ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ಜಾರಕಿಹೊಳಿಗೆ ಕೋವಿಡ್; ಐಸಿಯುನಲ್ಲಿ ಚಿಕಿತ್ಸೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಏಪ್ರಿಲ್ 5; ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದೆ. ಅವರು ಆಸ್ಪತ್ರೆಗೆ ದಾಖಲಾಗಿರುವ ಕಾರಣ ಸಿಡಿ ಪ್ರಕರಣದ ವಿಚಾರಣೆಗೆ ಸೋಮವಾರ ಗೈರಾಗಿದ್ದಾರೆ.

ಸೋಮವಾರ ಗೋಕಾಕ ತಾಲೂಕು ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ್ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. "ರಮೇಶ್ ಜಾರಕಿಹೊಳಿ ಕಾರು ಚಾಲಕ, ಅಡುಗೆ ಸಿಬ್ಬಂದಿಗೂ ಸೋಂಕು ತಗುಲಿದ್ದು, ಐಸೋಲೇಷನ್‌ನಲ್ಲಿದ್ದಾರೆ" ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರ್‌ಟಿ ನಗರದ ಪಿಜಿಯಲ್ಲಿ ಎಸ್ಐಟಿ ಮಹಜರು ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರ್‌ಟಿ ನಗರದ ಪಿಜಿಯಲ್ಲಿ ಎಸ್ಐಟಿ ಮಹಜರು

"ಗುರುವಾರ ರಾತ್ರಿ ರಮೇಶ್ ಜಾರಕಿಹೊಳಿ ಬೇರೆ ರಾಜ್ಯದ ಟ್ರಾವಲ್ ಹಿಸ್ಟರಿ ಇಂದ ಬಂದಿದ್ದರು. ಭಾನುವಾರ ರಾತ್ರಿ ಅವರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ" ಎಂದು ರವೀಂದ್ರ ಅಂಟಿನ್ ಹೇಳಿದರು.

ಸಿಡಿ ಪ್ರಕರಣದ ಕುರಿತು ನನ್ನನ್ನು ಏನೂ ಕೇಳಬೇಡಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿಡಿ ಪ್ರಕರಣದ ಕುರಿತು ನನ್ನನ್ನು ಏನೂ ಕೇಳಬೇಡಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

Ramesh Jarakiholi Tested Positive For COVID 19

"ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರಿಗೆ ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಕೋವಿಡ್ ವಾರ್ಡ್‌ ಐಸಿಯುನಲ್ಲಿ ಅವರು ಇನ್ನೂ 3-4 ದಿನಗಳ ಕಾಲ ಇರಬೇಕಾಗುತ್ತದೆ" ಎಂದು ರವೀಂದ್ರ ಅಂಟಿನ್ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ವಕೀಲ ಶ್ಯಾಮ್‌ಸುಂದರ್ ಮಹತ್ವದ ಹೇಳಿಕೆರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ವಕೀಲ ಶ್ಯಾಮ್‌ಸುಂದರ್ ಮಹತ್ವದ ಹೇಳಿಕೆ

ramesh

ವಿಚಾರಣೆಗೆ ಬರಬೇಕಿತ್ತು; ಸಿಡಿ ಪ್ರಕರಣದ ತನಿಖೆಗೆ ಶುಕ್ರವಾರ ರಮೇಶ್ ಜಾರಕಿಹೊಳಿ ಹಾಜರಾಗಬೇಕಿತ್ತು. ಆದರೆ, ಜ್ವರದ ಕಾರಣ ಅವರು ಹಾಜರಾಗಿರಲಿಲ್ಲ. ಸೋಮವಾರ ಎಸ್‌ಐಟಿ ಮುಂದೆ ಹಾಜರಾಗಬೇಕಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸುಮಾರು 1 ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ.

English summary
Former minister and BJP leader Ramesh Jarkiholi tested positive for COVID-19. Due to BP and sugar he admitted to hospital in Gogak, Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X