ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಉಪ ಚುನಾವಣೆ; ಅಭ್ಯರ್ಥಿ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 27: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ. ದಿನಕ್ಕೊಂದು ಹೆಸರುಗಳು ಕೇಳಿ ಬರುತ್ತಿವೆ. ಚುನಾವಣಾ ಆಯೋಗ ಇನ್ನೂ ಉಪ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಬೇಕಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಉಪ ಚುನಾವಣೆ ಬಗ್ಗೆ ಮತನಾಡಿದ್ದಾರೆ. "ದಿವಗಂತ ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ಕೊಟ್ಟರೇ ಒಳ್ಳೆಯದು ಅಂತಾ ಹೇಳಿದ್ದೇವೆ. ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತೇವೆ" ಎಂದ ಹೇಳಿದ್ದಾರೆ.

ಬೆಳಗಾವಿ ಉಪಚುನಾವಣೆಗೆ ಸುರೇಶ್ ಅಂಗಡಿ ಮಗಳು ಸ್ಪರ್ಧೆ?ಬೆಳಗಾವಿ ಉಪಚುನಾವಣೆಗೆ ಸುರೇಶ್ ಅಂಗಡಿ ಮಗಳು ಸ್ಪರ್ಧೆ?

"ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಅಭ್ಯರ್ಥಿ ಆರಿಸಿ ತರುವ ಕೆಲಸ ಮಾಡುತ್ತೇವೆ. ಶ್ರದ್ಧಾ ಶೆಟ್ಟರ್ ಬಿಜೆಪಿ ಅವರು ಪಕ್ಷದ ಕಾರ್ಯಕರ್ತೆ, ಸುರೇಶ್ ಅಂಗಡಿ ಪುತ್ರಿಯಾಗಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ" ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಬೆಳಗಾವಿ ಪಾಲಿಕೆ ಚುನಾವಣೆ ಕಣಕ್ಕಿಳಿಯಲಿದೆ ಎಐಎಂಐಎಂ ಪಕ್ಷ ಬೆಳಗಾವಿ ಪಾಲಿಕೆ ಚುನಾವಣೆ ಕಣಕ್ಕಿಳಿಯಲಿದೆ ಎಐಎಂಐಎಂ ಪಕ್ಷ

ಸುರೇಶ್ ಅಂಗಡಿ ಅವರ ನಿಧನಿಂದಾಗಿ ಬೆಳಗಾವಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಜಗದೀಶ್ ಶೆಟ್ಟರ್, ಶ್ರದ್ಧಾ ಶೆಟ್ಟರ್, ಪ್ರಮೋದ್ ಮುತಾಲಿಕ್ ಹೀಗೆ ಹಲವಾರು ಹೆಸರುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಬೆಳಗಾವಿ ಲೋಕಸಭಾ ಉಪಚುನಾವಣೆ: ಕಾಂಗ್ರೆಸ್ಸಿನಿಂದ ಎರಡು ಹೆಸರು ಫೈನಲ್ ಬೆಳಗಾವಿ ಲೋಕಸಭಾ ಉಪಚುನಾವಣೆ: ಕಾಂಗ್ರೆಸ್ಸಿನಿಂದ ಎರಡು ಹೆಸರು ಫೈನಲ್

ಯತ್ನಾಳ್ ಹೇಳಿಕೆ ವೈಯಕ್ತಿಕ

ಯತ್ನಾಳ್ ಹೇಳಿಕೆ ವೈಯಕ್ತಿಕ

"ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ವೈಯಕ್ತಿಕವಾದದ್ದು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ

ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ

"ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮುಂದಿನ ಎರಡೂವರೆ ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ" ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ಪಾಲಿಕೆ ಚುನಾವಣೆ

ಬೆಳಗಾವಿ ಪಾಲಿಕೆ ಚುನಾವಣೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, "ಬೆಳಗಾವಿಯ ಸಮಸ್ಯೆ ಬೇರೆ ಇದೆ, ವರಿಷ್ಠರ ಜೊತೆ ಚರ್ಚಿಸಿ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧೆ ಮೇಲೆ ಮಾಡುವುದಾದರೆ ಮಾಡಲಿ ಬಿಡಿ" ಎಂದು ಹೇಳಿದರು.

ಸಂಪುಟ ವಿಸ್ತರಣೆ ವಿಚಾರ

ಸಂಪುಟ ವಿಸ್ತರಣೆ ವಿಚಾರ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಸಂಪುಟ ವಿಸ್ತರಣೆ ಬಗ್ಗೆಯೂ ಮಾತನಾಡಿದರು. "ನಮ್ಮ ಭಾರತ ದೇಶದಲ್ಲಿ ಎಲ್ಲಾ ಧಾರ್ಮಿಕ ಭಾವನೆ ಮೇಲೆ ನಡೆಯುತ್ತದೆ. ಹೀಗಾಗಿ ಕೆಲವೊಂದು ಅಡೆ ತಡೆಗಳು ಬಂದಿವೆ. ಅದನ್ನು ಸಿಎಂ ನೋಡಿಕೊಂಡು ಸರಿಪಡಿಸುತ್ತಾರೆ" ಎಂದರು.

English summary
We request for issue Belagavi lok sabha by election ticket for Suresh Angadi wife. We will work for the candidate who will final from high command said district in-charge minister Ramesh Jarkiholi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X