ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾಜಿ ಮೂಲ ಕನ್ನಡ; ಡಿಸಿಎಂ ಗೋವಿಂದ ಕಾರಜೋಳ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 31; "ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ" ಎಂದು ಹೇಳಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದರು.

ಭಾನುವಾರ ಬೆಳಗಾವಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, "ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿರುವುದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್ ಪಕ್ಷದವರು ಯಾವಾಗ ಅವರನ್ನು ಕಿತ್ತುಹಾಕುತ್ತಾರೆ ಎಂಬ ಭಯ ಉದ್ಭವ್ ಠಾಕ್ರೆಗಿದೆ. ಖುರ್ಚಿ ಉಳಿಸಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ" ಎಂದರು.

ಗಡಿ ವಿವಾದ ಕೆದಕಿದ ಠಾಕ್ರೆ; ಕಾಂಗ್ರೆಸ್‌ನತ್ತ ಕೈ ತೋರಿಸಿದ ಸಿಟಿ ರವಿ ಗಡಿ ವಿವಾದ ಕೆದಕಿದ ಠಾಕ್ರೆ; ಕಾಂಗ್ರೆಸ್‌ನತ್ತ ಕೈ ತೋರಿಸಿದ ಸಿಟಿ ರವಿ

"ಉದ್ಭವ್ ಠಾಕ್ರೆ ಇತಿಹಾಸ ಓದಿಲ್ಲ ಎಂದು ತಿಳಿದುಕೊಂಡಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ. ಶಿವಾಜಿ ಮಹಾರಾಜರ ಮೂಲಪುರುಷ ಬೆಳ್ಳಿಯಪ್ಪ ಗದಗ ಜಿಲ್ಲೆಯ ಸೊರಟೂರಿನವರು. ಬರ ಬಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಬೆಳ್ಳಿಯಪ್ಪ ಗುಳೆ ಹೋಗಿದ್ದರು" ಎಂದು ವಿವರಿಸಿದರು.

ಗಡಿ ವಿವಾದ: 50 ವರ್ಷದ ಹಳೆಯ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾರಾಷ್ಟ್ರ ಗಡಿ ವಿವಾದ: 50 ವರ್ಷದ ಹಳೆಯ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾರಾಷ್ಟ್ರ

 Shivaji Base In Kannada Says Govinda Karajola

"ಗುಳೆ ಹೋದ ಬೆಳ್ಳಿಯಪ್ಪರವರು ಮಹಾರಾಷ್ಟ್ರಕ್ಕೆ ಹೋಗಿ ನೆಲೆಸುತ್ತಾರೆ. ಅವರ ನಾಲ್ಕನೇ ತಲೆಮಾರಿಗೆ ಛತ್ರಪತಿ ಶಿವಾಜಿ ಮಹಾರಾಜರು ಬರ್ತಾರೆ. ಶಿವಾಜಿ ಮಹಾರಾಜರ ಮೂಲ ಕನ್ನಡದ ನೆಲ. ಇದನ್ನು ಮಹಾರಾಷ್ಟ್ರ ಸಿಎಂ ಅರ್ಥ ಮಾಡಿಕೊಳ್ಳಬೇಕು" ಎಂದು ತಿಳಿಸಿದರು.

ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೆ ಗೋವಾದಿಂದ ಮಹಾದಾಯಿ ಕ್ಯಾತೆಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೆ ಗೋವಾದಿಂದ ಮಹಾದಾಯಿ ಕ್ಯಾತೆ

"ಕರ್ನಾಟಕದಲ್ಲಿ ಮರಾಠಿಗರು ಮತ್ತು ಕನ್ನಡಿಗರು ಅಣ್ಣತಮ್ಮಂದಿರಂತೆ ಇದ್ದಾರೆ. ಕರ್ನಾಟಕದಲ್ಲಿ ಭಾಷಾ ಸಮಸ್ಯೆ ಇಲ್ಲ. ಉದ್ಭವ್ ಠಾಕ್ರೆ ಖರ್ಚಿಗಾಗಿ ಕುಲಗೇಡಿಸುವ ಕೆಲಸ ಮಾಡಬೇಡಿ" ಎಂದು ಗೋವಿಂದ ಕಾರಜೋಳ ಸಲಹೆ ನೀಡಿದರು.

ಸರ್ಕಾರ ನಿಭಾಯಿಸಲಿದೆ; ಮಹಾದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ, "ಯಾರೂ ಯಾರ ಮಾತು ಕೇಳಬೇಕಾಗಿಲ್ಲ, ನಾವು ಯಾರ ಮಾತು ಕೇಳಬೇಕಾಗಿಲ್ಲ. ನೆಲ, ಜಲ ಪ್ರಶ್ನೆ ಬಂದಾಗ ನಾವು ನಮ್ಮ ನೆಲ-ಜಲ ಪರವಾಗಿ ಇರುತ್ತೇವೆ. ಸರ್ಕಾರ ಅದನ್ನು ನಿಭಾಯಿಸುತ್ತದೆ" ಎಂದರು.

ಹೋರಾಟ ಕೈ ಬಿಡಿ; "ಹೋರಾಟ ಕೈ ಬಿಡಿ‌ ಎಂದು ರೈತರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕಾನೂನು ಒಪ್ಪಿಕೊಳ್ಳಿ, ರೈತರ ಹಿತಾಸಕ್ತಿಗೆ ವಿರುದ್ಧವಾದರೆ ಕಾನೂನು ಬದಲಾಯಿಸಲು ಅವಕಾಶವಿದೆ. ನಾವು ಈ ಹಿಂದೆ ಅನೇಕ ಬಾರಿ ಕಾನೂನು ಬದಲಾಯಿಸಿದ್ದೇವೆ. ದೆಹಲಿಯಲ್ಲಿ ರೈತರು ಮೊಂಡತನದ ಹೋರಾಟ ಬಿಡಬೇಕು" ಎಂದು ಅವರು ತಿಳಿಸಿದರು.

English summary
Chhatrapati Shivaji base in Karnataka, Kannada said deputy chief minister of Karnataka Govinda Karajola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X