ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭ

|
Google Oneindia Kannada News

ಬೆಂಗಳೂರು, ನವೆಂಬರ್ 26 : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಳಗಾವಿಯಿಂದ ವಿದ್ಯುತ್ ಪೂರೈಕೆಯಾಗಲಿದೆ. 70 ಎಕರೆ ಜಾಗದಲ್ಲಿ ಸೋಲಾರ್ ಘಟಕ ನಿರ್ಮಾಣ ಮಾಡಿ, ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಬಾಷ್ ಲಿಮಿಟೆಡ್ ಬೆಳಗಾವಿ ಜಿಲ್ಲೆಯ ಯಾರಗಟ್ಟಿ ಗ್ರಾಮದಲ್ಲಿ ಸೌರ ವಿದ್ಯುತ್ ಘಟಕವನ್ನು ಆರಂಭಿಸಿದೆ. ಈ ಘಟಕದ ಮೂಲಕ 460 ಕಿ.ಮೀ. ದೂರದಲ್ಲಿರುವ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮಾತ್ರ ವಿದ್ಯುತ್ ಪೂರೈಕೆಯಾಗಲಿದೆ.

2 ಉದ್ಯಾನದಲ್ಲಿ ಸೌರ ವಿದ್ಯುತ್ ಉತ್ಪಾದನೆ ಆರಂಭಿಸಿದ ಬಿಬಿಎಂಪಿ2 ಉದ್ಯಾನದಲ್ಲಿ ಸೌರ ವಿದ್ಯುತ್ ಉತ್ಪಾದನೆ ಆರಂಭಿಸಿದ ಬಿಬಿಎಂಪಿ

70 ಎಕರೆ ಪ್ರದೇಶದಲ್ಲಿ ಘಟಕ ನಿರ್ಮಾಣ ಮಾಡಲಾಗಿದ್ದು, 14.4 ಮೆಗಾವಾಟ್ ವಿದ್ಯುತ್‌ ಅನ್ನು ಪೂರೈಕೆ ಮಾಡಲಾಗುತ್ತದೆ. ಕೆಇಎಲ್‌ಗೆ ಮಾತ್ರ ವಿದ್ಯುತ್ ಪೂರೈಕೆ ಮಾಡುವ ರಾಜ್ಯದ 2ನೇ ಘಟಕವಿದಾಗಿದೆ. ಬಾಷ್ ವಿಮಾನ ನಿಲ್ದಾಣದ ಸಮೀಪವೇ 2.94 ಮೆಗಾವಾಟ್ ವಿದ್ಯುತ್ ಪೂರೈಸುವ ಘಟಕವನ್ನು 2017ರಲ್ಲಿಯೇ ಆರಂಭಿಸಿತ್ತು.

ಬೆಳಗಾವಿ : ಜಿಲ್ಲಾ ಆಸ್ಪತ್ರೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆಬೆಳಗಾವಿ : ಜಿಲ್ಲಾ ಆಸ್ಪತ್ರೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ

Solar plant in Belagavi to supply power to KIA, Bengaluru

ಸಂಪ್ರದಾಯಿಕ ವಿದ್ಯುತ್ ಶಕ್ತಿ ಮೇಲಿನ ಅವಲಂಬನೆ ತಪ್ಪಿಸಲು ಸೌರ ಶಕ್ತಿಯ ಮೊರೆ ಹೋಗಲಾಗಿದೆ. 2020ರ ವೇಳೆಗೆ ಶೇ 100ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದದ ಇಂಧನ ಮೂಲಕವೇ ಒದಗಿಸುವ ಗುರಿಯನ್ನು ಹೊಂದಲಾಗಿದೆ.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳುವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು

ಬಾಷ್ ಲಿಮಿಟೆಡ್ ಕೆಇಎಲ್‌ಗೆ ವಿದ್ಯುತ್ ಪೂರೈಕೆ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಅದರ ಭಾಗವಾಗಿ 2 ಘಟಕಗಳನ್ನು ಈಗಾಗಲೇ ಆರಂಭಿಸಲಾಗಿದೆ. 2020ರ ವೇಳಗೆ ಸಂಪೂರ್ಣವಾಗಿ ಸೌರ ವಿದ್ಯುತ್ ಮೂಲಕ ವಿಮಾನ ನಿಲ್ದಾಣಕ್ಕೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.

English summary
Bosch Ltd. inaugurated a solar power project at Belagavi. The plant will supply power to Kempegowda International Airport (KIA) in Bengaluru. Solar unit set-up in 70 acres of land, it will supply 14.4 MW of solar power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X