ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ರಕರ್ತ ರವಿ ಬೆಳಗೆರೆ ವಕೀಲರ ವಾದ ಮಂಡನೆಗೆ ಸಿಗದ ಅವಕಾಶ

|
Google Oneindia Kannada News

ಬೆಳಗಾವಿ, ನವೆಂಬರ್ 20: ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರ್ ವಾರಪತ್ರಿಕೆ ಸಂಪಾದಕ ಹಾಗೂ ಪತ್ರಕರ್ತ ರವಿ ಬೆಳಗೆರೆ ಪರ ವಕೀಲ ಶಂಕರಪ್ಪ ಅವರಿಗೆ ವಾದ ಮಂಡಿಸಲು ಸೋಮವಾರ ಬೆಳಗಾವಿ ಅಧಿವೇಶನದಲ್ಲಿ ಅವಕಾಶ ನೀಡಿಲ್ಲ.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗೆರೆ ಅವರಿಗೆ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿತ್ತು. ಈ ತೀರ್ಮಾನದ ವಿರುದ್ಧ ಹೈ ಕೋರ್ಟ್ ಅವರು ಮೆಟ್ಟಿಲೇರಿದ್ದರು. ಶಿಕ್ಷೆ ವಿರುದ್ಧ ಪುನರ್ ಪರಿಶೀಲನೆ ಸಲ್ಲಿಸಲು ಹಾಗೂ ಆ ಬಗ್ಗೆ ಸದನ ತೀರ್ಮಾನ ತೆಗೆದುಕೊಳ್ಳಲು ಕೋರ್ಟ್ ಸೂಚನೆ ನೀಡಿತ್ತು.

Ravi Belagere lawyer not allowed to argument in assembly session

ಪತ್ರಕರ್ತ ರವಿಬೆಳಗೆರೆಗೆ ಒಂದು ವರ್ಷ ಜೈಲು: ಕೋಳಿವಾಡ ಆದೇಶಪತ್ರಕರ್ತ ರವಿಬೆಳಗೆರೆಗೆ ಒಂದು ವರ್ಷ ಜೈಲು: ಕೋಳಿವಾಡ ಆದೇಶ

ಆದರೆ, ಈ ಮಧ್ಯೆ ರವಿ ಬೆಳಗೆರೆ ಪರ ವಕೀಲ ಶಂಕರಪ್ಪ ಅವರು ಸದನದಲ್ಲಿ ವಾದ ಮಂಡಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಅವಕಾಶ ಕೊಡದ ಸ್ಪೀಕರ್ ಕೆ.ಬಿ.ಕೋಳಿವಾಡ, ಈಗಾಗಲೇ ರವಿ ಬೆಳಗರೆ ಬೆಂಗಳೂರಿನಲ್ಲಿ ಕಚೇರಿಗೆ ಆಗಮಿಸಿ ತೀರ್ಪು ಪುನರ್ ಪರಿಶೀಲನೆಗೆ ಅರ್ಜಿ ಹಾಕಿದ್ದಾರೆ. ತೀರ್ಪು ಪರಿಶೀಲನೆ ಬಗ್ಗೆ ಸದನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

English summary
Hai Bangalore weekly editor and journalist Ravi Belagere's lawyer Shankarappa was not allowed to present their argument in Belagavi assembly session. Ravi Belagere lawyer file an review application against privilege committee decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X