• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಾಸಲೀಲೆ'ಯಲ್ಲಿ' ಜಾರಿಬಿದ್ದ ಬೆಳಗಾವಿ ಸಾಹುಕಾರ್: ರಾಜ್ಯದ ಮಾನ ಹರಾಜು

By ಪುಟ್ಟಪ್ಪ, ರಾಣೇಬೆನ್ನೂರು
|

ಬೆಳಗಾವಿ ಸಾಹುಕಾರ್ ಎಂದು ಎಲ್ಲರಿಂದ ಕರೆಸಿಕೊಳ್ಳುತ್ತಿದ್ದ ಹಾಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ "ರಾಸಲೀಲೆ' ಎಂಬ ಕೊಳಕು ಚರಂಡಿಗೆ ಜಾರಿ ಬಿದ್ದಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದುಕೊಂಡು ಇಂತಹ ಹೀನ ಕೃತ್ಯ ಮಾಡಿರುವುದು ರಾಜ್ಯದ ಮಾನವನ್ನು ಹರಾಜು ಹಾಕಿದಂತಾಗಿದೆ.

ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಬಹಳ ಪ್ರಭಾವಿಯಾಗಿದೆ. ಶ್ರೀಮಂತ ಮನೆತನದ ರಮೇಶ್ ಜಾರಕಿಹೊಳಿ, ತಾವೇ ತೋಡಿಕೊಂಡ ಬಾವಿಗೆ ಬಿದ್ದು ಒದ್ದಾಡುತ್ತಿದ್ದಾರೆ. ಈಗ ಬಿಡುಗಡೆಯಾಗಿರುವ ಸೆಕ್ಸ್ ಸಿಡಿಯಲ್ಲಿ ಯುವತಿಯೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ಇರುವುದು ಸ್ಪಷ್ಟವಾಗಿದೆ.

'ಸಿಡಿ ಸ್ಫೋಟ': ಈಗ ಎಲ್ಲಿದ್ದಾರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ?

ತನಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಸಿಟ್ಟಿಗೆದ್ದು ಮೈತ್ರಿ ಸರ್ಕಾರವನ್ನೇ ಬೀಳಿಸಿದ್ದ ರಮೇಶ್ ಜಾರಕಿಹೊಳಿ, ಈಗ ತಾವೇ ರಾಸಲೀಲೆ ಸಿಡಿಯಲ್ಲಿ ಬಿದ್ದು, ರಾಜ್ಯದ ಜನರಿಗೆ ಮುಖ ತೋರಿಸದಂತಾಗಿದ್ದಾರೆ. ರಾಸಲೀಲೆ ಬಿಡುಗಡೆಯಾಗುವುದಕ್ಕೂ ಮೊದಲು ಸಚಿವ ರಮೇಶ್ ಜಾರಕಿಹೊಳಿ ಅವರು ಮಹಿಳೆಯೊಂದಿಗೆ ಕರೆ ಮಾಡಿ ಮಾತನಾಡಿರುವುದು ವೈರಲ್ ಆಗಿತ್ತು.

ಮಹಿಳೆಯೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ನಡೆಸಿರುವ ಈ ರಾಸಲೀಲೆ ಒಪ್ಪಿತವಾಗಿತ್ತೋ ಅಥವಾ ಸಚಿವರನ್ನು ಬಲೆಗೆ ಬೀಳಿಸಲು ತಂತ್ರ ರೂಪಿಸಲಾಗಿತ್ತೋ ಎನ್ನುವುದು ಉನ್ನತ ಪೊಲೀಸ್ ತನಿಖೆಯ ನಂತರ ತಿಳಿದು ಬರಲಿದೆ.

ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ತಕ್ಷಣವೇ ಅವರ ರಾಜೀನಾಮೆ ಪಡೆಯಬೇಕೆಂದು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಒಬ್ಬ ಸಚಿವರಾಗಿದ್ದುಕೊಂಡು, ಸಹಾಯ ಕೇಳಿಕೊಂಡು ಬಂದ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ಅದರಲ್ಲೂ ರಾಜ್ಯ ರಾಜಕಾರಣದ ಪ್ರಭಾವಿ ವ್ಯಕ್ತಿಯಾಗಿದ್ದುಕೊಂಡು ಇಂತಹ ಕೀಳುಮಟ್ಟದ ಪ್ರಕರಣಗಳಲ್ಲಿ ಸಿಕ್ಕಿಬಿದ್ದು, ರಾಜ್ಯದ ಮಾನ, ಒಂದು ಪಕ್ಷದ ಗೌರವವನ್ನು ಹಾಳು ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಸಿಡಿ ಬಾಂಬ್ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ

ಈ ರಾಸಲೀಲೆ ಬಿಡುಗಡೆಗೊಂಡ ನಂತರ ನನಗೆ ಹಾಗೂ ಯುವತಿಗೆ ಬೆದರಿಕೆ ಕರೆ ಬರುತ್ತಿವೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಆತ್ಮೀಯರಾಗಿರುವ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ತಕ್ಷಣ ಪಡೆದುಕೊಳ್ಳುತ್ತಾರೋ ಅಥವಾ ಹೈಕಮಾಂಡ್ ಸೂಚನೆಗೆ ಕಾಯುತ್ತಾರೋ ಎನ್ನುವುದನ್ನು ನೋಡಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ರಮೇಶ್ ಜಾರಕಿಹೊಳಿಯದ್ದೇ ಕಾಮಪುರಾಣ ಚಿತ್ರಗಳು, ದೃಶ್ಯಗಳು ಕಂಡುಬರುತ್ತಿದೆ. ಜಾರಕಿಹೊಳಿ ಅವರ ಕಾಮಪುರಾಣದ ಸಿಡಿ ಇದೀಗ ಫುಲ್ ವೈರಲ್ ಆಗಿದೆ. ಫೋಟೋ ಹಾಗೂ ವಿಡಿಯೋ ತುಣುಕುಗಳು ತೀರಾ ಅಶ್ಲೀಲವಾಗಿದ್ದು, ನೋಡಲು ಅನರ್ಹವಾಗಿದೆ. ಪ್ರತಿಯೊಂದು ಚಾನಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿವೆ.

English summary
Ramesh Jarkiholi Sex CD Case: Minister Ramesh Jarkiholi has been involved in a sex scandal that has ruined Karnataka's honor reaction from Puttappa Ranebennur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X