ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಬಿಸಿಯೂಟದಲ್ಲಿ ಹಲ್ಲಿ, ಮಕ್ಕಳು ಆಸ್ಪತ್ರೆಗೆ ದಾಖಲು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 17: ಶಾಲಾ ಮಕ್ಕಳಿಗೆ ಪೂರೈಸುತ್ತಿದ್ದ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದ್ದು, ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರಕಾರಿ ಶಾಲೆಯಲ್ಲಿ ಮಕ್ಕಳು ಮಂಗಳವಾರ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.

ಮೊದಲು ಒಂದರಿಂದ 3ನೇ ತರಗತಿಯ 83 ಮಕ್ಕಳು ಬಿಸಿಯೂಟ ಸೇವಿಸಿದ್ದರು. ನಂತರ ಇನ್ನಷ್ಟು ಮಕ್ಕಳು ಊಟ ಮಾಡುವಾಗ ಹಲ್ಲಿ ಕಂಡುಬಂದಿತ್ತು. ಈ ವಿಷಯವನ್ನು ತಕ್ಷಣವೇ ಮಕ್ಕಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಈ ಸಮಯದಲ್ಲಿ ಈಗಾಗಲೇ ಊಟ ಸೇವಿಸಿದ್ದ ಎಲ್ಲ ಮಕ್ಕಳಿಗೆ ಉಪ್ಪಿನ ನೀರು ಕೊಟ್ಟು ವಾಂತಿ ಮಾಡಲು ಶಿಕ್ಷಕರು ತಿಳಿಸಿದ್ದಾರೆ.

 ಕೊಪ್ಪಳ: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ ಕೊಪ್ಪಳ: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ

ಮಕ್ಕಳು ಹಲ್ಲಿ ಬಿದ್ದ ಆಹಾರ ಸೇವಿಸಿದ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಪೋಷಕರು ಶಾಲೆಯತ್ತ ದೌಡಾಯಿಸಿದ್ದಾರೆ. ತಕ್ಷಣ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. 83 ವಿದ್ಯಾರ್ಥಿಗಳ ಪೈಕಿ 12 ಮಕ್ಕಳಿಗೆ ಹೊಟ್ಟೆ ನೋವು ಕಂಡು ಬಂದಿದೆ. ಈ ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನುಳಿದ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

school children got sick by consuming food in belagavi

ಸ್ಮಶಾನದಲ್ಲೇ ನಿರ್ಮಾಣವಾದ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹಸ್ಮಶಾನದಲ್ಲೇ ನಿರ್ಮಾಣವಾದ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹ

ಹೊಸ ವಂಟಮೂರಿ ಗ್ರಾಮದ ಸರಕಾರಿ ಶಾಲೆಗೆ ಸರ್ಕಾರೇತರ ಸಂಸ್ಥೆಯೊಂದು ಬಿಸಿಯೂಟ ಪೂರೈಸುತ್ತಿದೆ. ಆಹಾರ ಪೂರೈಸಿದ ಎನ್ ಜಿಒಗೆ ನೋಟಿಸ್ ಜಾರಿ ಮಾಡಲಾಗಿದೆ.

English summary
Lizard found in midday meal of school children in belagavi. Incident happened in vantamoori government school. Children who ate food admitted to district hospital and all are out of danger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X