ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಮುಖಂಡರ ಜೊತೆ ರಮೇಶ್ ಜಾರಕಿಹೊಳಿ ತಡರಾತ್ರಿ ಚರ್ಚೆ

|
Google Oneindia Kannada News

Recommended Video

ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ

ಬೆಳಗಾವಿ, ಮೇ 25: ನಿನ್ನೆ (ಮೇ 24) ತಡರಾತ್ರಿ ರಮೇಶ್ ಜಾರಕಿಹೊಳಿ ಅವರು ತಮ್ಮ ನಿವಾಸದಲ್ಲಿ ಉಮೇಶ್ ಜಾಧವ್, ಸಿ.ಪಿ.ಯೋಗೇಶ್ವರ್, ಇನ್ನೂ ಹಲವು ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದರು.

ನಿನ್ನೆ ತಡ ರಾತ್ರಿಯ ವೆರಗೆ ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಬಿಜೆಪಿ ಮುಖಂಡರು ಸಭೆ ನಡೆಸಿದ್ದು, ಅಲ್ಲಿನಿಂದಲೇ ಕಾಂಗ್ರೆಸ್‌ನ ಹಲವು ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದಾರೆ.

ಫಲಿತಾಂಶದ ಹಿಂದಿನ ದಿನವಷ್ಟೆ ದೆಹಲಿಗೆ ತೆರಳಿದ್ದ ಅತೃಪ್ತ ಕಾಂಗ್ರೆಸ್‌ ಶಾಸಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯ ಹೈಕಮಾಂಡ್ ಅನ್ನು ಭೇಟಿ ಆಗಿದ್ದಾರೆ ಬಂದಿದ್ದಾರೆ.

Ramesh Jarkiholi did late night meeting with BJP leaders

ದೆಹಲಿಗೆ ಹೋಗಿದ್ದ ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ ಬಿಜೆಪಿಗೆ ಬರಲಿರುವ ಕಾಂಗ್ರೆಸ್ ಅತೃಪ್ತರ ಪಟ್ಟಿಯನ್ನು ನೀಡಿದ್ದಾರೆ. ದೆಹಲಿ ಹೈಕಮಾಂಡ್ ರಮೇಶ್ ಅವರ ಪಟ್ಟಿಗೆ ಒಪ್ಪಿಗೆ ನೀಡಿದೆಯಾದರೂ ಇನ್ನಷ್ಟು ದಿನ ಸರ್ಕಾರ ಬೀಳಿಸುವ ಯತ್ನ ಬೇಡವೆಂದು ಹೇಳಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಮೈತ್ರಿ ಪಕ್ಷಗಳಿಗೆ ಭಾರಿ ದೊಡ್ಡ ಆಘಾತವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಕೇವಲ ಒಂದೊಂದು ಸ್ಥಾನಗಳಿಗೆ ಸೀಮಿತವಾಗಿವೆ . ಎರಡೂ ಪಕ್ಷಗಳ ಶಾಸಕರಲ್ಲಿ ಅಸಮಾಧಾನವಿದ್ದು, ಈ ಸಮಯವನ್ನು ತಮ್ಮ ಲಾಭಕ್ಕಾಗಿ ಬದಲಾಯಿಸಿಕೊಳ್ಳಲು ಬಿಜೆಪಿ ಎಲ್ಲ ರೀತಿಯಲ್ಲಿ ಯತ್ನ ನಡೆಸುತ್ತಿದೆ.

ಆದರೆ ಬಿಜೆಪಿ ಹೈಕಮಾಂಡ್ ಈ ಬಗ್ಗೆ ಪೂರ್ಣ ಆಸಕ್ತಿದಾಯಕವಾಗಿಲ್ಲ ಎನ್ನಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ಉರುಳಿಸಲು ಬಿಜೆಪಿ ಮಾಡಿದ ಯತ್ನಗಳು ಋಣಾತ್ಮಕವಾಗಿ ಪರಿಣಮಿಸಿ ಸರ್ಕಾರಕ್ಕೆ ಇನ್ನಷ್ಟು ಬಲ ತುಂಬಿದ್ದವು, ಹಾಗಾಗಿ ರಾಜ್ಯದಲ್ಲಿ ಕಾದು ನೋಡುವ ತಂತ್ರ ಅನುಸರಿಸುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

English summary
Congress dissident MLA Ramesh Jarkiholi did late night meeting with BJP leaders. He also congratulate BJP new MP Umesh Jadhav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X