• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ ಸುವರ್ಣಸೌಧಕ್ಕೆ ಮತ್ತೆ 40 ಕೋಟಿ ವೆಚ್ಚ

|

ಬೆಳಗಾವಿ, ಅ.10 : ಕರ್ನಾಟಕದ ಎರಡನೇ ಶಕ್ತಿ ಸೌಧ ಬೆಳಗಾವಿಯ ಸುರ್ವಣ ಸೌಧದ ನಿರ್ವಹಣೆ ಬಗ್ಗೆ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೂ, ಲೋಕೋಪಯೋಗಿ ಇಲಾಖೆ ಸೌಧದ ರಕ್ಷಣೆಗಾಗಿ 40 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಿದೆ.

ಸುವರ್ಣ ವಿಧಾನಸೌಧದಲ್ಲಿ ಒಂದು ಬಾರಿ ಮಾತ್ರ ಅಧಿವೇಶನ ನಡೆಸಲಾಗಿದೆ. ಸರ್ಕಾರಿ ಕಚೇರಿಗಳನ್ನು ಸೌಧಕ್ಕೆ ಸ್ಥಳಾಂತರ ಮಾಡುವ ಸರ್ಕಾರದ ನಿರ್ಧಾರ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಲೋಕೋಪಯೋಗಿ ಇಲಾಖೆ ಸುವರ್ಣಸೌಧದ ಮೇಲೆ 40 ಕೋಟಿ ವೆಚ್ಚ ಮಾಡಲು ಮುಂದಾಗಿದೆ.

ಸುವರ್ಣ ವಿಧಾನಸೌಧಕ್ಕೆ ವಿಮಾನ ನಿಲ್ದಾಣದಿಂದ ನೇರವಾದ ರಸ್ತೆ ಸಂಪರ್ಕ ಕಲ್ಪಿಸುವುದು. ಸೌಧದ ಸುತ್ತಲಿನ ಕಬ್ಬಿಣದ ಗ್ರಿಲ್ ಗಳನ್ನು ತೆಗೆದು, ಗೋಡೆ ನಿರ್ಮಾಣ, ಸೌಧದ ನಾಲ್ಕು ದ್ವಾರಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಕೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಇಲಾಖೆ ಸಜ್ಜಾಗಿದೆ.

ಲೋಕೋಪಯೋಗಿ ಇದಕ್ಕಾಗಿ ಸುಮಾರು 40 ಕೋಟಿ ವೆಚ್ಚವಾಗುತ್ತದೆ ಎಂದು ಪ್ರಸ್ತಾವನೆ ರಚಿಸಿ, ಆಡಳಿತ ಮತ್ತು ಸುಧಾರಣಾ ಇಲಾಖೆಗೆ ಸಲ್ಲಿಸಿದೆ. ಆದರೆ, ಇದಕ್ಕೆ ಇನ್ನೂ ಇಲಾಖೆಯಿಂದ ಅನುಮತಿ ದೊರೆತಿಲ್ಲ.

ಪೊಲೀಸ್ ಇಲಾಖೆಯೂ ಲೋಕೋಪ ಇಲಾಖೆಯ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದು, ಇಂತಹ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಸುವರ್ಣ ವಿಧಾನಸೌಧ ಕಟ್ಟಡದ ರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಿದೆ. (ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ)

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಗಡಿನಾಡಿನಲ್ಲಿ ಮರಾಠಿಗರ ಪ್ರಭಾವ ತಪ್ಪಿಸಲು ಸುವರ್ಣ ವಿಧಾನಸೌಧ ನಿರ್ಮಿಸಲಾಯಿತು. ಆದರೆ, ಸದ್ಯ ಈ ಕಟ್ಟಡ ನಿರ್ವಹಣೆ ಮಾಡುವುದೇ ಸರ್ಕಾರದ ಪಾಲಿಗೆ ಬಿಳಿಯಾನೆ ಸಾಕಿದಂತಾಗಿದೆ.

ನವೆಂಬರ್ 25ರಿಂದ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ. ಸರ್ಕಾರ ಅನುಮತಿ ನೀಡಿದರೆ ಸುವರ್ಣ ವಿಧಾನಸೌಧದ ಖರ್ಚುವೆಚ್ಚಗಳಿಗೆ 40 ಕೋಟಿ ಹಣ ಸೇರಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The State Public Works Department (PWD) has proposed to spend an additional Rs 40 crore on tightening security at the Rs 391-crore Suvarna Soudha in Belgaum, the State’s second secretariat. The PWD recently submitted the proposal to the Department of Personnel and Administrative Reforms (DPAR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more