• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ: ನಾಲೆಯಲ್ಲಿ ಕೊಚ್ಚಿಕೊಂಡು ಹೋದ ಯುವಕನಿಗಾಗಿ ಶೋಧ ಕಾರ್ಯ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಆಗಸ್ಟ್ 09: ಶನಿವಾರ ಸಂಜೆ ವೇಳೆಗೆ ಬಳ್ಳಾರಿ ನಾಲಾದಲ್ಲಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಂಬಧಿಸಿದಂತೆ ಇಂದು ಬೆಳಿಗ್ಗೆಯಿಂದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ.

ಡುಮ್ಮ‌ಉರುಬಿನಟ್ಟಿ ಗ್ರಾಮದ ಬಳಿ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಜಲಾವೃತವಾದ ಗದ್ದೆಯಲ್ಲಿ ಮುಳುಗಡೆಯಾದ ಪಂಪ್ ಸೆಟ್ ನೋಡಲು‌ ಹೋಗಿದ್ದ ಯುವಕ, ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು ನೀರಿನ ಸೆಳುವಿಗೆ ಕೊಚ್ಚಿ ಹೋಗಿದ್ದಾನೆ.

ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣೆಗೆ ಪ್ರವಾಹ ಭೀತಿ

18 ವರ್ಷದ ನಾಗರಾಜ್ ಹೆಬ್ಬಳ್ಳಿ ಬಳ್ಳಾರಿ ನಾಲಾದಲ್ಲಿ ಕೊಚ್ಚಿಕೊಂಡು ಹೋಗಿರುವ ಯುವಕನಾಗಿದ್ದು, ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಡುಮ್ಮ ಉರುಬಿನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೊಲದ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ನಾಗರಾಜ್ ಹೆಬ್ಬಳ್ಳಿ ನಾಪತ್ತೆಯಾಗಿದ್ದನು. ಬಳಿಕ ಬಳ್ಳಾರಿ ನಾಲಾ ಬಳಿ ತೆರಳಿದಾಗ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಯುವಕನಿಗಾಗಿ ನಿನ್ನೆ ರಾತ್ರಿಯವರೆಗೂ ಶೋಧ ನಡೆಸಿದ್ದ ಎಸ್‌ಡಿಆರ್ಎಫ್ ಇಂದು ಬೆಳಿಗ್ಗೆ ಕೂಡಾ ಶೋಧ ಕಾರ್ಯಾಚರಣೆ ಮುಂದುವರೆಸಿದೆ.

ಎಸ್‌ಡಿಆರ್ಎಫ್ ತಂಡಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸಾಥ್ ನೀಡಿದ್ದು, ಯುವಕ ನಾಪತ್ತೆಯಾದ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

English summary
The search operation From SDRF team for the young man has begun this morning, who drowned in Belagavi District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X