ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

14 ವಿಮಾನ ನಿಲ್ದಾಣದಲ್ಲಿ ಆಂಬುಲಿಫ್ಟ್‌; ಬೆಳಗಾವಿಗೂ ಬಂತು ನೋಡಿ

|
Google Oneindia Kannada News

ಬೆಳಗಾವಿ, ಏಪ್ರಿಲ್ 13; ಮತ್ತಷ್ಟು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ವಿಮಾನ ನಿಲ್ದಾಣದಲ್ಲಿ ಆಳವಡಿಕೆ ಮಾಡಲಾಗುತ್ತಿದೆ. ದೇಶದ 14 ವಿಮಾನ ನಿಲ್ದಾಣಗಳಲ್ಲಿ ಆಂಬುಲಿಫ್ಟ್‌ ಸೇವೆಗೆ ಬುಧವಾರ ಚಾಲನೆ ನೀಡಲಾಗಿದೆ.

ದೇಶದ 14 ವಿಮಾನ ನಿಲ್ದಾಣಗಳ ಪೈಕಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆಂಬುಲಿಫ್ಟ್‌ ಸೇವೆ ಆರಂಭಿಸಲಾಗಿದೆ. ಅಂಗವಿಕಲರು, ಸ್ಟೇಚ್ಚರ್‌ ಮೂಲಕ ಪ್ರಯಾಣಿಸುವ ಜನರಿಗೆ ಇದು ಅನುಕೂಲವಾಗಲಿದೆ.

ವಿಶ್ವದ ಟಾಪ್ 10 ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿವಿಶ್ವದ ಟಾಪ್ 10 ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ

ಸುಗಮ್ಯ ಭಾರತ ಅಭಿಯಾನದಡಿ ವಿಮಾನ ನಿಲ್ದಾಣ ಪ್ರಾಧಿಕಾರ ದೇಶದ 14 ವಿಮಾನ ನಿಲ್ದಾಣಗಳಲ್ಲಿ ಈ ಸೇವೆಯನ್ನು ಆರಂಭಿಸುತ್ತಿದೆ. ಪ್ರಾಧಿಕಾರ 20 ಆಂಬುಲಿಫ್ಟ್‌ಗಳನ್ನು ತಯಾರು ಮಾಡಿದೆ.

ಹುಬ್ಬಳ್ಳಿ; ಮೇ 1ರಿಂದ ಮಂಗಳೂರು, ಮೈಸೂರಿಗೆ ವಿಮಾನ ಹುಬ್ಬಳ್ಳಿ; ಮೇ 1ರಿಂದ ಮಂಗಳೂರು, ಮೈಸೂರಿಗೆ ವಿಮಾನ

Sambra Airport Get Ambulifts Service To Help Flyers

ಮೇಕ್ ಇನ್ ಇಂಡಿಯಾ ಅಭಿಯಾನದಡಿ ಇವುಗಳನ್ನು ತಯಾರು ಮಾಡಲಾಗಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಈ ಸೇವೆ ಲಭ್ಯವಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.

ಸೇನೆ ಯುದ್ಧ ವಿಮಾನಕ್ಕೆ ಇಂಧನ ತುಂಬಲಿದೆ ಪ್ರಯಾಣಿಕ ವಿಮಾನ! ಸೇನೆ ಯುದ್ಧ ವಿಮಾನಕ್ಕೆ ಇಂಧನ ತುಂಬಲಿದೆ ಪ್ರಯಾಣಿಕ ವಿಮಾನ!

ವಿಮಾನ ನಿಲ್ದಾಣಕ್ಕೆ ಆಗಮಿಸುವ ವೃದ್ಧರು, ಅಂಗವಿಕಲರು, ರೋಗಿಗಳು ವಿಮಾನದ ಮೆಟ್ಟಿಲು ಏರಲು ಕಷ್ಟಪಡುತ್ತಾರೆ. ಅವರಿಗೆ ವಿಮಾನ ಏರಲು ಮತ್ತು ಇಳಿಯಲು ಸಹಾಯಕವಾಗುವಂತೆ ವಿಮಾನ ನಿಲ್ದಾಣ ಪ್ರಾಧಿಕಾರ ಆಂಬುಲಿಫ್ಟ್ ಸೇವೆ ಪರಿಚಯಿಸಿದೆ.

14 ನಿಲ್ದಾಣ; ಬುಧವಾರದಿಂದ ಡೆಹ್ರಡೂನ್, ಗೋರಖ್‌ಪುರ್, ಪಾಟ್ನಾ, ಇಂಪಾಲ್, ವಿಜಯವಾಡ, ಜೋಧ್‌ಪುರ್, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ 14 ವಿಮಾನ ನಿಲ್ದಾಣದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

Sambra Airport Get Ambulifts Service To Help Flyers

ಆಂಬುಲಿಫ್ಟ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇದರದಲ್ಲಿ ವೀಲ್ಹ್ ಚೇರ್, ಕೇರ್ ಟೇಕರ್, ಸ್ಟ್ರೇಚರ್ ಇಡಬಹುದು. ಹೈಡ್ರಾಲಿಕ್ ವ್ಯವಸ್ಥೆ ಹೊಂದಿರುವ ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ.

ಇದರಿಂದಾಗಿ ವಿಮಾನದ ಬಾಗಿಲುಗಳಿಗೆ ಹಾನಿಯಾಗದಂತೆ ಸೆನ್ಸರ್ ಆಳವಡಿಕೆ ಮಾಡಲಾಗಿದೆ. ಅಗ್ನಿ ನಿರೋಧಕ ವ್ಯವಸ್ಥೆಯನ್ನು ಸಹ ಇದು ಒಳಗೊಂಡಿದೆ.

ಏಪ್ರಿಲ್ 16ರಿಂದ ಹೊಸ ವಿಮಾನ; ಬೆಳಗಾವಿ-ನಾಗ್ಪುರ ನಡುವಿನ ವಿಮಾನ ಸೇವೆ ಏಪ್ರಿಲ್ 16ರಂದು ಚಾಲನೆ ದೊರೆಯಲಿದೆ. ಬೆಳಗಾವಿಯಿಂದ ವಾರದಲ್ಲಿ 2 ದಿನ (ಮಂಗಳವಾ, ಶನಿವಾರ) ಈ ವಿಮಾನ ಸಂಚಾರ ನಡೆಸಲಿದೆ.

ಈ ವಿಮಾನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಟು 10.30ಕ್ಕೆ ನಾಗ್ಪುರ ತಲುಪಲಿದೆ. ನಾಗ್ಪುರದಿಂದ ಬೆಳಗ್ಗೆ 10.30ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಬೆಳಗಾವಿಗೆ ತಲುಪಲಿದೆ.

ದೇಶಿಯ ವಿಮಾನ ನಿಲ್ದಾಣವಾಗಿರುವ ಬೆಳಗಾವಿಗೆ ಪ್ರತಿದಿನ ಹಲವು ವಿಮಾನಗಳು ಆಗಮಿಸುತ್ತಿವೆ. ಬೆಳಗಾವಿಯಿಂದ ನಿತ್ಯ ಬೆಂಗಳೂರು, ಮುಂಬೈ, ಗೋವಾ, ದೆಹಲಿ, ತಿರುಪತಿ ಸೇರಿದಂತೆ ವಿವಿಧ ನಗರಗಳಿಗೆ ವಿಮಾನಗಳು ಸಂಚಾರ ನಡೆಸುತ್ತವೆ.

ಬೆಳಗಾವಿ-ನವದೆಹಲಿ ವಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿನಿತ್ಯ ಶೇ 85 ರಿಂದ 90ರಷ್ಟು ಆಸನ ಭರ್ತಿಯಾಗುತ್ತಿದೆ. ಬೇರೆ ವಿಮಾನಯಾನ ಸಂಸ್ಥೆಗಳು ಸಹ ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುವ ನಿರೀಕ್ಷೆ ಇದೆ.

Recommended Video

RCB ಈ ಸಲ ಕಪ್ ಗೆಲ್ಲುತ್ತಾ ಅನ್ನೋ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಕೊಟ್ಟ ಉತ್ತರ ನೋಡಿ | Oneindia Kannada

English summary
14 airports in India get Ambulifts service to help flyers with reduced mobility. In Karnataka Belagavi Sambra airport get this facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X