ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರದಲ್ಲಿ ಬಹಿರಂಗಗೊಂಡ ಹಳೇ ವಿಚಾರ

|
Google Oneindia Kannada News

ಬೆಳಗಾವಿ, ಜುಲೈ 7: ಬೆಳಗಾವಿ ರಾಜಕಾರಣದ ಪ್ರಭಾವೀ ಮುಖಂಡರಾಗಿರುವ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಕ್ಸಮರದ ನಡುವೆ, ಎರಡು ವರ್ಷದ ಹಿಂದಿನ ಸತ್ಯವೊಂದು ಬಹಿರಂಗಗೊಂಡಿದೆ.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

"ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅವರು (ಲಕ್ಷ್ಮೀ ಹೆಬ್ಬಾಳ್ಕರ್) ತಮ್ಮ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು, ಅವರ ದುಡ್ಡಿನಿಂದಲ್ಲ. ಅದಕ್ಕೆ ದುಡ್ಡು ಕೊಟ್ಟಿದ್ದು ನಾನು"ಎನ್ನುವ ಮೂಲಕ, ರಮೇಶ್ ಜಾರಕಿಹೊಳಿ ಹಳೇ ವಿಚಾರವನ್ನು ಕೆದಕಿದ್ದಾರೆ.

ಡಿಕೆಶಿ ಪದಗ್ರಹಣ: ಟಿವಿಯಲ್ಲಿ 10ಲಕ್ಷ ಜನರನ್ನು ಸೇರಿಸುವುದು ತಾಕತ್ ಅಲ್ಲಡಿಕೆಶಿ ಪದಗ್ರಹಣ: ಟಿವಿಯಲ್ಲಿ 10ಲಕ್ಷ ಜನರನ್ನು ಸೇರಿಸುವುದು ತಾಕತ್ ಅಲ್ಲ

"ಕಳೆದ ಚುನಾವಣೆಯಲ್ಲಿ ನಾನು ಅನ್ಯಾಯ ಮಾಡಿದ್ದೆ. ನಾನು ಕಾಂಗ್ರೆಸ್ಸಿನಲ್ಲಿ ಇದ್ದಿದ್ದರಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಪ್ರಚಾರ ಮಾಡಬೇಕಾಯಿತು. ಹಾಗಾಗಿ, ಅವರು, ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಜಯ ಸಾಧಿಸಿದರು" ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Ramesh Jarkiholi And Lakshmi Hebbalkar War Of Words Over DCC Bank Election

"ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ದುಡ್ಡು ಹಂಚುತ್ತಿರುವ ವಿಚಾರ ಗೊತ್ತಾಗಿದೆ. ನಾನು ಅವರಿಗಿಂತ ಎರಡು ಪಟ್ಟು ದುಡ್ಡು ಹಂಚಬಲ್ಲೆ"ಎಂದು ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಕಿಡಿಕಾರಿದರು.

"ಹತ್ತು ಲಕ್ಷ ಜನರನ್ನು ಸೇರಿಸಿ ತಾಕತ್ ಪ್ರದರ್ಶಿಸಬೇಕಿತ್ತು. ಟಿವಿಯಲ್ಲಿ ಲಕ್ಷ ಲಕ್ಷ ಜನ ನೋಡುತ್ತಾರೆಂದರೆ, ಅದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ"ಎಂದು, ಇತ್ತೀಚೆಗೆ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ವಿರುದ್ದವೂ ಲೇವಡಿ ಮಾಡಿದ್ದರು.

ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ರಮೇಶ್ ಜಾರಕಿಹೊಳಿ ಮನೆ 'ಗೃಹಪ್ರವೇಶ'ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ರಮೇಶ್ ಜಾರಕಿಹೊಳಿ ಮನೆ 'ಗೃಹಪ್ರವೇಶ'

ಈ ಹಿಂದೆ, ಇದೇ, ಡಿಸಿಸಿ ಬ್ಯಾಂಕ್ ಚುನಾವಣೆಯ ವಿಚಾರ, ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಶೀತಲ ಸಮರಕ್ಕೆ ಮೂಲ ಕಾರಣವಾಗಿತ್ತು.

English summary
Ramesh Jarkiholi And Lakshmi Hebbalkar War Of Words Over DCC Bank Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X