂಗಮೇಶ ಬಸಪ್ಪ ಹುಂಬಿ (22)ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ, ಈ ಸಂಬಂಧ ಯುವಕನ ಕುಟುಂಬಸ್ಥರು ದೊಡವಾಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಭಾರಿ ಮಳೆಯಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ಕೊನೆಗೂ ಮಗ ಸಿಕ್ಕಿದ್ದ ಆದರೆ ಜೀವಂತವಲ್ಲ ಶವವಾಗಿ...

English summary
This is the story of Death of a Son Infront of His Father, Son who washed up in a ditch where torrential rains were flowing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X