ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಅಧಿವೇಶನದಲ್ಲಿ ಊಟದ ಖರ್ಚಿಗೆ ಕತ್ತರಿ!

|
Google Oneindia Kannada News

ಬೆಂಗಳೂರು, ನ. 23: ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗುವ ಹತ್ತು ದಿನಗಳ ಚಳಿಗಾಲದ ಅಧಿವೇಶನದದಲ್ಲಿ ಭಾಗವಹಿಸುವವರ ಊಟದ ಮೆನು ಸಿದ್ಧವಾಗಿದೆ. ಕಳೆದ ಅಧಿವೇಶನದಲ್ಲಿ ಊಟೋಚಾರಕ್ಕೆ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಈ ಬಾರಿ ಊಟದ ಖರ್ಚಿಗೆ ಕತ್ತರಿ ಬಿದ್ದಿದೆ.

ನ.25ರ ಸೋಮವಾರದಿಂದ ಆರಂಭವಾಗುವ 10 ದಿನಗಳ ಅಧಿವೇಶನದ ಊಟೋಪಚಾರಕ್ಕೆ ಎರಡು ಕೋಟಿ ರೂ.ನಿಗದಿ ಪಡಿಸಲಾಗಿದೆ. ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆಗೆ ಭೋಜನ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಊಟದ ವ್ಯವಸ್ಥೆಯ ಗುತ್ತಿಗೆಯನ್ನು ಧಾರವಾಡದ ಮಯೂರ್‌ ಕೇಟರರ್ ಗುತ್ತಿಗೆ ಪಡೆದಿದೆ.

assembly session

ಕಳೆದ ಬಾರಿಯ ಅಧಿವೇಶನದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳಿಗಾಗಿ ರಾಗಿ ಮುದ್ದೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಾರಿ ಮುದ್ದೆ ಊಟಕ್ಕೆ ತಡೆ ನೀಡಲಾಗಿದೆ. ದಿನವೊಂದಕ್ಕೆ ಮೂರು ಸಿಹಿಗಳನ್ನು ಕಳೆದ ಬಾರಿ ನೀಡಲಾಗಿತ್ತು, ಈ ಬಾರಿ ಅದನ್ನು ಒಂದಕ್ಕೆ ಮಿಸಲಿಡಲಾಗಿದೆ. ದಿನಕ್ಕೊಂದು ಸಿಹಿ ತಿಂಡಿಯನ್ನು ಅಧಿವೇಶನದಲ್ಲಿ ಭಾಗವಹಿಸಿದವರಿಗೆ ನೀಡಲಾಗುತ್ತದೆ.

ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು, ಮಾರ್ಷಲ್‌ಗ‌ಳು, ಮಾಧ್ಯಮದವರು, ಇತರ ಸಿಬ್ಬಂದಿ ಸೇರಿ ಪ್ರತಿದಿನ ಸುಮಾರು ಮೂರು ಸಾವಿರ ಜನರು ಭೋಜನ ಸವಿಯಲಿದ್ದಾರೆ. ಒಂದು ಊಟಕ್ಕೆ 300 ರಿಂದ 350 ರೂ. ವೆಚ್ಚವಾಗಲಿದೆ. ಪೊಲೀಸರು, ಚಾಲಕರಿಗೆ ಸೌಧದಲ್ಲಿಯೇ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.

ಊಟದ ಮೆನು : ರೊಟ್ಟಿ, ಚಪಾತಿ, ಎಣ್ಣೆಗಾಯಿ, ಭಾಜಿ, ಕಾಳಿನ ಪಲ್ಲೆ, ಸಾಂಬಾರು, ಚಟ್ನಿ, ಪುಟಾಣಿ ಚಟ್ನಿ, ಸಿಹಿ, ಬಿಳಿ ಅನ್ನ, ಮಸಾಲೆ ಅನ್ನ, ಮಜ್ಜಿಗೆ, ಮಣ್ಣಿನ ಗಡಿಗೆಯಲ್ಲಿ ಕೆನೆ ಮೊಸರು, ಹಣ್ಣು, ಬಾಳೆಹಣ್ಣು, ಪಾನ್‌ಬೀಡಾ ನೀಡಲಾಗುತ್ತಿದೆ. ಧಾರವಾಡ ಪೇಡ, ಗೋಕಾಕ ಕರದಂಟು, ಗೋದಿ ಹುಗ್ಗಿ, ಬುಂದಿ ಲಾಡುಗಳನ್ನು ಪ್ರತಿದಿನ ಒಂದರಂತೆ ನೀಡಲು ಸಿದ್ಧತೆ ನಡೆದಿದೆ.

ಬೆಂಗಳೂರು ವಿಧಾನಸೌಧದದಲ್ಲಿನ ಊಟದ ವ್ಯವಸ್ಥೆಯಂತೆ, ಮೇಲ್ಮನೆ ಹಾಗೂ ಕೆಳಮನೆಯವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಶಾಸಕರು, ಸಚಿವರಿಗೆ ಬ್ಯಾಂಕ್ವೆಟ್‌ ಹಾಲ್‌ನಲ್ಲಿ, ಮಾಧ್ಯಮದವರು, ಅಧಿಕಾರಿಗಳಿಗೆ ನೆಲ ಮಹಡಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸೌಧದ ಹೊರಗಡೆ ಎರಡು ಕಡೆಗಳಲ್ಲಿ ಕ್ಯಾಂಟೀನ್‌ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

English summary
The legislature session in Belgaum, scheduled to start on November 25, could turn out to be spicy hot. Food will not be as fiery with the state government intent on keeping its menu healthy and simple. As many as 295 legislators will have to be fed during the ten-day session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X