ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಐರ್ಲೆಂಡ್ ತಂದ ಈ ಕಾನೂನಿನಿಂದ ನನ್ನ ಮಗಳ ಆತ್ಮಕ್ಕೆ ಶಾಂತಿ ದೊರೆಯಿತು'

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 27 : ಐರ್ಲೆಂಡ್ ನಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವಿನ ನಂತರ ಕೊನೆಗೂ ಐರ್ಲೆಂಡ್ ಮಹಿಳೆಯರಿಗೆ ಗರ್ಭಪಾತಕ್ಕೆ ಹಕ್ಕು ನೀಡಲು ಮುಂದಾಗಿದೆ.

ಐರ್ಲೆಂಡ್ ಈ ಕಾನೂನು ತಂದಿರುವುದರಿಂದ ಸವಿತಾ ಆತ್ಮಕ್ಕೆ ಶಾಂತಿ ದೊರಕಿದಂತಾಗಿದೆ. ಈ ಕಾನೂನು ತರಲು ಹೋರಾಟ ನಡೆಸಿದ ಎಲ್ಲ ಐರ್ಲೆಂಡ್ ಜನತೆಗೆ ನನ್ನ ಧನ್ಯವಾದಗಳು ಎಂದು ಸವಿತಾ ಹಾಲಪ್ಪನವರ್ ಅವರ ತಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದುಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದು

ಈ‌ ಕಾನೂನಿಂದ ಭಾರತೀಯರಿಗೆ, ಅದರಲ್ಲೂ ಮಹಿಳಾ ಸಮಾಜಕ್ಕೆ ಜಯ ದೊರೆತಂತಾಗಿದೆ ಎಂದು ಅವರು ಪ್ರಶಂಸಿಸಿದ್ದಾರೆ.

Savita halappanavar mother said my daughters soul get peace

ಗರ್ಭಪಾತ ನಿಷೇಧ ಕಾನೂನು ರದ್ದುಪಡಿಸುವ ಸಂಬಂಧ ಮೂರು ದಿನಗಳಿಂದ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲು ಐರ್ಲೆಂಡ್ ಸರ್ಕಾರ ಮುಂದಾಗಿತ್ತು. ಶನಿವಾರ ರಾತ್ರಿ ವೇಳೆಗೆ ಜನಮತದ ಫಲಿತಾಂಶ ಹೊರಬಂದಿತ್ತು.

ಗರ್ಭಪಾತ ನಿಷೇಧ ಕಾನೂನು ರದ್ದುಪಡಿಸುವಂತೆ ಶೇ. 67.09 ಹಾಗೂ ವಿರೋಧವಾಗಿ ಶೇ.32.91 ಮತಗಳು ಬಂದಿವೆ. ಜನಮತ ಗರ್ಭಪಾತ ನಿಷೇಧ ಕಾನೂನು ರದ್ಧತಿ ಪರವಾಗಿ ಬಂದ ಕಾರಣ, ಐರ್ಲೆಂಡ್ ನಲ್ಲಿ ಗರ್ಭಪಾತ ಶೀಘ್ರವೇ ಕಾನೂನು ಬದ್ಧವಾಗಲಿದೆ.

English summary
Savita halappanavar mother said that Now Ireland bringing this law, my daughter's soul get peace. I thank all the people of Ireland who have fought to bring this law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X