ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಭಕ್ತರಿಗಾಗಿ ಬಾಗಿಲು ತೆರೆದ ಸವದತ್ತಿ ಯಲ್ಲಮ್ಮ ದೇವಸ್ಥಾನ: ಷರತ್ತು ಅನ್ವಯ

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 28: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ಪ್ರಸಿದ್ಧ ರೇಣುಕಾ ಯಲಮ್ಮ ದೇವಾಲಯ ಇಂದಿನಿಂದ (ಸೆ.28, ಮಂಗಳವಾರ) ಭಕ್ತರಿಗೆ ಬಾಗಿಲು ತೆರೆಯಲಿದೆ.

ಕಳೆದ ವರ್ಷದಿಂದ ಮಹಾಮಾರಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಉತ್ತರ ಕರ್ನಾಟಕದ ಪ್ರಮುಖ ದೇವಾಲಯ ಇಂದಿನಿಂದ ಓಪನ್ ಆಗಲಿದ್ದು, ಯಲ್ಲಮ್ಮ ದೇವಿಯ ದರ್ಶನಕ್ಕೆ ಭಕ್ತಗೆ ಅವಕಾಶ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ಭಾರತದಲ್ಲಿ 86.89 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಭಾರತದಲ್ಲಿ 86.89 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ

ಉತ್ತರ ಕರ್ನಾಟಕದ ಶಕ್ತಿಪೀಠವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನ ತೆರೆಯುವುದನ್ನು ಕಾತರದಿಂದ ಕಾಯುತಲಿದ್ದು, ಭಕ್ತರು ದೇವಿಯ ದರ್ಶನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.

Savadatti Yellamma Temple To Open For Devotees From September 28

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸವದತ್ತಿ ಯಲ್ಲಮ್ಮ ದೇವಾಲಯ ಇಂದಿನಿಂದ ತೆರೆಯಲು ಅನುಮತಿ ನೀಡಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಷರತ್ತುಬದ್ಧ ಅನುಮತಿ
ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹೆಚ್ಚಿನ ಜನರು ಸೇರುವ ಉತ್ಸವ, ಜಾತ್ರೆ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಯಲಮ್ಮ ದೇಗುಲದ ಆಡಳಿತ ಮಂಡಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ರೇಣುಕಾ ಯಲ್ಲಮ್ಮ ದೇವಸ್ಥಾನ ಕಳೆದ 18 ತಿಂಗಳಿಂದ ಬಂದ್ ಆಗಿತ್ತು. ಈ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಹೆಚ್ಚು ಭಕ್ತರು ಆಗಮಿಸುವ ಹಿನ್ನಲೆ ಮೊದಲ ಮತ್ತು ಎರಡನೇ ಅಲೆ ಮುಗಿದರೂ ಬಂದ್ ಆಗಿತ್ತು.

ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನಲೆ ದೇವಸ್ಥಾನ ಬಾಗಿಲು ತೆರೆಯಲು ಆದೇಶ ನೀಡಲಾಗಿದೆ. ಇಂದಿನಿಂದ ಭಕ್ತರಿಗೆ ಯಲ್ಲಮ್ಮ ದೇವಿ ದರ್ಶನಕ್ಕೆ ಷರುತ್ತು ಬದ್ಧ ಅನುಮತಿ ನೀಡಿ ಆದೇಶ‌ ಹೊರಡಿಸಲಾಗಿದೆ.

ಸೂಚನೆಗಳು
* ಯಲ್ಲಮ್ಮ ದೇವಿಯ ದರ್ಶನಕ್ಕೆ 28/9/2021ರಿಂದ ಅವಕಾಶವನ್ನು ನೀಡಲಾಗಿದೆ.

*ವಿಶೇಷ ಜನಸಂದಣಿ ಸೇರುವಂತಹ ವಿಶೇಷ ಉತ್ಸವ, ಜಾತ್ರೆ, ಕಾರ್ಯಕ್ರಮಗಳನ್ನು ಮುಂದಿನ ಆದೇಶದ ತನಕ ನಡೆಸುವಂತಿಲ್ಲ.

*ದೇವಿ ದರ್ಶನಕ್ಕೆ ಆಗಮಿಸುವ ಜನರು ಸರತಿ ಸಾಲಿನಲ್ಲಿ ಆಗಮಿಸಬೇಕು.

* ಸಾಮಾಜಿಕ ಅಂತರ ಕಾಪಾಡಬೇಕು. ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ಬಳಕೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು.

* ದೇವಾಲಯದ ಹೊರಭಾಗದಲ್ಲಿ ಜನರ/ ಭಕ್ತಾದಿಗಳ ದೇಹದ ಉಷ್ಣಾಂಶ ಪರಿಶೀಲಿಸಿ, ದೇಹದ ಉಷ್ಣಾಂಶ ಸುಸ್ಥಿತಿಯಲ್ಲಿ ಇರುವವರಿಗೆ ಮಾತ್ರ ಪ್ರವೇಶ ನೀಡಬೇಕು.

* ಪ್ರತಿನಿತ್ಯ ಭಕ್ತಾದಿಗಳ ಜನಜಂಗುಳಿಗೆ ಅವಕಾಶವನ್ನು ನೀಡಬಾರದು ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ವಾಣಿಜ್ಯ ಸಂಕೀರ್ಣಗಳನ್ನು ಹಾಗೂ ಅಂಗಡಿ ಮುಂಗಟ್ಟುಗಳನ್ನು ಆರಂಭಿಸುವಂತಿಲ್ಲ.

* ದೇವಾಲಯದ ಯಾತ್ರಿ ನಿವಾಸ, ಅತಿಥಿ ಗೃಹ, ಕಲ್ಯಾಣ ಮಂಟಪ ಹಾಗೂ ವಸತಿ ಸಂಕೀರ್ಣಗಳನ್ನು ಮುಂದಿನ ಆದೇಶದ ತನಕ ಭಕ್ತಾದಿಗಳಿಗೆ ಒದಗಿಸಬಾರದು.

* ದೇವಾಲಯ ಬಾಗಿಲು ತೆರೆದ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಹೊಸ ಷರತ್ತುಗಳನ್ನು ವಿಧಿಸಲಾಗುತ್ತದೆ.

English summary
Belagavi DC M.G Hiremath allowed people to visit Renuka Yellamma temple of Savadatti from September 28. Temple closed for devotes after the announcement of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X