ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೊಂದಲ ನಿವಾರಣೆ, ರಮೇಶ್ ಎಲ್ಲೂ ಹೋಗಲ್ಲ: ಲಖನ್ ಜಾರಕಿಹೊಳಿ

|
Google Oneindia Kannada News

Recommended Video

ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದ ಲಖನ್ ಜಾರಕಿಹೊಳಿ

ಬೆಳಗಾವಿ, ಏಪ್ರಿಲ್ 26: ಜಾರಕಿಹೊಳಿ ಸಹೋದರರಲ್ಲಿ ಯಾವುದೇ ಗೊಂದಲ ಇಲ್ಲ, ಇದ್ದ ಗೊಂದಲಗಳು ನಿವಾರಣೆ ಆಗಿವೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‌ನಲ್ಲೇ ಉಳಿಯಲಿದ್ದಾರೆ, ಅವರು ನಾವೆಲ್ಲರೂ ಒಟ್ಟಿಗೆ ಸೇರಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದೇವೆ ಪಕ್ಷದ ಕಾರ್ಯಕರ್ತರ ಆಸೆಯೂ ಅದೆ ಎಂದು ಅವರು ಹೇಳಿದರು.

ರಾಜೀನಾಮೆ ಬಗ್ಗೆ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದೇನು? ರಾಜೀನಾಮೆ ಬಗ್ಗೆ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದೇನು?

ನಾವು ಮೂವತ್ತು ವರ್ಷದಿಂದಲೂ ಕಾಂಗ್ರೆಸ್‌ನಲ್ಲಿದ್ದೇವೆ, ನಮ್ಮ ಕುಟುಂಬವೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದೆ. ಅಣ್ಣ-ತಮ್ಮಂದಿರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಸಹಜ ಆದರೆ ಅವು ದೊಡ್ಡವಲ್ಲ ಎಂದು ಅವರು ಹೇಳಿದ್ದಾರೆ.

Ramesh Jarkiholi not leaving congress: Lakhan Jarkiholi

ಕಾಂಗ್ರೆಸ್‌ನಲ್ಲಿಯೇ ಇರುವಂತೆ ನಾವು ರಮೇಶ್ ಅವರಿಗೆ ತಿಳಿಸಿದ್ದೇವೆ, ಕಾಂಗ್ರೆಸ್ ಕಾರ್ಯಕರ್ತರೂ ಸಹ ಅದನ್ನೇ ನಿರೀಕ್ಷಿಸುತ್ತಿದ್ದಾರೆ. ರಮೇಶ್ ಅವರು ಕಾಂಗ್ರೆಸ್‌ನಲ್ಲಿಯೇ ಉಳಿಯಲಿದ್ದಾರೆ ಎಂದು ಲಖನ್ ಅವರು ಹೇಳಿದ್ದಾರೆ.

ಸರ್ಕಾರ ಉರುಳಿಸುವ ಮ್ಯಾಜಿಕ್ ನಂಬರ್ ರಮೇಶ್ ಜಾರಕಿಹೊಳಿ ಬಳಿ ಇಲ್ಲ!ಸರ್ಕಾರ ಉರುಳಿಸುವ ಮ್ಯಾಜಿಕ್ ನಂಬರ್ ರಮೇಶ್ ಜಾರಕಿಹೊಳಿ ಬಳಿ ಇಲ್ಲ!

ನಾವು ಕಾಂಗ್ರೆಸ್‌ನಲ್ಲಿ ಇರಲಿದ್ದೇವೆ, ನಮ್ಮ ನಾಯಕರು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರಾಗಿದ್ದಾರೆ. ಕೆಪಿಸಿಸಿ ನಿಯಮಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಡಿಕೆಶಿ ಯಾವ ಲೆಕ್ಕ, ನಮ್ ರೇಂಜ್ ಏನಿದ್ರೂ ರಾಹುಲ್ ಗಾಂಧಿ: ಜಾರಕಿಹೊಳಿ ಡಿಕೆಶಿ ಯಾವ ಲೆಕ್ಕ, ನಮ್ ರೇಂಜ್ ಏನಿದ್ರೂ ರಾಹುಲ್ ಗಾಂಧಿ: ಜಾರಕಿಹೊಳಿ

ಏಪ್ರಿಲ್ 23ರಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಅತಿ ಶೀಘ್ರದಲ್ಲಿ ಕಾಂಗ್ರೆಸ್‌ಗೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆ ನಂತರ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಪರಸ್ಪರ ವಾಗ್ದಾಳಿಗಳು ಸಹ ತೀವ್ರವಾಗಿಯೇ ನಡೆದಿದ್ದವು.

English summary
Ramesh Jarkiholi is not leaving congress said his brother and congress leader Lakhan Jarkiholi. He also said no problems between Jarkiholi brothers, we will be together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X