ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಬೆಳಗಾವಿಯಲ್ಲಿ ಮಳೆಗೆ ಕೊಂಚ ಬಿಡುವು | ಪರಿಸ್ಥಿತಿ ಕೊಂಚ ತಹಬದಿಗೆ | Oneindia Kannada

ಬೆಳಗಾವಿ, ಆಗಸ್ಟ್ 12: ಬೆಳಗಾವಿಯಲ್ಲಿ ರುದ್ರರೂಪ ತಾಳಿದ್ದ ಮಳೆ ಇಂದು ಕೊಂಚ ತಗ್ಗಿದಂತಿದೆ. ಮಳೆಯ ಆರ್ಭಟ ಕುಗ್ಗಿದಂತೆ ಕಾಣುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಜನ ಕೊಂಚ ನಿಟ್ಟುಸಿರುಬಿಟ್ಟಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲೆಯ ನೀರಿನ ಮಟ್ಟದಲ್ಲೂ ಭಾರೀ ಇಳಿಕೆ ಕಂಡುಬಂದಿದೆ.

 ಪ್ರವಾಹ: ಉತ್ತರ ಕರ್ನಾಟಕ ಬಳಿಕ ಕರಾವಳಿ ಕರ್ನಾಟಕದತ್ತ ಯಡಿಯೂರಪ್ಪ ಪ್ರವಾಹ: ಉತ್ತರ ಕರ್ನಾಟಕ ಬಳಿಕ ಕರಾವಳಿ ಕರ್ನಾಟಕದತ್ತ ಯಡಿಯೂರಪ್ಪ

ಕಳೆದೊಂದು ವಾರದಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 1ಲಕ್ಷ ಕ್ಯೂಸೆಕ್ಸ್ ಹರಿಸಲಾಗಿದ್ದು, ಇಂದು 37 ಸಾವಿರ ಕ್ಯೂಸೆಕ್ಸ್ ಹೊರಹರಿವು ಇವೆ. ನವೀಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ಒಂದು ವಾರದಿಂದ 80 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗಿದ್ದು, ಇಂದು 11 ಸಾವಿರ ಕ್ಯೂಸೆಕ್ಸ್ ಹೊರಹರಿವು ಇದೆ.

Rainfall Declined In Belagavi

ಮಳೆ ತಗ್ಗಿದ್ದರಿಂದ ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತವಾಗುತ್ತಿವೆ. ಬಹುತೇಕ ಸೇತುವೆಗಳೂ ಸಂಚಾರ ಮುಕ್ತವಾಗಿವೆ. ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಹಲವು ರಸ್ತೆಗಳಲ್ಲಿ ನೀರಿನ ಇಳಿಕೆ ಕಡಿಮೆಯಾಗುತ್ತಿದೆ.

ಪ್ರವಾಹದಿಂದ 10,000 ಕೋಟಿ ಹಾನಿ, ಅಮಿತ್ ಶಾ ಗೆ ರಾಜ್ಯ ವರದಿಪ್ರವಾಹದಿಂದ 10,000 ಕೋಟಿ ಹಾನಿ, ಅಮಿತ್ ಶಾ ಗೆ ರಾಜ್ಯ ವರದಿ

3 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರಿನೊಂದಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ತೀರದಲ್ಲಿ ಮಾತ್ರ ಯಥಾಸ್ಥಿತಿ ಮುಂದುವರಿದಿದೆ.

English summary
Rainfall is declined in Belagavi today. roads, bridges and most of the villages are clearing from water now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X