ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ತೇಜಸ್ವಿ ಸೂರ್ಯ ಒಬ್ಬ ಅಪ್ರಬುದ್ಧ ರಾಜಕಾರಣಿ, ಸಂವಿಧಾನ ಪಾಠ ಓದಲಿ"; ಸಿದ್ದು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 24: ರಾಜ್ಯಕ್ಕೆ ಕೇಂದ್ರದ ನೆರವಿನ ಅಗತ್ಯವಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ತೇಜಸ್ವಿಸೂರ್ಯ ಇಮೆಚ್ಯೂರ್ಡ್ ಪಾಲಿಟಿಷಿಯನ್, ಅವನು ಎಲ್ಲಾದ್ರೂ ಸಿಕ್ರೆ ಸಂವಿಧಾನ ಓದ್ಕೊಳ್ಳೋಕೆ ಹೇಳಿ" ಎಂದು ವ್ಯಂಗ್ಯ ಮಾಡಿದ್ದಾರೆ.

ನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

ಬೆಳಗಾವಿಯಲ್ಲಿ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಬೆಳಗಾವಿಯ ರಾಯಣ್ಣ ಸರ್ಕಲ್ ಬಳಿ ಇರುವ ಕಾಂಗ್ರೆಸ್ ಕಚೇರಿಯತ್ತ ಕೈ ಕಾರ್ಯಕರ್ತರ ದಂಡು ಸೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

Siddaramaiah Spoke About Tejasvi Surya In Belagavi Protest

ಸಂಸದ ತೇಜಸ್ವಿ ಸೂರ್ಯಗೆ ಮುಖ್ಯಮಂತ್ರಿ ಯಡಿಯೂರಪ್ಪ 'ಕ್ಲಾಸ್' ಸಂಸದ ತೇಜಸ್ವಿ ಸೂರ್ಯಗೆ ಮುಖ್ಯಮಂತ್ರಿ ಯಡಿಯೂರಪ್ಪ 'ಕ್ಲಾಸ್'

ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ""ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ. ಮೋದಿ, ಶಾ ಮುಂದೆ ನಿಂತು ಮಾತಾಡೋ ಧೈರ್ಯ ಇಲ್ಲ. ಯಡಿಯೂರಪ್ಪ ನೋಡಿದ್ರೆ ಅಯ್ಯೋ ಪಾಪ ಅನ್ನಿಸ್ತಿದೆ. ಯಡಿಯೂರಪ್ಪ ದೆಹಲಿಗೆ ಹೋದರೆ ಮೋದಿ ಭೇಟಿಯಾಗಲ್ಲ, ಶಾ ಭೇಟಿಯಾಗಲ್ಲ. ಮೋದಿಗೆ ಕರ್ನಾಟಕದ ಬಗ್ಗೆ ಯಾಕೆ ಇಂಥ ನಿರ್ಲಕ್ಷ್ಯ" ಎಂದು ಪ್ರಶ್ನಿಸಿದರು.

English summary
Former CM Siddaramaiah, responding to MP Tejaswi Surya's statement that the state does not need central assistance, has said that, "Tejasvi surya is immatured politician, he need to read constitution".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X