ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : ಹತ್ತು ದಿನದ ಅಧಿವೇಶನಕ್ಕೆ 14 ಕೋಟಿ ಖರ್ಚು

|
Google Oneindia Kannada News

ಬೆಳಗಾವಿ, ಜೂ. 26 : ನಮ್ಮ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಒಂದು ಹೊತ್ತಿನ ಊಟಕ್ಕಾಗಿ ಎರಡು ಕೋಟಿ ರೂ.ಗಳನ್ನು ಖರ್ಚು ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಹತ್ತು ದಿನಗಳ ಅಧಿವೇಶನದಲ್ಲಿ ಊಟಕ್ಕಾಗಿ ಇಷ್ಟೊಂದು ಖರ್ಚು ಮಾಡಲಾಗಿದೆ.

ಆರ್ ಟಿಐ ಕಾರ್ಯಕರ್ತ ಭೀಮಪ್ಪ ಜಿ.ಗಡಾದ ಅವರು ಕೇಳಿರುವ ಪ್ರಶ್ನೆಗೆ ವಿವಿಧ ಇಲಾಖೆಗಳು ಉತ್ತರ ನೀಡಿದ್ದು, ಬೆಳಗಾವಿಯ ಸುವರ್ಣಸೌಧ­ದಲ್ಲಿ 2013ರ ಡಿಸೆಂಬರ್‌ ನಲ್ಲಿ ನಡೆದ ವಿಧಾನ ಮಂಡಲ ಅಧಿ­ವೇಶನಕ್ಕೆ ಒಟ್ಟು 14.40 ಕೋಟಿ ವೆಚ್ಚವಾ­ಗಿದೆ. ಎಂದು ಮಾಹಿತಿ ನೀಡಲಾಗಿದೆ. ಇದರಲ್ಲಿ ಸಚಿ­ವರು, ಶಾಸಕರು ಮತ್ತು ಅಧಿಕಾ­ರಿ­ಗಳ ಮಧ್ಯಾಹ್ನದ ಊಟಕ್ಕೆ 2.09 ಕೋಟಿ ರೂ.ಗಳನ್ನು ಖರ್ಚಾಗಿದೆ.

Suvarna Soudha

ಶೇ 100ರಷ್ಟು ಹಾಜರಾತಿ ಇರಲಿಲ್ಲ : ಸುವರ್ಣವಿಧಾನಸೌಧದಲ್ಲಿ ಒಟ್ಟು ಹತ್ತು ದಿನಗಳ ಕಾಲ ಕಲಾಪ ನಡೆಸಲಾಗಿದೆ. ಇದರಲ್ಲಿ ವಿಧಾನ ಸಭೆ ಒಟ್ಟು 52 ಗಂಟೆ, ವಿಧಾನ ಪರಿಷತ್ತು 41 ಗಂಟೆಗಳ ಕಾಲ ಕಲಾಪ ನಡೆಸಿವೆ. ಆದರೆ, ವಿಧಾನಸಭೆಯ ಕಲಾಪ ನಡೆದ ಯಾವುದೇ ದಿನ ಶೇ 100ರಷ್ಟು ಹಾಜರಾತಿ ಇರಲಿಲ್ಲ. [ಶಾಸಕರ ಮೇಲ್ಯಾಕೆ ನೂರಾರು ಕೋಟಿ ಖರ್ಚು]

ಅಧಿವೇಶನಕ್ಕೆ ಎರಡು ದಿನ ಮೊದಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂತೋಷ್ ಲಾಡ್, ಶಾಸಕರಾದ ಆನಂದ ಸಿಂಗ್‌, ಟಿ.ಎಚ್‌. ಸುರೇಶ್‌ ಬಾಬು, ವರ್ತೂರು ಪ್ರಕಾಶ್‌ ಮತ್ತು ಸಿ.ಪಿ. ಯೋಗೇಶ್ವರ ಅವರು ಯಾವುದೇ ದಿನ ಕಲಾಪದಲ್ಲಿ ಪಾಲ್ಗೊಂಡಿಲ್ಲ ಎಂದು ಇಲಾಖೆ ನೀಡಿರುವ ಉತ್ತರದಿಂತ ತಿಳಿದುಬಂದಿದೆ.

ಹತ್ತು ದಿನದ ಅಧಿವೇಶನದ ಖರ್ಚಿನ ವಿವರ ಹೀಗಿದೆ
ಸಚಿವರು, ಶಾಸಕರು, ಅಧಿಕಾರಿಗಳ ಮಧ್ಯಾಹ್ನ ಊಟ - 2.09 ಕೋಟಿ
ಪೊಲೀಸ್ ಸಿಬ್ಬಂದಿ ಊಟ - 1.08 ಕೋಟಿ
ವಾಹನಗಳ ಇಂಧನಕ್ಕೆ - 97.41 ಲಕ್ಷ
ಗಣ್ಯರು, ಅಧಿಕಾರಿಗಳು, ಸಿಬ್ಬಂದಿ ವಸತಿ ಮತ್ತು ರಾತ್ರಿ ಊಟ -3.33 ಕೋಟಿ
ಶಾಸಕರ ವಿವಿಧ ಭತ್ಯೆ -17.20 ಲಕ್ಷ
ಪರಿಷತ್ ಸದಸ್ಯರ ವಿವಿಧ ಭತ್ಯೆ -17.20 ಲಕ್ಷ
ವಿಧಾನಸಭೆ ಸಚಿವಾಲಯದ ಸಿಬ್ಬಂದಿ ಭತ್ಯೆ -32.69 ಲಕ್ಷ
ಪರಿಷತ್ ಸಚಿವಾಲಯದ ಭತ್ಯೆ - 96 ಸಾವಿರ
ಶಾಸಸಕರ ಭವನದ ಸಿಬ್ಬಂದಿ ಭತ್ಯೆ - 13.93 ಲಕ್ಷ

English summary
Right to Information Act (RTI) activist Bhemappa received information that, Karnataka government spend Rs 14.40 for the winter session of the Legislature at the Suvarna Vidhana Soudha in Belgaum that will held in December 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X