ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 03: ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸಂಚಲನ ಮೂಡಿಸಿತ್ತು. ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಬುಧವಾರ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿ ಗೋಕಾಕ್‌ನಲ್ಲಿ ಪ್ರತಿಭಟನೆ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ

ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿದ ಅಶೋಕ ಪೂಜಾರಿ ಅವರು, "ರಮೇಶ್ ಜಾರಕಿಹೊಳಿಯವರು ಅದು ಫೇಕ್ ವಿಡಿಯೋ ಎಂದು ಹೇಳುತ್ತಿದ್ದಾರೆ, ರಮೇಶ್ ಅವರ ಹೇಳಿಕೆಯನ್ನು ನಂಬಲಾಗದ ಸ್ಥಿತಿಯಲ್ಲಿ ಆ ದೃಶ್ಯಾವಳಿಗವೆ" ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸತ್ಯಕ್ಕೆ ದೂರ ಎಂದ ಶಿವರಾಮ್ ಹೆಬ್ಬಾರ್ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸತ್ಯಕ್ಕೆ ದೂರ ಎಂದ ಶಿವರಾಮ್ ಹೆಬ್ಬಾರ್

Ramesh Jarkiholi CD Row JDS Protest In Gokak

"ಒಂದು ಗಂಡು ಒಂದು ಹೆಣ್ಣು ರೂಮಿನಲ್ಲಿರುವುದನ್ನು ಯಾರಾದರೂ ಸಾಕ್ಷಿ ಹೇಳಲು ಆಗುತ್ತಾ?. ಅದು ನಾಲ್ಕು ಜನರ ಮುಂದೆ ಮಾಡುವಂತಹ ಕೆಲಸವೂ ಅಲ್ಲ, ಅವರಿಬ್ಬರೇ ಇದ್ದಾಗ ಆ ದೃಶ್ಯಾವಳಿಗಳನ್ನು ನಂಬಬೇಕು ಅದನ್ನ ಬಿಟ್ಟು ಯಾರು ಸಾಕ್ಷಿ ಹೇಳುತ್ತಾರೆ?" ಎಂದು ಪ್ರಶ್ನಿಸಿದರು.

 ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ; ಹನಿಟ್ರ್ಯಾಪ್ ಶಂಕೆ ವ್ಯಕ್ತಪಡಿಸಿದ ಡಿಸಿಎಂ ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ; ಹನಿಟ್ರ್ಯಾಪ್ ಶಂಕೆ ವ್ಯಕ್ತಪಡಿಸಿದ ಡಿಸಿಎಂ

"ಅದು ಸತ್ಯವೋ ಎಂಬುದು ತನಿಖೆಯಾಗಿ ಬಹಿರಂಗವಾಗಬೇಕಿದೆ. ತನಿಖೆ ಪೂರ್ಣವಾಗಲು ಎರಡರಿಂದ ಮೂರು ವರ್ಷ ಬೇಕು. ಅಂತಹ ಒಂದು ಗುರುತರದ ಆರೋಪ ಒಬ್ಬ ಸಚಿವನ ಮೇಲೆ ಬಂದಿದೆ, ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಲಿ" ಎಂದು ಆಗ್ರಹಿಸಿದರು.

ಸಚಿವರ ರಾಜೀನಾಮೆ; ಬುಧವಾರ ಮಧ್ಯಾಹ್ನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದಾರೆ.

English summary
JD(S) leader Ashok Poojari and party activist protest against water resources minister Ramesh Jarakiholi at Gokak, Belagavi. Demanding for minister resignation after CD with a woman in a compromising position goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X